2022: ಸ್ನಾತಕೋತ್ತರ ಪದವೀಧರರು ಪೊಲೀಸ್ ಇಲಾಖೆಯ ವೈಜ್ಞಾನಿಕ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ ರಾಜ್ಯ ಪೊಲೀಸ್ ಇಲಾಖೆಯು ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಖಾಲಿ ಇರುವ ವೈಜ್ಞಾನಿಕ ಅಧಿಕಾರಿ ಹುದ್ದೆಗಳ ಭರ್ತಿಗೆ ಆಸಕ್ತ ಪುರುಷ ಮತ್ತು ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರು(ಡಿ.2):ಉದ್ಯೋಗ ಅರಸುತ್ತಿರುವವರಿಗೆ ಸಿಹಿ ಸುದ್ದಿ, ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆಯ ( ) ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದದ ಒಟ್ಟು 16 ವೈಜ್ಞಾನಿಕ ಅಧಿಕಾರಿ ( ) ಹುದ್ದೆಗಳು ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ನಾತಕೋತ್ತರ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಡಿಸೆಂಬರ್ 30 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್​ () ಮೂಲಕ ಅರ್ಜಿ ಹಾಕಬೇಕು. ಜನವರಿ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ fslab21... ಗೆ ಭೇಟಿ ನೀಡಬಹುದು. ಹುದ್ದೆಯ ಮಾಹಿತಿ:ಭೌತಶಾಸ್ತ್ರ ( ) ಸೆಕ್ಷನ್-2ಡಿಎನ್​ಎ ( ) ಸೆಕ್ಷನ್​-4ಕಂಪ್ಯೂಟರ್ ಫಾರೆನ್ಸಿಕ್ ಸೆಕ್ಷನ್-2ಮೊಬೈಲ್​ ಫಾರೆನ್ಸಿಕ್​ ಸೆಕ್ಷನ್-2ಆಡಿಯೋ ವಿಡಿಯೋ ಫಾರೆನ್ಸಿಕ್​ ಸೆಕ್ಷನ್​-2ವಿಷ ವಿಜ್ಞಾನ () ಸೆಕ್ಷನ್​-2ಜೀವಶಾಸ್ತ್ರ () ಸೆಕ್ಷನ್-2 2022: ರಾಜ್ಯ ಸಶಸ್ತ್ರ ಮೀಸಲು ಪಡೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಶೈಕ್ಷಣಿಕ ವಿದ್ಯಾರ್ಹತೆ:ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇ. 55 ರಷ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ/ಎಂ.ಟೆಕ್​ ಪೂರ್ಣಗೊಳಿಸಿರಬೇಕು. ಫಿಜಿಕ್ಸ್​ ಸೆಕ್ಷನ್ ಗೆ ಅರ್ಜಿ ಸಲ್ಲಿಸುವವರು ಭೌತಶಾಸ್ತ್ರ/ಫಾರೆನ್ಸಿಕ್​ ಸೈನ್ಸ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.ಡಿಎನ್​ಎ ಸೆಕ್ಷನ್ ಗೆ ಅರ್ಜಿ ಸಲ್ಲಿಸುವವರು ಬಾಟನಿ/ಜೂಯಾಲಜಿ/ ಬಯೋ ಕೆಮಿಸ್ಟ್ರಿ/ ಮೈಕ್ರೋಬಯಾಲಜಿ/ ಲೈಫ್​ ಸೈನ್ಸಸ್​/ಫಾರೆನ್ಸಿಕ್​ ಸೈನ್ಸ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.