2022: ಐಎಎಸ್‌, ಐಪಿಎಸ್‌, ಐಎಫ್‌ಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಕೇಂದ್ರ ಲೋಕಸೇವಾ ಆಯೋಗ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ ಅರಣ್ಯ ಸೇವೆ, ಭಾರತೀಯ ನಾಗರಿಕ ಸೇವೆ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಬೆಂಗಳೂರು(ಫೆ.6):ಕೇಂದ್ರ ಲೋಕಸೇವಾ ಆಯೋಗ ( - ) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ ಅರಣ್ಯ ಸೇವೆ, ಭಾರತೀಯ ನಾಗರಿಕ ಸೇವೆ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ವಿವರ ಹಾಗೂ ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಭಾರತೀಯ ನಾಗರಿಕ ಸೇವೆ ಹುದ್ದೆ -861ಭಾರತೀಯ ಅರಣ್ಯ ಸೇವೆ ಹುದ್ದೆ -151 ಕೇಂದ್ರ ಲೋಕಸೇವಾ ಆಯೋಗ ಭಾರತೀಯ ಅರಣ್ಯ ಸೇವೆ ಮತ್ತು ಸಿವಿಲ್‌ ಸೇವೆಗಳಿಗೆ ಜೂನ್‌ 05, 2022 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಿದೆ. ಈ ಸದರಿ ಪರೀಕ್ಷೆಗೆ ಫೆಬ್ರುವರಿ 22, 2022 ರವರೆಗೆ ಆನ್‌ಲೈನ್‌ ರಿಜಿಸ್ಟ್ರೇಷನ್‌ ಪಡೆಯಬಹುದು. 2022: ಬರೋಬ್ಬರಿ 313 ಮೈನಿಂಗ್ ಸಿರ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಪ್ರಮುಖ ದಿನಾಂಕಗಳುಅರ್ಜಿ ಸಲ್ಲಿಸಲು ಆರಂಭ ದಿನಾಂಕ : 03-02-2022ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 22-02-2022 (18-00 )ಯುಪಿಎಸ್‌ಸಿ ಪ್ರಿಲಿಮ್ಸ್‌ ಪರೀಕ್ಷೆ ದಿನಾಂಕ : 05-06-2022ಅಪ್ಲಿಕೇಶನ್‌ ವಿತ್‌ಡ್ರಾ ಪಡೆಯಲು ಅವಕಾಶ : 01-03-2022 ರಿಂದ 07-03-2022 ರ ಸಂಜೆ 06 ಗಂಟೆವರೆಗೆ. ವಯೋಮಿತಿ ಅರ್ಹತೆಗಳು- ಅಭ್ಯರ್ಥಿಗಳು 01-08-2022 ಕ್ಕೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಗರಿಷ್ಠ 32 ವರ್ಷ ಮೀರಿರಬಾರದು.- ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.- ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.- ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. 2022: ಗ್ರೂಪ್​ ಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 9 ಕೊನೆಯ ದಿನ ಶೈಕ್ಷಣಿಕ ವಿದ್ಯಾರ್ಹತೆ:ಯುಪಿಎಸ್‌ಸಿ ಸಿವಿಲ್‌ ಸೇವೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿ ಪಾಸ್‌ ಮಾಡಿರಬೇಕು. ಯುಪಿಎಸ್‌ಸಿ ಭಾರತೀಯ ಅರಣ್ಯ ಸೇವೆ ಪರೀಕ್ಷೆ ತೆಗೆದುಕೊಳ್ಳಲು ಅಭ್ಯರ್ಥಿ ಪದವಿಯಲ್ಲಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ/ ಸಸ್ಯಶಾಸ್ತ್ರ / ರಸಾಯನಶಾಸ್ತ್ರ / ಭೂವಿಜ್ಞಾನ / ಗಣಿತ / ಭೌತಶಾಸ್ತ್ರ / ಅಂಕಿಅಂಶ ಮತ್ತು ಪ್ರಾಣಿಶಾಸ್ತ್ರ / ಕೃಷಿ ಪದವಿ / ಅರಣ್ಯಶಾಸ್ತ್ರದಲ್ಲಿ ಯಾವುದಾದರೂ ಒಂದು ವಿಷಯವನ್ನು ಓದಿರಬೇಕು. ಯುಪಿಎಸ್‌ಸಿ ಐಎಎಸ್‌ / ಸಿಎಸ್‌ಇ ಪರೀಕ್ಷೆ ಎಷ್ಟು ಬಾರಿ ಬರೆಯಬಹುದು?- ಸಾಮಾನ್ಯ ವರ್ಗದ ಅಭ್ಯರ್ಥಿ 6 ಬಾರಿ ಐಎಎಸ್‌ / ಸಿಎಸ್‌ಇ ಪರೀಕ್ಷೆಗಳನ್ನು ಬರೆಯಬಹುದು.- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಎಷ್ಟು ಬಾರಿ ಬೇಕಾದರೂ ಪರೀಕ್ಷೆ ಬರೆಯಬಹುದು. ಇಂತಿಷ್ಟು ಎಂದು ಮಿತಿ ಇಲ್ಲ.- ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 09 ಬಾರಿ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಬಹುದು.- ಅಭ್ಯರ್ಥಿ / / ಗೆ ಸೇರಿದಲ್ಲಿ 09 ಬಾರಿ, ಎಸ್‌ಸಿ / ಎಸ್‌ಟಿ ಅಭ್ಯರ್ಥಿ ಆಗಿದ್ದಲ್ಲಿ ಎಷ್ಟು ಬಾರಿ ಬೇಕಾದರೂ ಪರೀಕ್ಷೆ ಬರೆಯಬಹುದು.ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಯುಪಿಎಸ್‌ಸಿ ನೇಮಕಾತಿಗೆ ಅರ್ಜಿ ಹಾಕಲು ವೆಬ್‌ಸೈಟ್‌ .. ಗೆ ಭೇಟಿ ನೀಡಿ.