2022: 54 ಹುದ್ದೆಗಳ ಭರ್ತಿಗೆ ಮುಂದಾದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮಂಡಳಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 54 ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 15 ಕೊನೆಯ ದಿನವಾಗಿದೆ ಬೆಂಗಳೂರು(ಜ.10):ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ( - ) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸೀನಿಯರ್ ಕನ್ಸಲ್ಟೆಂಟ್, ಕನ್ಸಲ್ಟೆಂಟ್ ಹಾಗೂ ಇತರೆ ಸೇರಿ ಒಟ್ಟು 54 ಹುದ್ದೆಗಳು ಖಾಲಿ ಇದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ()​ ಮೂಲಕ ಅರ್ಜಿ ಸಲ್ಲಿಸಲು ಜನವರಿ 15 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ .. ಗೆ ಭೇಟಿ ನೀಡಲು ಕೋರಲಾಗಿದೆ. ಒಟ್ಟು 54 ಹುದ್ದೆಗಳ ವಿವರ ಇಂತಿದೆಸೀನಿಯರ್ ಕನ್ಸಲ್ಟೆಂಟ್(ಅಕಾಡೆಮಿಕ್)-6ಕನ್ಸಲ್ಟೆಂಟ್(ಅಕಾಡೆಮಿಕ್)- 29ಪ್ರಾಜೆಕ್ಟ್​ ಅಸೋಸಿಯೇಟ್​/ಸರ್ವೇ ಅಸೋಸಿಯೇಟ್/ಸೀನಿಯರ್ ರಿಸರ್ಚ್​ ಅಸೋಸಿಯೇಟ್- 5ಜೂನಿಯರ್ ಪ್ರಾಜೆಕ್ಟ್​ ಫೆಲೋ-12ಆಫೀಸ್ ಅಸಿಸ್ಟೆಂಟ್-1ಅಕೌಂಟೆಂಟ್-1 ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಅನುಭವ:ಸೀನಿಯರ್ ಕನ್ಸಲ್ಟೆಂಟ್(ಅಕಾಡೆಮಿಕ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಮತ್ತು 5 ವರ್ಷಗಳ ಅನುಭವ ಹೊಂದಿರಬೇಕು.ಕನ್ಸಲ್ಟೆಂಟ್(ಅಕಾಡೆಮಿಕ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಮತ್ತು 2 ವರ್ಷಗಳ ಅನುಭವ ಹೊಂದಿರಬೇಕು.ಪ್ರಾಜೆಕ್ಟ್​ ಅಸೋಸಿಯೇಟ್​/ಸರ್ವೇ ಅಸೋಸಿಯೇಟ್/ಸೀನಿಯರ್ ರಿಸರ್ಚ್​ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಮತ್ತು 2 ವರ್ಷಗಳ ಅನುಭವ ಹೊಂದಿರಬೇಕು.ಜೂನಿಯರ್ ಪ್ರಾಜೆಕ್ಟ್​ ಫೆಲೋ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಹೊಂದಿರಬೇಕು.ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಮತ್ತು 2 ವರ್ಷಗಳ ಅನುಭವ ಹೊಂದಿರಬೇಕು.ಅಕೌಂಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಮತ್ತು 2 ವರ್ಷಗಳ ಅನುಭವ ಹೊಂದಿರಬೇಕು. 2022: ದೇಶದಾದ್ಯಂತ ಸೇನಾ ಶಾಲೆಗೆ 8700 ಶಿಕ್ಷಕರ ನೇಮಕಾತಿ, ಜನವರಿ 28ರೊಳಗೆ ಅರ್ಜಿ ಸಲ್ಲಿಸಿ ಹುದ್ದೆಗೆ ಅನಸಾರ ವೇತನ ವಿವರ:ಸೀನಿಯರ್ ಕನ್ಸಲ್ಟೆಂಟ್(ಅಕಾಡೆಮಿಕ್)- ಮಾಸಿಕ 60,000 ರೂಕನ್ಸಲ್ಟೆಂಟ್(ಅಕಾಡೆಮಿಕ್)- ಮಾಸಿಕ 45,000 ರೂಪ್ರಾಜೆಕ್ಟ್​ ಅಸೋಸಿಯೇಟ್​/ಸರ್ವೇ ಅಸೋಸಿಯೇಟ್/ಸೀನಿಯರ್ ರಿಸರ್ಚ್​ ಅಸೋಸಿಯೇಟ್- ಮಾಸಿಕ 30,000 ರೂಜೂನಿಯರ್ ಪ್ರಾಜೆಕ್ಟ್​ ಫೆಲೋ-ಮಾಸಿಕ 23,000 ರೂಆಫೀಸ್ ಅಸಿಸ್ಟೆಂಟ್- ಮಾಸಿಕ 25,000 ರೂಅಕೌಂಟೆಂಟ್- ಮಾಸಿಕ 25,000 ರೂ ಆಯ್ಕೆ ಪ್ರಕ್ರಿಯೆ:ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ಖಾಲಿ ಇರುವ ಹುದ್ದೆಗಳೀಗೆ ಅರ್ಜಿ ಸಲ್ಲಿಸಿದವರನ್ನು ಆನ್‌ಲೈನ್ ಸಂದರ್ಶನದ ಮೂಲಕ ಆಯ್ಕೆ ಮಾಡಲಿದೆ. ಆನ್‌ಲೈನ್ ಸಂದರ್ಶನ ಯಾವಾಗ ನಡೆಯಲಿದೆ ಎಂಬುದನ್ನು ಈ ಮೇಲ್ ಮೂಲಕ ತಿಳಿಸಲಿದೆ. 2022: ಬರೋಬ್ಬರಿ 4000 ಕಮ್ಯುನಿಟಿ ಹೆಲ್ತ್​ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗ ಅರಸುತ್ತಿರುವ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ:ಕರ್ನಾಟಕ ಬ್ಯಾಂಕ್ ( ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್ () ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಆಫ್​ಲೈನ್ ()​ ಮೂಲಕ ಜನವರಿ 20ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು . ಗೆ ಭೇಟಿ ನೀಡಿ. ಶೈಕ್ಷಣಿಕ ವಿದ್ಯಾರ್ಹತೆ:ಕರ್ನಾಟಕ ಬ್ಯಾಂಕ್ ನೇಮಕಾತಿಯ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ/ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ (ಚಾರ್ಟರ್ಡ್ ಅಕೌಂಟೆಂಟ್) ಪೂರ್ಣಗೊಳಿಸಿರಬೇಕು. ಅರ್ಜಿ ವಿಳಾಸ:ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.ಸಹಾಯಕ ಪ್ರಧಾನ ವ್ಯವಸ್ಥಾಪಕರು ( & )ಕರ್ನಾಟಕ ಬ್ಯಾಂಕ್ ಲಿಮಿಟೆಡ್ಪ್ರಧಾನ ಕಛೇರಿಮಹಾವೀರ ಸರ್ಕಲ್ಕಂಕನಾಡಿಮಂಗಳೂರು- 575002