2022: ಬಿಇ, ಬಿ.ಟೆಕ್, ಬಿಎಸ್ಸಿ ಪದವೀಧರರಿಗೆ ಉದ್ಯೋಗವಕಾಶ ಬಾಬಾ ಆಟಾಮಿಕ್ ರಿಸರ್ಚ್​ ಸೆಂಟರ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಫೆಬ್ರವರಿ 11 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಬೆಂಗಳೂರು(ಜ.30): ಬಾಬಾ ಆಟಾಮಿಕ್ ರಿಸರ್ಚ್​ ಸೆಂಟರ್ ( ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಗ್ರೂಪ್​ ಎ (ಸೈಂಟಿಫಿಕ್ ಆಫೀಸರ್) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಫೆಬ್ರವರಿ 11 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ .. ಗೆ ಭೇಟಿ ನೀಡಬಹುದು. ಶೈಕ್ಷಣಿಕ ವಿದ್ಯಾರ್ಹತೆ:ಬಾಬಾ ಆಟಾಮಿಕ್ ರಿಸರ್ಚ್​ ಸೆಂಟರ್ ನಲ್ಲಿ ಖಾಲಿ ಇರುವ ಗ್ರೂಪ್​ ಎ(ಸೈಂಟಿಫಿಕ್ ಆಫೀಸರ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​ನಿಂದ ಕಡ್ಡಾಯವಾಗಿ ಬಿಇ, ಬಿ.ಟೆಕ್, ಬಿಎಸ್ಸಿ ವಿದ್ಯಾರ್ಹತೆ ಪಡೆದಿರಬೇಕು. ವಯೋಮಿತಿ:ಬಾಬಾ ಆಟಾಮಿಕ್ ರಿಸರ್ಚ್​ ಸೆಂಟರ್ ನಲ್ಲಿ ಖಾಲಿ ಇರುವ ಸೈಂಟಿಫಿಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವರ್ಗಾನುಸಾರ ವಯೋಮಿತಿ ನೀಡಲಾಗಿದೆ.ಸಾಮಾನ್ಯ ಅಭ್ಯರ್ಥಿಗಳು- ಗರಿಷ್ಠ 26 ವರ್ಷಒಬಿಸಿ ಅಭ್ಯರ್ಥಿಗಳು- ಗರಿಷ್ಠ 29 ವರ್ಷSC/ ಅಭ್ಯರ್ಥಿಗಳು- ಗರಿಷ್ಠ 31 ವರ್ಷ 2022: ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಅರ್ಜಿ ಶುಲ್ಕ:ಬಾಬಾ ಆಟಾಮಿಕ್ ರಿಸರ್ಚ್​ ಸೆಂಟರ್ ನಲ್ಲಿ ಖಾಲಿ ಇರುವ ಸೈಂಟಿಫಿಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಮಾಸಿಕ ವೇತನ:ಬಾಬಾ ಆಟಾಮಿಕ್ ರಿಸರ್ಚ್​ ಸೆಂಟರ್ ನಲ್ಲಿ ಖಾಲಿ ಇರುವ ಸೈಂಟಿಫಿಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ 55,000 ರೂ ಸ್ಟೆಫಂಡ್ ನೀಡಲಾಗುತ್ತದೆ. ಆಯ್ಕೆ ಪ್ರಕ್ರಿಯೆ: ಬಾಬಾ ಆಟಾಮಿಕ್ ರಿಸರ್ಚ್​ ಸೆಂಟರ್ ನಲ್ಲಿ ಖಾಲಿ ಇರುವ ಸೈಂಟಿಫಿಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್​ಲೈನ್​ ಟೆಸ್ಟ್​ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 11, 2022ಆನ್‌ಲೈನ್ ಪರೀಕ್ಷೆಯ ಸ್ಲಾಟ್ ಬುಕಿಂಗ್: ಮಾರ್ಚ್ 4 ರಿಂದ ಮಾರ್ಚ್ 18, 2022ಆನ್‌ಲೈನ್ ಪರೀಕ್ಷೆ: ಏಪ್ರಿಲ್ 7 ರಿಂದ ಏಪ್ರಿಲ್ 13, 2022ಅಭ್ಯರ್ಥಿಗಳು ಸ್ಕೋರ್ ಅಪ್‌ಲೋಡ್ ಮಾಡಲು ಕೊನೆಯ ದಿನಾಂಕ: ಏಪ್ರಿಲ್ 13, 2022 2022: ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವವರಿಗೆ ಸುವರ್ಣವಕಾಶ ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗೆ ನೇರ ನೇಮಕಾತಿ:ಭಾರತೀಯ ಉಕ್ಕು ಪ್ರಾಧಿಕಾರ ( - ) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ . ಸ್ಪೆಷಲಿಸ್ಟ್​ ಮತ್ತು ಜನರಲ್​ ಡ್ಯೂಟಿ ಮೆಡಿಕಲ್​ ಆಫೀಸರ್ ಸೇರಿ ಒಟ್ಟು 24 ಹುದ್ದೆಗಳು ಖಾಲಿ ಇದ್ದು, ಎಂಬಿಬಿಎಸ್, ಎಂಎಸ್​, ಎಂಡಿ ಪೂರ್ಣಗೊಳಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 9 ರಿಂದ 11 ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ (--)ಭಾಗವಹಿಸಲು ಅಧಿಸೂಚನೆಯಲ್ಲಿ ಕೋರಲಾಗಿದೆ. ಶೈಕ್ಷಣಿಕ ವಿದ್ಯಾರ್ಹತೆ:ಭಾರತೀಯ ಉಕ್ಕು ಪ್ರಾಧಿಕಾರ ()ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಕಾಲೇಜಿನಿಂದ ಕಡ್ಡಾಯವಾಗಿ ಎಂಬಿಬಿಎಸ್, ಎಂಎಸ್​, ಎಂಡಿ ಪೂರ್ಣಗೊಳಿಸಿರಬೇಕು. ಸ್ಪೆಷಲಿಸ್ಟ್​ ಹುದ್ದೆಗಳಿಗೆ ಪಿಜಿ ಡಿಪ್ಲೋಮಾ/ ಪದವಿ, ಎಂಬಿಬಿಎಸ್​​ ಪದವಿ ಮತ್ತುಜನರಲ್​ ಡ್ಯೂಟಿ ಮೆಡಿಕಲ್​ ಆಫೀಸರ್ ಹುದ್ದೆಗಳಿಗೆ ಎಂಬಿಬಿಎಸ್​ ಪದವಿ ಮಾಡಿರಬೇಕು. ಸಂದರ್ಶನ ನಡೆಯುವ ಸ್ಥಳ: ಕಚೇರಿ (&) ಮುಖ್ಯ ಆಸ್ಪತ್ರೆ ದುರ್ಗಾಪುರ- 713205ಪಶ್ಚಿಮ್ ಬರ್ಧಮಾನ್