ಕಂಪ್ಯೂಟರ್ ಫಾರೆನ್ಸಿಕ್ ಸೆಕ್ಷನ್, ಮೊಬೈಲ್​ ಫಾರೆನ್ಸಿಕ್​ ಸೆಕ್ಷನ್ ಮತ್ತು ಆಡಿಯೋ ವಿಡಿಯೋ ಫಾರೆನ್ಸಿಕ್​ ಸೆಕ್ಷನ್ ಅರ್ಜಿ ಸಲ್ಲಿಸುವವರು ಕಂಪ್ಯೂಟರ್​ ಸೈನ್ಸ್​/ಎಲೆಕ್ಟ್ರಾನಿಕ್ಸ್​/ ಫಿಜಿಕ್ಸ್​/ ಫಾರೆನ್ಸಿಕ್​ ಸೈನ್ಸ್​​/ ಇನ್ಫರ್ಮೇಶನ್ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಕಂಪ್ಯೂಟರ್​ ಸೈನ್ಸ್​/ಎಲೆಕ್ಟ್ರಾನಿಕ್ಸ್/ಇನ್ಫರ್ಮೇಶನ್ ಸೈನ್ಸ್​​ನಲ್ಲಿ ಎಂ.ಟೆಕ್ ಪೂರ್ಣಗೊಳಿಸಿರಬೇಕು.ಟಾಕ್ಸಿಕೋಲಾಜಿ ಸೆಕ್ಷನ್ ಗೆ ಅರ್ಜಿ ಸಲ್ಲಿಸುವವರು ಕೆಮಿಸ್ಟ್ರಿ/ ಫಾರ್ಮಾಕಾಲಜಿ/ ಬಯೋ ಕೆಮಿಸ್ಟ್ರಿ/ ಫಾರೆನ್ಸಿಕ್ ಸೈನ್ಸ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.ಬಯೋಲಾಜಿ ಸೆಕ್ಷನ್ ಗೆ ಅರ್ಜಿ ಸಲ್ಲಿಸುವವರು ಬಾಟನಿ/ಜೂಯಾಲಜಿ/ಬಯೋ ಕೆಮಿಸ್ಟ್ರಿ/ ಲೈಫ್​​ ಸೈನ್ಸ್​/ಫಾರೆನ್ಸಿಕ್ ಸೈನ್ಸ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. 2022: ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ ಕೊಟ್ಟ ಕರ್ನಾಟಕ, ಇಂದೇ ಅರ್ಜಿ ಸಲ್ಲಿಸಿ ಅನುಭವ:ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಸರ್ಕಾರದಿಂದ ಗುರುತಿಸಲ್ಪಟ್ಟ ಯಾವುದೇ ಸಂಶೋಧನಾ ಸಂಸ್ಥೆಯಲ್ಲಿ ರಿಸರ್ಚ್​ ಸ್ಕಾಲರ್​​ ಆಗಿ ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದ ಸಂಶೋಧನಾ ಅನುಭವವನ್ನು ಹೊಂದಿರಬೇಕು. ವಯೋಮಿತಿ:ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯ ವಯಸ್ಸು 28/01/2022 ಕ್ಕೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 35 ವರ್ಷದೊಳಗಿರಬೇಕು. ಅರ್ಜಿ ಸಲ್ಲಿಸುವ //- ಅಭ್ಯರ್ಥಿಗಳಿಗೆ 05 ವರ್ಷ ಮತ್ತು (-2A/2B/3A/3B) ಅಭ್ಯರ್ಥಿಗಳಿಗೆ 03 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅರ್ಜಿ ಶುಲ್ಕ ವಿವರ://- ಅಭ್ಯರ್ಥಿಗಳು: 100 ರೂ., ಸಾಮಾನ್ಯ ಮತ್ತು ಅಭ್ಯರ್ಥಿಗಳು 250 ರೂ. ಅರ್ಜಿ ಶುಲ್ಕ ಆನ್‌ಲೈನ್ ಅಥವಾ ನಗದು ಮೂಲಕ ಪಾವತಿಸಬೇಕು. ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ ಜನವರಿ 31 ,2022 ಆಯ್ಕೆ ಪ್ರಕ್ರಿಯೆ:ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 40,900-78,200 ರೂ ವೇತನ ದೊರೆಯಲಿದೆ. ಮತ್ತು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ :rec21.-./ಅಥವಾfslab21.../ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.