2021: ಅಂಚೆ ಇಲಾಖೆಯಲ್ಲಿ ನೇಮಕಾತಿ, , ಮುಗಿಸಿದವರು ಅರ್ಜಿ ಹಾಕಿ * ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ*ಎಸ್‌ಎಸ್ಎಲ್‌ಸಿ, ಪಿಯುಸಿ ಓದಿದವರಿಗೆ ಅಂಚೆ ಇಲಾಖೆಯಲ್ಲಿ ಕೆಲಸ* ಒಟ್ಟು 60 ಹುದ್ದೆಗಳ ಭರ್ತಿಗೆ ನಡೆಯುತ್ತಿರುವ ನೇಮಕಾತಿ ಬೆಂಗಳೂರು, (ಡಿ.19):ಅಂಚೆ ಇಲಾಖೆ, ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಕಚೇರಿ, ಬಿಹಾರ ವೃತ್ತದಲ್ಲಿ( 2021) ಖಾಲಿ ಇರುವ ವಿವಿಧ 60 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. 'ಸ್ಪೋರ್ಟ್ಸ್ ಕೋಟಾ' ( )ಅಡಿಯಲ್ಲಿ ನೇರ ನೇಮಕಾತಿಗಾಗಿ ಖಾಲಿ ಹುದ್ದೆಗಳನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಅಂಚೆ ಇಲಾಖೆ, ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಕಚೇರಿ, ಬಿಹಾರ ವೃತ್ತ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಖಾಸಗಿ, ಸರ್ಕಾರಿ ಹುದ್ದೆಗಳ ನೇಮಕಾತಿ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ ಅಂಚೆ ಸಹಾಯಕ( ()) - 31, ವಿಂಗಡಣೆ ಸಹಾಯಕ ( ()) - 11, ಪೋಸ್ಟ್‌ಮ್ಯಾನ್()-o5, ಎಂಟಿಎಸ್(ಮಲ್ಟಿ-ಟಾಸ್ಕಿಂಗ್ ಸ್ಟಾಫ್)೯MTS )-13 ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಿದ್ದು 31.12.2021ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ವಯೋಮಿತಿ: * ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್: ಅಭ್ಯರ್ಥಿಯು 18 ರಿಂದ 27 ವರ್ಷ ವಯಸ್ಸಿನವರಾಗಿರಬೇಕು.* ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ: ಅಭ್ಯರ್ಥಿಯು 18 ರಿಂದ 25 ವರ್ಷ ವಯಸ್ಸಿನವರಾಗಿರಬೇಕು.ಪೋಸ್ಟ್‌ ಮ್ಯಾನ್: ಅಭ್ಯರ್ಥಿಯು 18 ರಿಂದ 27 ವರ್ಷ ವಯಸ್ಸಿನವರಾಗಿರಬೇಕು. ವೇತನ ಶ್ರೇಣಿ* ಪೋಸ್ಟಲ್/ಸಾರ್ಟಿಂಗ್ ಅಸಿಸ್ಟೆಂಟ್ - ಪೇ ಮ್ಯಾಟ್ರಿಕ್ಸ್‌ನಲ್ಲಿ ಹಂತ 4 (ರೂ. 25,500-81,100).* ಪೋಸ್ಟ್‌ಮ್ಯಾನ್ - ಪೇ ಮ್ಯಾಟ್ರಿಕ್ಸ್‌ನಲ್ಲಿ ಹಂತ 3 (ರೂ. 21,700-69,100).* ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ - ಪೇ ಮ್ಯಾಟ್ರಿಕ್ಸ್‌ನಲ್ಲಿ ಹಂತ 1 (ರೂ. 18,000-56,900).*ಅರ್ಜಿ ಶುಲ್ಕವನ್ನು ಒಂದು ಹುದ್ದೆಗೆ .100 ರೂ. ನಿಗದಿಪಡಿಸಲಾಗಿದೆ. * ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯ/ಸಂಸ್ಥೆಯಿಂದ 10ನೇ, 12ನೇ ತರಗತಿ ಅಥವಾ ತತ್ಸಮಾನ ತೇರ್ಗಡೆಯಾಗಿರಬೇಕು ಪ್ರಮುಖ ದಿನಾಂಕಗಳು* ಅರ್ಜಿ ಸಲ್ಲಿಸಲು ಕೊನೆ ದಿನ: 31.12.2021* ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 31.12.2021 ಅರ್ಜಿ ಸಲ್ಲಿಸುವುದು ಹೇಗೆ?ಲಕೋಟೆಗಳನ್ನು "ಪೋಸ್ಟಲ್ ಅಸಿಸ್ಟೆಂಟ್ / ಸಾರ್ಟಿಂಗ್ ಅಸಿಸ್ಟೆಂಟ್ / ಪೋಸ್ಟ್‌ಮ್ಯಾನ್ / ಎಂಟಿಎಸ್ ಹುದ್ದೆಗೆ ನೇಮಕಾತಿಗಾಗಿ ಅರ್ಜಿಯನ್ನು ಬಿಹಾರ ಪೋಸ್ಟಲ್ ಸರ್ಕಲ್‌ನಲ್ಲಿ ಸ್ಪೋರ್ಟ್ಸ್ ಕೋಟಾದಡಿಯಲ್ಲಿ" ಎಂದು ಬರೆಯಬೇಕು ಮತ್ತು ನೋಂದಾಯಿತ / ಸ್ಪೀಡ್ ಪೋಸ್ಟ್ ಮೂಲಕ 5th , / , , – 800001 ಈ ವಿಳಾಸಕ್ಕೆ ಅರ್ಜಿ ಕಳುಹಿಸಬೇಕು,