: ರೈಲ್ವೆ ನೇಮಕಾತಿಯ ಸಿಬಿಟಿ-1 ಪರೀಕ್ಷೆಯ ಫಲಿತಾಂಶ ಪ್ರಕಟ ರೈಲ್ವೆ ನೇಮಕಾತಿ ಮಂಡಳಿ 2019 ನೇ ಸಾಲಿನ ನಾನ್‌-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಹುದ್ದೆಗಳ ಅಧಿಸೂಚನೆಯ ಸಿಬಿಟಿ-1 ಪರೀಕ್ಷೆಯ ಫಲಿತಾಂಶ ಮತ್ತು ಸಿಬಿಟಿ 2 ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ರಿಜಿಸ್ಟರ್‌ ನಂಬರ್‌ ಅನ್ನು ಬಿಡುಗಡೆ ಮಾಡಿದೆ. ನವದೆಹಲಿ(ಜ.15):ರೈಲ್ವೆ ನೇಮಕಾತಿ ಮಂಡಳಿ ( ) 2019 ನೇ ಸಾಲಿನ ನಾನ್‌-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ ( ) ಹುದ್ದೆಗಳ ಅಧಿಸೂಚನೆಯ ಸಿಬಿಟಿ-1 ಪರೀಕ್ಷೆಯ ಫಲಿತಾಂಶವನ್ನು ಇಂದು ಬಿಡುಗಡೆ ಮಾಡಿದೆ. ಜೊತೆಗೆ ಈ ಪರೀಕ್ಷೆ ಬರೆದು ಸಿಬಿಟಿ 2 ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ರಿಜಿಸ್ಟರ್‌ ನಂಬರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಕೆಟಗರಿ ಮತ್ತು - ಶಾರ್ಟ್‌ಲಿಸ್ಟ್ ಆದವರ ರಿಜಿಸ್ಟರ್‌ ನಂಬರ್ ಹಾಗೂ ಕಟ್‌ ಆಫ್‌ ಅಂಕಗಳನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ಹಂತದ ಪರೀಕ್ಷೆಗೆ ಶೀಘ್ರದಲ್ಲೇ ನೋಟಿಸ್ ಬಿಡುಗಡೆ ಮಾಡಲಿದ್ದು, ನಿಗದಿತ ವೇಳಾಪಟ್ಟಿಯಂದು ಅಭ್ಯರ್ಥಿಗಳು ಸಿಬಿಟಿ 2 ಪರೀಕ್ಷೆಗೆ ಹಾಜರಾಗಬೇಕು. ಸುಮಾರು 1 ಕೋಟಿಗೂ ಹೆಚ್ಚು ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನೇಮಕಾತಿಯ ಲಿಖಿತ ಪರೀಕ್ಷೆಯನ್ನು (ಕಂಪ್ಯೂಟರ್ ಆಧಾರಿತ ಪರೀಕ್ಷೆ ಸ್ಟೇಜ್‌-1) ಡಿಸೆಂಬರ್ 28, 2020 ರಿಂದ ಜುಲೈ 31, 2021 ರವರೆಗೆ ಬರೆದಿದ್ದರು. ಹೆಚ್ಚಿನ ಮಾಹಿತಿಗೆ ://.../ ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು. ಆರ್‌ಆರ್‌ಬಿ ಎನ್‌ಟಿಪಿಸಿ ಸಿಬಿಟಿ-1 ಪರೀಕ್ಷೆ ಬರೆದ ಕರ್ನಾಟಕ ವಲಯದ ಅಭ್ಯರ್ಥಿಗಳು ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ ://.../ ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು. 