2022: ಆದವರಿಗೆ ಕನ್ನಡ ಸ್ಪಷ್ಟವಾಗಿ ಬರೆಯಲು ಬಂದರೆ ನಿಮ್ಹಾನ್ಸ್​​ನಲ್ಲಿ ಉದ್ಯೋಗ ಬೆಂಗಳೂರು(ಡಿ.27):ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ( ) ಇಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 1 ಜೂನಿಯರ್ ರಿಸರ್ಚ್​​ ಫೆಲೋ ( ) ಹುದ್ದೆ ಖಾಲಿ ಇದ್ದು, ಎಂಎಸ್ಸಿ (), ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಡಿಸೆಂಬರ್ 24ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್ ()​ ಮೂಲಕ ಅರ್ಜಿ ಸಲ್ಲಿಸಲು. ಜನವರಿ 2, 2022 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು .. ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಶೈಕ್ಷಣಿಕ ವಿದ್ಯಾರ್ಹತೆ:ನಿಮ್ಹಾನ್ಸ್​​ನಲ್ಲಿ ಖಾಲಿ ಇರುವ ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಆಡಿಯಾಲಜಿ ಮತ್ತು ಸ್ಪೀಚ್​ & ಲಾಂಗ್ವೇಜ್​ ಫೆಥಾಲಜಿಯಲ್ಲಿ ಎಂ.ಎಸ್ಸಿ, ಸ್ನಾತಕೋತ್ತರ ಪದವಿ ಪಡೆದಿರಬೇಕು. ಮಾತ್ರವಲ್ಲ ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಮಾತನಾಡಲು ಬರಬೇಕು. ಆಯ್ಕೆ ಪ್ರಕ್ರಿಯೆ ಮತ್ತು ವೇತನ:ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗೆ ತಿಂಗಳಿಗೆ 31,000ರೂ ವೇತನ ನೀಡಲಾಗುತ್ತದೆ. ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸುವ ವಿಧಾನ:ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ- @. ಗೆ ಜನವರಿ 2, 2022ರೊಳಗೆ ಕಳುಹಿಸಲು ಕೋರಲಾಗಿದೆ. 2022: ಇಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಅವಕಾಶ ವೈದ್ಯರು, ಫಿಸಿಯೋಥೆರಪಿಸ್ಟ್, ಫಿಸಿಷಿಯನ್, ನರ್ಸ್ ಉದ್ಯೋಗಕ್ಕೆ ಹಾವೇರಿಯಲ್ಲಿ ನೇರ ಸಂದರ್ಶನ ಡಿ.28 ಕೊನೆಯ ದಿನ:ಹಾವೇರಿ () ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಎನ್‌ಪಿಸಿಡಿಸಿಎಸ್ ಕಾರ್ಯಕ್ರಮದಡಿ 9 ಎಂಬಿಬಿಎಸ್ ವೈದ್ಯರು (), 1 ಫಿಸಿಯೋಥೆರಪಿಸ್ಟ್, 1 ಫಿಸಿಷಿಯನ್ () ಮತ್ತು 3 ಶುಶ್ರೂಷಕರು ()ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನದ ಮೂಲಕ ಆಹ್ವಾನಿಸಲಾಗಿದೆ. ಆಸಕ್ತರು ನೇಮಕಾತಿ ಬಗೆಗೆ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 28,2021ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ://../ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಿಕೊಳ್ಳಲು ಕೋರಲಾಗಿದೆ. ವಿದ್ಯಾರ್ಹತೆ ವಿವರ:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿ ನೇಮಕಾತಿಯ ಹುದ್ದೆಯ ನೇಮಕಾತಿಯಲ್ಲಿ ಭಾಗವಹಿಸುವ ಫಿಜಿಷಿಯನ್, ಎಂಬಿಬಿಎಸ್ ವೈದ್ಯರು, ಫಿಸಿಯೋಥೆರಪಿಸ್ಟ್ ಮತ್ತು ಶುಶ್ರೂಷಕರು ಹುದ್ದೆಗಳಿಗೆ ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ, ಬಿಪಿಟಿ, ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. 2022: ಮೋದಿ ಜತೆ ಮಾತನಾಡ ಬಯಸುವ ವಿದ್ಯಾರ್ಥಿಗಳಿಗೆ ಡಿ.28 ರಿಂದ ನೋಂದಣಿ ವಯೋಮಿತಿ ವಿವರ:ನೇಮಕಾತಿಯ ಫಿಜಿಷಿಯನ್, ಎಂಬಿಬಿಎಸ್ ವೈದ್ಯರು, ಫಿಸಿಯೋಥೆರಪಿಸ್ಟ್ ಮತ್ತು ಶುಶ್ರೂಷಕರು ಹುದ್ದೆಗಳಿಗೆ ಅನುಸಾರ ಗರಿಷ್ಟ 40 ಮತ್ತು 70 ವರ್ಷ ವಯೋಮಿತಿ ಇರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ. ಸಂದರ್ಶನದ ವಿವರ:ನೇಮಕಾತಿಗಾಗಿ ಡಿಸೆಂಬರ್ 28,2021ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ನೇರ ಸಂದರ್ಶನ ನಡೆಸಲಾಗುತ್ತಿದೆ. ಕಚೇರಿ ವಿಳಾಸ :ಜಿಲ್ಲಾ ಸರ್ವೇಕ್ಷಣಾ ಘಟಕ,ಜಿಲ್ಲಾ ಆಸ್ಪತ್ರೆ ಹಾವೇರಿ ಆವರಣ,ಹಾವೇರಿ.