2022: ನಮ್ಮ ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆನ್​​​ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 21 ಕೊನೆಯ ದಿನವಾಗಿದೆ. ಬೆಂಗಳೂರು(ಜ.23):ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ( - )​ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಹಾಯಕ ಮ್ಯಾನೇಜರ್‌, ಸೀನಿಯರ್ ಟ್ರಾನ್ಸ್​​​ಪೋರ್ಟ್​​ ಪ್ಲ್ಯಾನರ್ ಸೇರಿ ಒಟ್ಟು 11 ಹುದ್ದೆಗಳು ಖಾಲಿ ಇವೆ. ಜನವರಿ 21ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​​​ಲೈನ್​() ಮತ್ತು ಆಫ್‌ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಲು ಫೆಬ್ರವರಿ 21 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ ://.../ ಗೆ ಭೇಟಿ ನೀಡಬಹುದು. ಒಟ್ಟು 11 ಹುದ್ದೆಗಳ ಮಾಹಿತಿಚೀಫ್​ ಎಂಜಿನಿಯರ್ಸ್​/ಅಡ್ವೈಸರ್ಸ್​-4ಸೀನಿಯರ್ ಟ್ರಾನ್ಸ್​​ಪೋರ್ಟ್​ ಪ್ಲ್ಯಾನರ್(ಕನ್ಸಲ್ಟೆಂಟ್)-1ಅಸಿಸ್ಟೆಂಟ್ ಮ್ಯಾನೇಜರ್(ಪ್ರಾಪರ್ಟಿ ಡೆವಲಪ್​ಮೆಂಟ್)-6 ಶೈಕ್ಷಣಿಕ ವಿದ್ಯಾರ್ಹತೆ:ನಮ್ಮ ಮೆಟ್ರೋ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹುದ್ದೆಗನುಸಾರವಾಗಿ ಓದಿರಬೇಕುಚೀಫ್​ ಎಂಜಿನಿಯರ್ಸ್​/ಅಡ್ವೈಸರ್ಸ್​-ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿಇ, ಬಿ.ಟೆಕ್ ಮಾಡಿರಬೇಕು.ಸೀನಿಯರ್ ಟ್ರಾನ್ಸ್​​ಪೋರ್ಟ್​ ಪ್ಲ್ಯಾನರ್(ಕನ್ಸಲ್ಟೆಂಟ್)- ಸಿವಿಲ್ ಎಂಜಿನಿಯರಿಂಗ್, ಟ್ರಾನ್ಸ್​ಪೋರ್ಟ್​ ಪ್ಲ್ಯಾನಿಂಗ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.ಅಸಿಸ್ಟೆಂಟ್ ಮ್ಯಾನೇಜರ್(ಪ್ರಾಪರ್ಟಿ ಡೆವಲಪ್​ಮೆಂಟ್)- ಎಂಬಿಎ, ಎಕನಾಮಿಕ್ಸ್​/ಕಾಮರ್ಸ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. 2022: ಕಾನೂನು ಪದವೀಧರರಾಗಿದ್ದರೆ ಭಾರತೀಯ ಸೇನೆಯಲ್ಲಿ ಸುವರ್ಣಾವಕಾಶ ಅನುಭವ:ಚೀಫ್​ ಎಂಜಿನಿಯರ್ಸ್​/ಅಡ್ವೈಸರ್ಸ್​- ಕನಿಷ್ಠ 18 ವರ್ಷ ಅನುಭವ ಹೊಂದಿರಬೇಕು.ಸೀನಿಯರ್ ಟ್ರಾನ್ಸ್​​ಪೋರ್ಟ್​ ಪ್ಲ್ಯಾನರ್(ಕನ್ಸಲ್ಟೆಂಟ್)- 8ರಿಂದ 10 ವರ್ಷ ಅನುಭವ ಹೊಂದಿರಬೇಕು.ಅಸಿಸ್ಟೆಂಟ್ ಮ್ಯಾನೇಜರ್(ಪ್ರಾಪರ್ಟಿ ಡೆವಲಪ್​ಮೆಂಟ್)-ಕನಿಷ್ಠ 5 ವರ್ಷ ಅನುಭವ ಹೊಂದಿರಬೇಕು. ವಯೋಮಿತಿ:ಚೀಫ್​ ಎಂಜಿನಿಯರ್ಸ್​/ಅಡ್ವೈಸರ್ಸ್​- 55 ರಿಂದ 63 ವರ್ಷಸೀನಿಯರ್ ಟ್ರಾನ್ಸ್​​ಪೋರ್ಟ್​ ಪ್ಲ್ಯಾನರ್(ಕನ್ಸಲ್ಟೆಂಟ್)-ಬಿಎಂಆರ್​ಸಿಎಲ್​ ನೇಮಕಾತಿ ಪ್ರಕಾರ ವಯೋಮಿತಿ ಇರಲಿದೆಅಸಿಸ್ಟೆಂಟ್ ಮ್ಯಾನೇಜರ್ - 35 ವರ್ಷ ಮಾಸಿಕ ವೇತನ:ಚೀಫ್​ ಎಂಜಿನಿಯರ್ಸ್​/ಅಡ್ವೈಸರ್ಸ್​- 1,40,000 ರಿಂದ 1,80,000 ರೂಸೀನಿಯರ್ ಟ್ರಾನ್ಸ್​​ಪೋರ್ಟ್​ ಪ್ಲ್ಯಾನರ್(ಕನ್ಸಲ್ಟೆಂಟ್)- ಮಾಸಿಕ 1,00,000 ರೂಅಸಿಸ್ಟೆಂಟ್ ಮ್ಯಾನೇಜರ್(ಪ್ರಾಪರ್ಟಿ ಡೆವಲಪ್​ಮೆಂಟ್)- ಮಾಸಿಕ 50,000 ರೂ. ಆಯ್ಕೆ ಪ್ರಕ್ರಿಯೆ:ನಮ್ಮ ಮೆಟ್ರೋ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್​ಲೈನ್​ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ?ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.ಜನರಲ್ ಮ್ಯಾನೇಜರ್ ()ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್​ಕೆ.ಹೆಚ್​. ರಸ್ತೆ , ಶಾಂತಿನಗರಬೆಂಗಳೂರು-560027 ವೀಕೆಂಡ್‌ನಲ್ಲಿ ಬಿಎಂಟಿಸಿ, ನಮ್ಮ ಮೆಟ್ರೋ ಸಂಚಾರ ಯಥಾಸ್ಥಿತಿ:ಕರ್ನಾಟಕದಲ್ಲಿ ವೀಕೆಂಡ್​ ಕರ್ಫ್ಯೂ ( ) ಹಿಂಪಡೆದಿದ್ದರಿಂದ ನಮ್ಮ ಮೆಟ್ರೋ ( ) ಹಾಗೂ ಬಿಎಂಟಿಸಿ ಬಸ್ ( ) ಸಂಚಾರ ಜ.22 ರಿಂದ ಯಥಾಸ್ಥಿತಿ ಸಂಚರಿಸುತ್ತಿವೆ. ಹೌದು, ಪ್ರತಿ 5 ನಿಮಿಷಕ್ಕೆ ಒಂದರಂತೆ ಮೆಟ್ರೋ ರೈಲು ಸಂಚಾರ ಮಾಡಲಿದೆ. ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೂ ನಮ್ಮ ಮೆಟ್ರೋ ರೈಲುಗಳು ಕಾರ್ಯಾಚರಣೆ ನಡೆಸಲಿವೆ. ರಾತ್ರಿ 9 ಗಂಟೆಗೆ ಟರ್ಮಿನಲ್ ಸ್ಟೇಷನ್​ನಿಂದ‌ ಕೊನೆಯ ರೈಲು ಹೊರಡಲಿದೆ. ವೀಕೆಂಡ್ ಕರ್ಫ್ಯೂ ವೇಳೆ 30 ನಿಮಿಷಗಳಿಗೆ ಒಂದು ರೈಲು () ಕಾರ್ಯಾಚರಣೆಯಾಗುತ್ತಿತ್ತು. ಸದ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ರದ್ದು ಮಾಡಿದ ಹಿನ್ನಲೆ ಮೊದಲಿನಂತೆ ಮೆಟ್ರೋ ಸಂಚಾರ ಇರಲಿದೆ.