ಉ.ಕ.ದಲ್ಲಿ ನಿರ್ಮಾಣ; ಸ್ಥಳೀಯರಿಗೆ ಉದ್ಯೋಗ ಕೌಶಲ್ಯ ತರಬೇತಿ ನೀಡಲು ಆಗ್ರಹ ಉತ್ತರಕನ್ನಡ ಜಿಲ್ಲೆಯಲ್ಲಿ ಹೇಳಿಕೊಳ್ಳುವಂಥ ಕೈಗಾರಿಕೆಗಳಿಲ್ಲದ ಹಿನ್ನೆಲೆ ಇಲ್ಲಿನ ವಿದ್ಯಾವಂತ ಯುವಕ, ಯುವತಿಯರು ಉದ್ಯೋಗಕ್ಕಾಗಿ ನೆರೆಯ ಜಿಲ್ಲೆ, ರಾಜ್ಯಗಳಿಗೆ ತೆರಳಬೇಕಾದ ಪರಿಸ್ಥಿತಿಯಿದೆ. ಇದೀಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಯೋಜನೆ ಪ್ರಗತಿಯಲ್ಲಿದ್ದು, ಸೂಕ್ತ ಕೌಶಲ್ಯ ತರಬೇತಿ ನೀಡಿ ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಬೇಕು ಅನ್ನೋ ಒತ್ತಾಯ ಕೇಳಿಬಂದಿದೆ. ಈ ಕುರಿತ ಒಂದು ವರದಿ ಇಲ್ಲಿದೆ. ರಾಜ್ಯದ ಪ್ರವಾಸೋದ್ಯಮದಲ್ಲಿ ಉತ್ತರಕನ್ನಡ( ) ಜಿಲ್ಲೆ ಸಾಕಷ್ಟು ಮುಂದಿದ್ದರೂ, ಉದ್ಯೋಗ ಪೂರೈಕೆ ವಿಚಾರದಲ್ಲಿ ಸಾಕಷ್ಟು ಹಿಂದೆ ಉಳಿದಿದೆ. ದಶಕಗಳಿಂದ ಜಿಲ್ಲೆಯ ವಿದ್ಯಾವಂತ ಯುವಕ-ಯುವತಿಯರಿಗೆ ನಿರುದ್ಯೋಗ() ಸಮಸ್ಯೆ ಕಾಡುತ್ತಿದ್ದು, ಸ್ಥಳೀಯವಾಗಿ ಯಾವುದೇ ಕೈಗಾರಿಕೆಗಳು ಇಲ್ಲದಿರುವುದು ಕೂಡಾ ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು. ಅದರಲ್ಲೂ ಜಿಲ್ಲೆಯ ಗಡಿ ತಾಲೂಕು ಕಾರವಾರದಲ್ಲಿ ದೇಶದ ಪ್ರತಿಷ್ಠಿತ ನೌಕಾನೆಲೆ ಹಾಗೂ ಕೈಗಾ ಅಣುವಿದ್ಯುತ್ ಸ್ಥಾವರ ಯೋಜನೆಗಳಿದ್ದರೂ ಸ್ಥಳೀಯವಾಗಿ ಹೆಚ್ಚಿನವರಿಗೆ ಉದ್ಯೋಗಾವಕಾಶ ಸಿಕ್ಕಿಲ್ಲ. ಈ ಕಾರಣದಿಂದ ಪ್ರತಿನಿತ್ಯ ಇಲ್ಲಿನ ಯುವಕರು ನೆರೆಯ ಗೋವಾ()ಕ್ಕೆ ಉದ್ಯೋಗಕ್ಕಾಗಿ ತೆರಳಬೇಕಾದ ಪರಿಸ್ಥಿತಿಯಿದೆ.ಸದ್ಯ ಕಾರವಾರ() ತಾಲ್ಲೂಕಿನ ಅರಗಾ ಗ್ರಾಮದಲ್ಲಿರುವ ಕದಂಬ ನೌಕಾನೆಲೆಯ ಎರಡನೇಯ ಹಂತದ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ ವಿಮಾನ ನಿಲ್ದಾಣ ಕೂಡಾ ನಿರ್ಮಾಣವಾಗಲಿದೆ. ಇದನ್ನು ನಾಗರಿಕರು ಕೂಡಾ ಬಳಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಯೋಜನೆಯನ್ನು ರೂಪಿಸಲಾಗುತ್ತಿದ್ದು, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದಲ್ಲಿ ಉದ್ದೇಶಿತ ವಿಮಾನ ನಿಲ್ದಾಣ() ರೂಪುಗೊಳ್ಳಲಿದೆ. ಹೀಗಾಗಿ ವಿಮಾನ ನಿಲ್ದಾಣ ಸಂಬಂಧಿತ ಉದ್ಯೋಗಗಳ ಕುರಿತ ಕೌಶಲ್ಯ ತರಬೇತಿಗಳು( ) ಸಿಗುವಂತಾದಲ್ಲಿ ಜಿಲ್ಲೆಯ ಯುವಕರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯಲಿದೆ. ಹೀಗಾಗಿ ಸ್ಥಳೀಯ ಜಿಲ್ಲಾಡಳಿತ ಜಿಲ್ಲೆಯ ವಿದ್ಯಾವಂತ ಯುವಕ- ಯುವತಿಯರಿಗೆ ಅಗತ್ಯ ಮಾಹಿತಿಯನ್ನು ಒದಗಿಸಿಕೊಡುವ ಮೂಲಕ ವಿಮಾನ ನಿಲ್ದಾಣದಲ್ಲಿನ ಉದ್ಯೋಗಗಳಿಗೆ ಪೂರಕವಾದ ತರಬೇತಿಗಳನ್ನು ಪಡೆದುಕೊಳ್ಳಲು ಸಹಕರಿಸಬೇಕು ಅನ್ನೋದು ಸ್ಥಳೀಯರ ಅಭಿಪ್ರಾಯ.ಇನ್ನು ಜಿಲ್ಲೆಯಲ್ಲಿ ಈ ಹಿಂದೆ ನೌಕಾನೆಲೆ ಆರಂಭದಲ್ಲಿ ಸಾವಿರಾರು ಕುಟುಂಬಗಳು ಜಾಗ ನೀಡಿ ನಿರಾಶ್ರಿತರಾಗಿದ್ದರು. ಈ ವೇಳೆ ನಿರಾಶ್ರಿತರಿಗೆ ಪರಿಹಾರದೊಂದಿಗೆ ಕುಟುಂಬದ ಓರ್ವರಿಗೆ ಉದ್ಯೋಗ() ನೀಡುವ ಭರವಸೆಯನ್ನು ನೀಡಲಾಗಿತ್ತಾದರೂ, ಸೂಕ್ತ ಕೌಶಲ್ಯವನ್ನು ಹೊಂದಿರದ ಹಿನ್ನೆಲೆ ಕೆಲವೇ ಕೆಲವರು ಡಿ ಗ್ರೂಪ್ ಉದ್ಯೋಗ ಮಾತ್ರ ಪಡೆದಿದ್ದಾರೆ. ಅದರಲ್ಲೂ ಹೆಚ್ಚಿನವರು ಹೊರಗುತ್ತಿಗೆ ನೌಕರರಾಗಿಯೇ ಕೆಲಸ ಮಾಡುತ್ತಿದ್ದಾರೆ. ಕೈಗಾ ಅಣುವಿದ್ಯುತ್ ಸ್ಥಾವರ ಯೋಜನೆಯಲ್ಲೂ ಇದೇ ಪರಿಸ್ಥಿತಿಯಿದ್ದು, ಸ್ಥಳೀಯರಿಗೆ ಕೆಲಸ ಸಿಕ್ಕಿರುವುದು ಬಹಳಷ್ಟು ಕಡಿಮೆ. 2022: ಕಿರಿಯ ಸಂಶೋಧಕ ಸೇರಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಹೀಗಾಗಿ ಮುಂಬರುವ ಯೋಜನೆಗೆ ಸಂಬಂಧಿಸಿ ಸ್ಥಳೀಯರಿಗೆ ಈಗಲೇ ಸೂಕ್ತ ತರಬೇತಿ ಸಿಗುವಂತಾಗಲಿ ಅನ್ನೋದು ಸ್ಥಳೀಯರ ಅಭಿಪ್ರಾಯ. ಜಿಲ್ಲಾಡಳಿತ ಕೂಡಾ ಈ ಹಿಂದೆಯೇ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿಯನ್ನು ಒದಗಿಸಲು ಯೋಜನೆ ಹಾಕಿಕೊಂಡಿತ್ತಾದರೂ ಸೂಕ್ತ ತರಬೇತುದಾರರು ಸ್ಥಳೀಯವಾಗಿ ಲಭ್ಯರಾಗದ್ದರಿಂದ ಹಿನ್ನಡೆಯುಂಟಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 2022: ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ ಭಾರತೀಯ ವಾಯುಪಡೆ ಅರ್ಜಿ ಆಹ್ವಾನಒಟ್ಟಿನಲ್ಲಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ಯುವಕರಿಗೆ ಸೂಕ್ತ ತರಬೇತಿ ದೊರಕಿದಲ್ಲಿ ಶ್ರೀಘ್ರದಲ್ಲಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣ ಯೋಜನೆಯಲ್ಲಿ ಉದ್ಯೋಗ ದೊರಯಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೌಶಲ್ಯ ತರಬೇತಿ ಒದಗಿಸುವ ಮೂಲಕ ನಿರುದ್ಯೋಗಿ ಯುವಕರಿಗೆ ನೆರವಾದಲ್ಲಿ ಜಿಲ್ಲೆ ಮತ್ತಷ್ಟು ಅಭಿವೃದ್ಧಿಯಾಗಲಿದೆ. ರಾಜ್ಯದ ಪ್ರವಾಸೋದ್ಯಮದಲ್ಲಿ ಉತ್ತರಕನ್ನಡ( ) ಜಿಲ್ಲೆ ಸಾಕಷ್ಟು ಮುಂದಿದ್ದರೂ, ಉದ್ಯೋಗ ಪೂರೈಕೆ ವಿಚಾರದಲ್ಲಿ ಸಾಕಷ್ಟು ಹಿಂದೆ ಉಳಿದಿದೆ. ದಶಕಗಳಿಂದ ಜಿಲ್ಲೆಯ ವಿದ್ಯಾವಂತ ಯುವಕ-ಯುವತಿಯರಿಗೆ ನಿರುದ್ಯೋಗ() ಸಮಸ್ಯೆ ಕಾಡುತ್ತಿದ್ದು, ಸ್ಥಳೀಯವಾಗಿ ಯಾವುದೇ ಕೈಗಾರಿಕೆಗಳು ಇಲ್ಲದಿರುವುದು ಕೂಡಾ ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು. ಅದರಲ್ಲೂ ಜಿಲ್ಲೆಯ ಗಡಿ ತಾಲೂಕು ಕಾರವಾರದಲ್ಲಿ ದೇಶದ ಪ್ರತಿಷ್ಠಿತ ನೌಕಾನೆಲೆ ಹಾಗೂ ಕೈಗಾ ಅಣುವಿದ್ಯುತ್ ಸ್ಥಾವರ ಯೋಜನೆಗಳಿದ್ದರೂ ಸ್ಥಳೀಯವಾಗಿ ಹೆಚ್ಚಿನವರಿಗೆ ಉದ್ಯೋಗಾವಕಾಶ ಸಿಕ್ಕಿಲ್ಲ. ಈ ಕಾರಣದಿಂದ ಪ್ರತಿನಿತ್ಯ ಇಲ್ಲಿನ ಯುವಕರು ನೆರೆಯ ಗೋವಾ()ಕ್ಕೆ ಉದ್ಯೋಗಕ್ಕಾಗಿ ತೆರಳಬೇಕಾದ ಪರಿಸ್ಥಿತಿಯಿದೆ. ಸದ್ಯ ಕಾರವಾರ() ತಾಲ್ಲೂಕಿನ ಅರಗಾ ಗ್ರಾಮದಲ್ಲಿರುವ ಕದಂಬ ನೌಕಾನೆಲೆಯ ಎರಡನೇಯ ಹಂತದ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ ವಿಮಾನ ನಿಲ್ದಾಣ ಕೂಡಾ ನಿರ್ಮಾಣವಾಗಲಿದೆ. ಇದನ್ನು ನಾಗರಿಕರು ಕೂಡಾ ಬಳಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಯೋಜನೆಯನ್ನು ರೂಪಿಸಲಾಗುತ್ತಿದ್ದು, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದಲ್ಲಿ ಉದ್ದೇಶಿತ ವಿಮಾನ ನಿಲ್ದಾಣ() ರೂಪುಗೊಳ್ಳಲಿದೆ. ಹೀಗಾಗಿ ವಿಮಾನ ನಿಲ್ದಾಣ ಸಂಬಂಧಿತ ಉದ್ಯೋಗಗಳ ಕುರಿತ ಕೌಶಲ್ಯ ತರಬೇತಿಗಳು( ) ಸಿಗುವಂತಾದಲ್ಲಿ ಜಿಲ್ಲೆಯ ಯುವಕರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯಲಿದೆ. ಹೀಗಾಗಿ ಸ್ಥಳೀಯ ಜಿಲ್ಲಾಡಳಿತ ಜಿಲ್ಲೆಯ ವಿದ್ಯಾವಂತ ಯುವಕ- ಯುವತಿಯರಿಗೆ ಅಗತ್ಯ ಮಾಹಿತಿಯನ್ನು ಒದಗಿಸಿಕೊಡುವ ಮೂಲಕ ವಿಮಾನ ನಿಲ್ದಾಣದಲ್ಲಿನ ಉದ್ಯೋಗಗಳಿಗೆ ಪೂರಕವಾದ ತರಬೇತಿಗಳನ್ನು ಪಡೆದುಕೊಳ್ಳಲು ಸಹಕರಿಸಬೇಕು ಅನ್ನೋದು ಸ್ಥಳೀಯರ ಅಭಿಪ್ರಾಯ. ಇನ್ನು ಜಿಲ್ಲೆಯಲ್ಲಿ ಈ ಹಿಂದೆ ನೌಕಾನೆಲೆ ಆರಂಭದಲ್ಲಿ ಸಾವಿರಾರು ಕುಟುಂಬಗಳು ಜಾಗ ನೀಡಿ ನಿರಾಶ್ರಿತರಾಗಿದ್ದರು. ಈ ವೇಳೆ ನಿರಾಶ್ರಿತರಿಗೆ ಪರಿಹಾರದೊಂದಿಗೆ ಕುಟುಂಬದ ಓರ್ವರಿಗೆ ಉದ್ಯೋಗ() ನೀಡುವ ಭರವಸೆಯನ್ನು ನೀಡಲಾಗಿತ್ತಾದರೂ, ಸೂಕ್ತ ಕೌಶಲ್ಯವನ್ನು ಹೊಂದಿರದ ಹಿನ್ನೆಲೆ ಕೆಲವೇ ಕೆಲವರು ಡಿ ಗ್ರೂಪ್ ಉದ್ಯೋಗ ಮಾತ್ರ ಪಡೆದಿದ್ದಾರೆ. ಅದರಲ್ಲೂ ಹೆಚ್ಚಿನವರು ಹೊರಗುತ್ತಿಗೆ ನೌಕರರಾಗಿಯೇ ಕೆಲಸ ಮಾಡುತ್ತಿದ್ದಾರೆ. ಕೈಗಾ ಅಣುವಿದ್ಯುತ್ ಸ್ಥಾವರ ಯೋಜನೆಯಲ್ಲೂ ಇದೇ ಪರಿಸ್ಥಿತಿಯಿದ್ದು, ಸ್ಥಳೀಯರಿಗೆ ಕೆಲಸ ಸಿಕ್ಕಿರುವುದು ಬಹಳಷ್ಟು ಕಡಿಮೆ. 2022: ಕಿರಿಯ ಸಂಶೋಧಕ ಸೇರಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ ಹೀಗಾಗಿ ಮುಂಬರುವ ಯೋಜನೆಗೆ ಸಂಬಂಧಿಸಿ ಸ್ಥಳೀಯರಿಗೆ ಈಗಲೇ ಸೂಕ್ತ ತರಬೇತಿ ಸಿಗುವಂತಾಗಲಿ ಅನ್ನೋದು ಸ್ಥಳೀಯರ ಅಭಿಪ್ರಾಯ. ಜಿಲ್ಲಾಡಳಿತ ಕೂಡಾ ಈ ಹಿಂದೆಯೇ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿಯನ್ನು ಒದಗಿಸಲು ಯೋಜನೆ ಹಾಕಿಕೊಂಡಿತ್ತಾದರೂ ಸೂಕ್ತ ತರಬೇತುದಾರರು ಸ್ಥಳೀಯವಾಗಿ ಲಭ್ಯರಾಗದ್ದರಿಂದ ಹಿನ್ನಡೆಯುಂಟಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 2022: ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ ಭಾರತೀಯ ವಾಯುಪಡೆ ಅರ್ಜಿ ಆಹ್ವಾನ ಒಟ್ಟಿನಲ್ಲಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ಯುವಕರಿಗೆ ಸೂಕ್ತ ತರಬೇತಿ ದೊರಕಿದಲ್ಲಿ ಶ್ರೀಘ್ರದಲ್ಲಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣ ಯೋಜನೆಯಲ್ಲಿ ಉದ್ಯೋಗ ದೊರಯಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೌಶಲ್ಯ ತರಬೇತಿ ಒದಗಿಸುವ ಮೂಲಕ ನಿರುದ್ಯೋಗಿ ಯುವಕರಿಗೆ ನೆರವಾದಲ್ಲಿ ಜಿಲ್ಲೆ ಮತ್ತಷ್ಟು ಅಭಿವೃದ್ಧಿಯಾಗಲಿದೆ.