2022: ಬೆಂಗಳೂರಿನ ಮೆಡಿಸಿನಲ್ ಮತ್ತು ಆರೊಮ್ಯಾಟಿಕ್ ಪ್ಲಾಂಟ್ಸ್ ನಲ್ಲಿ ಉದ್ಯೋಗ ನೇಮಕಾತಿ ರೈಲ್ವೆ ನೇಮಕಾತಿ ಮಂಡಳಿಯು 2019 ರಲ್ಲಿ 35,281 ಎನ್‌ಟಿಪಿಸಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಟೈಮ್‌ಕೀಪರ್, ಟ್ರೈನ್ ಕ್ಲರ್ಕ್, ಟಿಕೆಟ್ ಕ್ಲರ್ಕ್, ಕ್ಲರ್ಕ್-ಕಮ್-ಟೈಪಿಸ್ಟ್ ಮುಂತಾದ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಈ ಹುದ್ದೆಗಳಿಗೆ 7 ಹಂತಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯನ್ನು ಡಿಸೆಂಬರ್ 28, 2020 ರಿಂದ ಜುಲೈ 31, 2021 ರವರೆಗೆ ಏಳು ಹಂತಗಳಲ್ಲಿ ನಡೆಸಲಾಯಿತು. ಅಭ್ಯರ್ಥಿಗಳು ಅಪ್ಲಿಕೇಶನ್ ನಂಬರ್, ಜನ್ಮ ದಿನಾಂಕವನ್ನು ನಮೂದಿಸಿ ತಮ್ಮ ಫಲಿತಾಂಶ ಚೆಕ್‌ ಮಾಡಿಕೊಳ್ಳಬಹುದು. -1 ಪರೀಕ್ಷೆ ಫಲಿತಾಂಶ ಬಿಡುಗಡೆ ನಂತರದಲ್ಲಿ, -2 ಪರೀಕ್ಷೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. -1 ಪರೀಕ್ಷೆಯಲ್ಲಿ ಶಾರ್ಟ್‌ಲಿಸ್ಟ್‌ ಆದ ಅಭ್ಯರ್ಥಿಗಳು ಈ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. 2022: ಕೃಷಿ ವಿಶ್ವವಿದ್ಯಾಲಯದ ಹುದ್ದೆಗೆ ಅರ್ಜಿ ಆರ್‌ಆರ್‌ಬಿ'ಯು ಈ ನೇಮಕಾತಿ ಪ್ರಕ್ರಿಯೆ ಮೂಲಕ ಸುಮಾರು 32 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಿದೆ. ಮುಂದಿನ ಹಂತದ ಪರೀಕ್ಷೆಗೆ ಶೀಘ್ರದಲ್ಲೇ ನೋಟಿಸ್ ಬಿಡುಗಡೆ ಮಾಡಲಿದೆ. -1 ನಲ್ಲಿ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ 2 ನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (-2) ಪರೀಕ್ಷೆಯನ್ನು ತಾತ್ಕಾಲಿಕವಾಗಿ ಫೆಬ್ರವರಿ 14-18, 2022 ರವರೆಗೆ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. ಇದು ಚಾಲ್ತಿಯಲ್ಲಿರುವ ಷರತ್ತುಗಳು ಮತ್ತು ಕಾಲಕಾಲಕ್ಕೆ ಹೊರಡಿಸಲಾದ ಸರ್ಕಾರದ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ. ಫಲಿತಾಂಶ ಚೆಕ್ ಮಾಡುವ ವಿಧಾನ ಹೇಗೆ?: ರೈಲ್ವೆ ನೇಮಕಾತಿ ಮಂಡಳಿಯ ವೆಬ್‌ಸೈಟ್‌://../ಗೆ ಭೇಟಿ ನೀಡಿ. ಓಪನ್‌ ಆದ ಪೇಜ್‌ ನಲ್ಲಿ 01/2019 ()- - ಎಂದಿರುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ -2 ಪರೀಕ್ಷೆಗೆ ಆಯ್ಕೆಯಾಗಿರುವವರ ನಂಬರ್ ನೀಡಲಾಗಿದೆ. ಲೆವೆಲ್‌ 2 ರಿಂದ 6 ವರೆಗೆ ಕೆಟಗರಿವಾರು ಕಟ್‌ ಆಫ್‌ ಅಂಕಗಳನ್ನು ಚೆಕ್‌ ಮಾಡಲು ಲಿಂಕ್‌ಗಳನ್ನು ನೀಡಲಾಗಿದ್ದು, ಅಭ್ಯರ್ಥಿಗಳು ಪರಿಶೀಲನೆ ಮಾಡಿಕೊಳ್ಳಬಹುದು.