2022: ಬೆಂಗಳೂರು ಮೆಟ್ರೋದಲ್ಲಿದೆ ಉದ್ಯೋಗಾವಕಾಶ, ಇಂದೇ ಅರ್ಜಿ ಸಲ್ಲಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆನ್​​​ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 22 ಕೊನೆಯ ದಿನವಾಗಿದೆ. ಬೆಂಗಳೂರು(ಫೆ.5):ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ( - ) ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಮುಖ್ಯ ಇಂಜಿನಿಯರ್ ( ) ​ ಮತ್ತು ಸಹಾಯಕ​ ಮ್ಯಾನೇಜರ್ ( - )​ಸೇರಿ ಒಟ್ಟು 10 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೇ ದಿನ ಫೆ.22 ಆಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ ://.../ ಗೆ ಭೇಟಿ ನೀಡಬಹುದು. ಒಟ್ಟು 10 ಹುದ್ದೆಗಳ ಮಾಹಿತಿಮುಖ್ಯ ಇಂಜಿನಿಯರ್ - 4 ಹುದ್ದೆಗಳುಸಹಾಯಕ ಮ್ಯಾನೇಜರ್​ (ಆಸ್ತಿ ಅಭಿವೃದ್ಧಿ) - 6 ಹುದ್ದೆಗಳು ಶೈಕ್ಷಣಿಕ ವಿದ್ಯಾರ್ಹತೆ:ನಮ್ಮ ಮೆಟ್ರೋ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹುದ್ದೆಗನುಸಾರವಾಗಿ ಓದಿರಬೇಕು.ಮುಖ್ಯ ಇಂಜಿನಿಯರ್ ಹುದ್ದೆಗೆ ಬಿಇ/ಬಿ.ಟೆಕ್ ಅಥವಾ ಇದಕ್ಕೆ ಸಮಾನವಾದ ಪದವಿಯನ್ನು ಪ್ರತಿಷ್ಠಿತ ಸಂಸ್ಥೆಯಿಂದ ಪಡೆದು, ಕನಿಷ್ಠ 18 ವರ್ಷಗಳ ಉದ್ಯೋಗ ಅನುಭವ ಇರಬೇಕು. ಸಹಾಯಕ ಮ್ಯಾನೇಜರ್​ ಹುದ್ದೆಗೆ (ಮಾರ್ಕೆಟಿಂಗ್/ ಸೇಲ್ಸ್/ ಫೈನಾನ್ಸ್) ಅಥವಾ ಅರ್ಥಶಾಸ್ತ್ರ/ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು. ಇದು ಪೂರ್ಣಸಮಯದ ವಿದ್ಯಾಭ್ಯಾಸವಾಗಿರಬೇಕು. : 50 ಸಾವಿರ ಫ್ರೆಶರ್‌ಗಳ ನೇಮಕಕ್ಕೆ ಮುಂದಾದ ಕಾಗ್ನಿಜೆಂಟ್ ಮಾಸಿಕ ವೇತನ:ಮುಖ್ಯ ಇಂಜಿನಿಯರ್​​ಗೆ ತಿಂಗಳಿಗೆ ಎಲ್ಲ ಭತ್ಯೆ ಸೇರಿ 1.50 ಲಕ್ಷ ರೂ.ವೇತನವಿದ್ದರೆ, ಸಹಾಯಕ ಮ್ಯಾನೇಜರ್​ಗೆ ತಿಂಗಳಿಗೆ 50 ಸಾವಿರ ರೂ.ಸಂಬಳವಿದೆ. ಆಯ್ಕೆ ಪ್ರಕ್ರಿಯೆ:ನಮ್ಮ ಮೆಟ್ರೋ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್​ಲೈನ್​ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ?ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.ಜನರಲ್ ಮ್ಯಾನೇಜರ್ ()ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್​ಕೆ.ಹೆಚ್​. ರಸ್ತೆ , ಶಾಂತಿನಗರಬೆಂಗಳೂರು-560027 2022 : ಫೆಬ್ರವರಿ 12ರಂದು ಕಲಬುರಗಿಯಲ್ಲಿ ಬೃಹತ್ ಉದ್ಯೋಗ ಮೇಳ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ( ) ಫೆಬ್ರವರಿ 12ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯ ವರೆಗೆ ಕಲಬುರಗಿ () ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ( ) ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ( ) ಆಯೋಜಿಸಲಾಗಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಬಿ.ಇ, ಬಿ.ಕಾಂ, ಬಿ.ಎಸ್ಸಿ, ಬಿ.ಎ, ಬಿಸಿಎ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೋಮಾ ಮತ್ತು ಐಟಿಐ ವಿದ್ಯಾರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಬಹುದು. ಪ್ರಮುಖ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಲಿದ್ದು, 5 ಸಾವಿರಕ್ಕೂ ಅಧಿಕ ಉದ್ಯೋಗಗಳ ನೇಮಕಾತಿಯನ್ನು ನಡೆಸಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆಗಳ ನಕಲಿ ಪ್ರತಿ, 2 ಫೋಟೋ, ಆಧಾರ್ ಕಾರ್ಡ್ ಹಾಗೂ ಐದು ಸೆಟ್ ಸ್ವವಿವರದ ಅರ್ಜಿಗಳನ್ನು ತೆಗೆದುಕೊಂಡು ಹೋಗಬೇಕಿರುತ್ತದೆ ಎಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ. ಅರ್ಹತೆಗಳು, ವಯೋಮಿತಿ, ವೇತನ ಮತ್ತು ಉದ್ಯೋಗದ ಸಂಪೂರ್ಣ ವಿವರಗಳನ್ನು ಸಂದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಪಡೆದುಕೊಳ್ಳಬಹುದು. ದೂರವಾಣಿ ಸಂಖ್ಯೆ : 8277895931 ಉದ್ಯೋಗ ಮೇಳ ನಡೆಯುವ ಸ್ಥಳ :ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯ, ಐವನ್ನ-ಎ-ಶಾಹಿ, ಶಂಭೋಜಿನಲ್ಲಿ, ಕಲಬುರ್ಗಿ-585102 ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಆಸಕ್ತರು://..//-?utm_source=-&utm_medium=-&utm_campaign=DHಲಿಂಕ್ ಬಳಸಿ ತಮ್ಮ ಹೆಸರನ್ನು ಈ ಕೂಡಲೇ ನೊಂದಾಯಿಸಿಕೊಳ್ಳಿ. ಅಭ್ಯರ್ಥಿಗಳು ತಮ್ಮ ರೆಸ್ಯುಮೆಯನ್ನು .@. ವಿಳಾಸಕ್ಕೆ ಮೇಲ್ ಕೂಡ ಮಾಡಬಹುದು.