2022: ವಿಜಯಪುರ & ಬಾಗಲಕೋಟೆ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಕೆಲಸ ಖಾಲಿ ಇದೆ ಬೆಂಗಳೂರು(ಡಿ.20):ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ ( )ದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ( & - )ದಲ್ಲಿನ ವಿವಿಧ ವಿಭಾಗದಲ್ಲಿ ಖಾಲಿ ಇರುವ ಒಟ್ಟು 39 ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 20,2022 ಕೊನೆಯ ದಿನಾಂಕವಾಗಿದ್ದು, ಒಕ್ಕೂಟದ ಅಧಿಕೃತ ವೆಬ್‌ಸೈಟ್ .. ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಖುದ್ದಾಗಿ/ ಅಂಚೆ/ ಕೋರಿಯರ್ ಮೂಲಕ ಅರ್ಜಿ ಸಲ್ಲಿಕೆ ಮಾಡಿದರೆ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟವಾಜಗಿ ತಿಳಿಸಲಾಗಿದೆ.ಸಹಾಯಕ ವ್ಯವಸ್ಥಾಪಕರು, ಸಿಸ್ಟ್ಂ ಅಧಿಕಾರಿ, ತಾಂತ್ರಿಕ ಅಧಿಕಾರಿ, ಮಾರುಕಟ್ಟೆ ಅಧೀಕ್ಷಕರು, ವಿಸ್ತರಣಾಧಿಕಾರಿ, ಮಾರುಕಟ್ಟೆ ಸಹಾಯಕರು, ಸೇರಿದಂತೆ ಒಟ್ಟು 39 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ://./ ಗೆ ಭೇಟಿ ನೀಡಬಹುದು. 2022: ಬರೋಬ್ಬರಿ 2980 ಲ್ಯಾಬ್ ಟೆಕ್ನಿಷಿಯನ್ ಹುದ್ದೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಲ್ಲಿ ಖಾಲಿ ಇರುವ 39 ಹುದ್ದೆಗಳ ವಿವರ ಇಂತಿದೆಸಹಾಯಕ ವ್ಯವಸ್ಥಾಪಕರು - 5 ಹುದ್ದೆಗಳುಸಿಸ್ಟ್ಂ ಅಧಿಕಾರಿ - 1 ಹುದ್ದೆತಾಂತ್ರಿಕ ಅಧಿಕಾರಿ - 2 ಹುದ್ದೆಗಳುಮಾರುಕಟ್ಟೆ ಅಧೀಕ್ಷಕರು - 1 ಹುದ್ದೆವಿಸ್ತರಣಧಿಕಾರಿ - 8 ಹುದ್ದೆಗಳುಮಾರುಕಟ್ಟೆ ಸಹಾಯಕರು - 2 ಹುದ್ದೆಗಳುಕೆಮಿಸ್ಟ್ ದರ್ಜೆ - 2 ಹುದ್ದೆಗಳುಆಡಳಿತ ಸಹಾಯಕ - 1 ಹುದ್ದೆಲೆಕ್ಕ ಸಹಾಯಕರು - 4 ಹುದ್ದೆಗಳುಕಿರಿಯ ಸಿಸ್ಟ್ಂ ಆಪರೇಟರ್ - 2 ಹುದ್ದೆಗಳುಕಿರಿಯ ತಾಂತ್ರಿಕ - 2 ಹುದ್ದೆಗಳುಹಾಲು ರವಾನೆಗಾರರು - 4 ಹುದ್ದೆಗಳು 2022: ರಾಜ್ಯದ ಕೆಯುಐಡಿಎಫ್‌ಸಿಯಲ್ಲಿ ಖಾಲಿ ಇರುವ 30 ವಿವಿಧ ಹುದ್ದೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಲ್ಲಿಸುವ ಆಸಕ್ತರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಯಾವುದೇ ಪದವಿ ಮುಗಿಸಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ, ಎಸ್​ಎಸ್​ಎಲ್​​ಸಿ, ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-35 ವರ್ಷದೊಳಗಿರಬೇಕು. 2ಎ, 2ಬಿ, 3ಎ ಮತ್ತು 3ಬಿ ಯ ಗರಿಷ್ಟ 38 ವರ್ಷ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪ್ರವರ್ಗ-1ರ ಗರಿಷ್ಟ 40 ವರ್ಷ ವಯೋಮಿತಿಯೊಳಗಿರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯಯನ್ನು ನೀಡಲಾಗಿರುತ್ತದೆ. ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ: ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 1000/-ರೂ ಮತ್ತು ಪರಿಶಿಷ್ಟ ಜಾತಿ/ಪರಿ‍ಶಿಷ್ಟ ಪಂಗಡ/ಪ್ರವರ್ಗ-1ರ ಅಭ್ಯರ್ಥಿಗಳು 500/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮೀಸಲಾದ ವೇತನ ವಿವರ ಇಂತಿದೆಸಹಾಯಕ ವ್ಯವಸ್ಥಾಪಕರು - ಮಾಸಿಕ ರೂ. 52,650- 97,100ಸಿಸ್ಟ್ಂ ಅಧಿಕಾರಿ -ಮಾಸಿಕ ರೂ. 43,100- 83,900ತಾಂತ್ರಿಕ ಅಧಿಕಾರಿ - ಮಾಸಿಕ ರೂ. 43,100 - 83,900ಮಾರುಕಟ್ಟೆ ಅಧೀಕ್ಷಕರು - ಮಾಸಿಕ ರೂ. 40,900- 78,200ವಿಸ್ತರಣಧಿಕಾರಿ - ಮಾಸಿಕ ರೂ. 33,450- 62,600ಮಾರುಕಟ್ಟೆ ಸಹಾಯಕರು - ಮಾಸಿಕ ರೂ. 27,650- 52,650ಕೆಮಿಸ್ಟ್ ದರ್ಜೆ - ಮಾಸಿಕ ರೂ. 27,650- 52,650ಆಡಳಿತ ಸಹಾಯಕ -ಮಾಸಿಕ ರೂ. 27,650- 52,650ಲೆಕ್ಕ ಸಹಾಯಕರು -ಮಾಸಿಕ ರೂ. 27,650- 52,650ಕಿರಿಯ ಸಿಸ್ಟ್ಂ ಆಪರೇಟರ್ - ಮಾಸಿಕ ರೂ. 27,650- 52,650ಕಿರಿಯ ತಾಂತ್ರಿಕ - ಮಾಸಿಕ ರೂ. 21,400- 42,000ಹಾಲು ರವಾನೆಗಾರರು - ಮಾಸಿಕ ರೂ. 21,400- 42,000