2022: ಇಫ್ಕೊನಲ್ಲಿ ಬಿಸಿಎ ಪಾಸಾದವರಿಗೆ ಉದ್ಯೋಗವಕಾಶ ಭಾರತೀಯ ರೈತರ ರಸಗೊಬ್ಬರ ಸಹಕಾರ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಜನವರಿ 31 ಅರ್ಜಿ ಸಲದಲಿಸಲು ಕೊನೆಯ ದಿನವಾಗಿದೆ. ಬೆಂಗಳೂರು(ಜ.21):ಭಾರತೀಯ ರೈತರ ರಸಗೊಬ್ಬರ ಸಹಕಾರ ನಿಗಮ - ಇಫ್ಕೊ ( -) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಹಲವು ಟ್ರೇನಿ ಹುದ್ದೆಗಳು ( ) ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜನವರಿ 31ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​​ . ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಶೈಕ್ಷಣಿಕ ಅರ್ಹತೆ:ಇಫ್ಕೊನಲ್ಲಿ ಖಾಲಿ ಇರುವ ಟ್ರೇನಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಸಿಎ ಓದಿರಬೇಕು. ವಯೋಮಿತಿ:ಇಫ್ಕೊನಲ್ಲಿ ಖಾಲಿ ಇರುವ ಟ್ರೇನಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು ಜನವರಿ 1, 2022ಕ್ಕೆ 30 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು / ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. 2022: 2422 ಅಪ್ರೆಂಟಿಸ್ ಹುದ್ದೆ ಅರ್ಜಿ ಶುಲ್ಕ ಮತ್ತು ವೇತನ:ಇಫ್ಕೊನಲ್ಲಿ ಖಾಲಿ ಇರುವ ಟ್ರೇನಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹28,400 ವೇತನ ನಿಗದಿಯಾಗಿದೆ. ಆಯ್ಕೆ ಪ್ರಕ್ರಿಯೆ:ಆನ್​ಲೈನ್​ ಪರೀಕ್ಷೆ, ಸಂದರ್ಶನ ಮತ್ತು ಮೆಡಿಕಲ್ ಚೆಕ್-ಅಪ್ ಮೂಲಕ ಟ್ರೇನಿ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಉದ್ಯೋಗದ ಸ್ಥಳ:ಇಫ್ಕೊನಲ್ಲಿ ಖಾಲಿ ಇರುವ ಟ್ರೇನಿ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ದೊರೆಯಲಿದೆ. 2022: ಈ ತ್ರೈಮಾಸಿಕ ವರ್ಷದಲ್ಲಿ 22 ಸಾವಿರ ಫ್ರೆಶರ್‌ ಗಳ ನೇಮಕ ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ, 1ಲಕ್ಷ ರೂ ವೇತನ:ರಸಗೊಬ್ಬರ ಮತ್ತು ರಾಸಾಯನಿಕ ಟ್ರಾವಂಕೂರ್ ಲಿಮಿಟೆಡ್ ( ) ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಡೈರೆಕ್ಟರ್ () ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್​/ ಆಫ್‌ಲೈನ್ ಎರಡು ಪ್ರಕಾರದ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್‌ 17 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿ ಪಡೆಯಲು ಆಸಕ್ತರು ಇಲಾಖೆಯ ಅಧಿಕೃತ ವೆಬ್‌ತಾಣ .. ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ಕೋರಲಾಗಿದೆ. ಶೈಕ್ಷಣಿಕ ವಿದ್ಯಾರ್ಹತೆ:ರಸಗೊಬ್ಬರ ಮತ್ತು ರಾಸಾಯನಿಕ ಟ್ರಾವಂಕೂರ್ () ಲಿಮಿಟೆಡ್ ನಲ್ಲಿರುವ ಡೈರೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​​ನಿಂದ ಕಡ್ಡಾಯವಾಗಿ ಎಂಜಿನಿಯರಿಂಗ್ ( ), ಎಂಬಿಎ (), ಸ್ನಾತಕೋತ್ತರ ಪದವಿ ( ) ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಸಬೇಕಾಗಿರುವ ವಿಳಾಸ:ರಸಗೊಬ್ಬರ ಮತ್ತು ರಾಸಾಯನಿಕ ಟ್ರಾವಂಕೂರ್ ಲಿಮಿಟೆಡ್ ನಲ್ಲಿರುವ ಡೈರೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು .. ಗೆ ಭೇಟಿ ನೀಡಿ ಆನ್‌ಲೈನ್ () ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲವಾದರೆ ಆಫ್​ಲೈನ್ ()​ ಮೂಲಕ ಅರ್ಜಿ ಸಲ್ಲಿಸಬಹುದು. ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವಿಳಾಸಶ್ರೀಮತಿ ಕಿಂಬುವಾಂಗ್ ಕಿಪ್ಜೆನ್ ಕಾರ್ಯದರ್ಶಿಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿಸಾರ್ವಜನಿಕ ಉದ್ಯಮಗಳ ಭವನಬ್ಲಾಕ್ ಸಂಖ್ಯೆ 14CGO ಕಾಂಪ್ಲೆಕ್ಸ್ಲೋಧಿ ರಸ್ತೆನವದೆಹಲಿ - 110003 . 14CGO -110003.