2022: ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗೆ ನೇರ ನೇಮಕಾತಿ ಭಾರತೀಯ ಉಕ್ಕು ಪ್ರಾಧಿಕಾರ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಫೆಬ್ರವರಿ 9 ರಿಂದ 11 ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಲು ಅಧಿಸೂಚನೆಯಲ್ಲಿ ಕೋರಲಾಗಿದೆ. ಬೆಂಗಳೂರು(ಜ.29):ಭಾರತೀಯ ಉಕ್ಕು ಪ್ರಾಧಿಕಾರ ( - ) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ . ಸ್ಪೆಷಲಿಸ್ಟ್​ ಮತ್ತು ಜನರಲ್​ ಡ್ಯೂಟಿ ಮೆಡಿಕಲ್​ ಆಫೀಸರ್ ಸೇರಿ ಒಟ್ಟು 24 ಹುದ್ದೆಗಳು ಖಾಲಿ ಇದ್ದು, ಎಂಬಿಬಿಎಸ್, ಎಂಎಸ್​, ಎಂಡಿ ಪೂರ್ಣಗೊಳಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 9 ರಿಂದ 11 ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ (--)ಭಾಗವಹಿಸಲು ಅಧಿಸೂಚನೆಯಲ್ಲಿ ಕೋರಲಾಗಿದೆ. ಒಟ್ಟು 24 ಹುದ್ದೆಗಳ ವಿವರ:ಸ್ಪೆಷಲಿಸ್ಟ್​ - 08ಜನರಲ್​ ಡ್ಯೂಟಿ ಮೆಡಿಕಲ್​ ಆಫೀಸರ್- 16 ಶೈಕ್ಷಣಿಕ ವಿದ್ಯಾರ್ಹತೆ:ಭಾರತೀಯ ಉಕ್ಕು ಪ್ರಾಧಿಕಾರ ()ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಕಾಲೇಜಿನಿಂದ ಕಡ್ಡಾಯವಾಗಿ ಎಂಬಿಬಿಎಸ್, ಎಂಎಸ್​, ಎಂಡಿ ಪೂರ್ಣಗೊಳಿಸಿರಬೇಕು. ಸ್ಪೆಷಲಿಸ್ಟ್​ ಹುದ್ದೆಗಳಿಗೆ ಪಿಜಿ ಡಿಪ್ಲೋಮಾ/ ಪದವಿ, ಎಂಬಿಬಿಎಸ್​​ ಪದವಿ ಮತ್ತುಜನರಲ್​ ಡ್ಯೂಟಿ ಮೆಡಿಕಲ್​ ಆಫೀಸರ್ ಹುದ್ದೆಗಳಿಗೆ ಎಂಬಿಬಿಎಸ್​ ಪದವಿ ಮಾಡಿರಬೇಕು. ವಯೋಮಿತಿ:ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ 69 ವರ್ಷ ಮೀರಿರಬಾರದು. ಉದ್ಯೋಗದ ಸ್ಥಳ:ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅಭ್ಯರ್ಥಿಗಳು ಪಶ್ಚಿಮ ಬಂಗಾಳದ ಕೆಲಸ ಮಾಡಬೇಕಾಗುತ್ತದೆ. ವೇತನ ವಿವರ:ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗನುಸಾರ ವೇತನ ನಿಗದಿಯಾಗಿದೆ. ಜಿಡಿಎಂಒ- ಮಾಸಿಕ 70,000 ರೂಸ್ಪೆಷಲಿಸ್ಟ್​(ಪಿಜಿ ಡಿಪ್ಲೊಮಾ)- ಮಾಸಿಕ 90,000 ರೂಸ್ಪೆಷಲಿಸ್ಟ್​(ಪಿಜಿ ಡಿಗ್ರಿ)- ಮಾಸಿಕ 1,20,000 ರೂ ಆಯ್ಕೆ ಪ್ರಕ್ರಿಯೆ:ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿದೆ. ಸಂದರ್ಶನ ನಡೆಯುವ ಸ್ಥಳ: ಕಚೇರಿ (&) ಮುಖ್ಯ ಆಸ್ಪತ್ರೆ ದುರ್ಗಾಪುರ- 713205ಪಶ್ಚಿಮ್ ಬರ್ಧಮಾನ್