: 2022ರ ಸರ್ಕಾರಿ ರಜೆಗಳ ಪಟ್ಟಿ ಇಲ್ಲಿ ಬೆಂಗಳೂರು (ಡಿ.08): ರಾಜ್ಯ ಸರ್ಕಾರ ( ) 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳು ಹಾಗೂ ಸರ್ಕಾರಿ ನೌಕರರಿಗೆ ಪರಿಮಿತ ರಜಾ () ದಿನಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಭಾನುವಾರ, ಎರಡು ಮತ್ತು ನಾಲ್ಕನೇ ಶನಿವಾರದ ರಜೆಗಳನ್ನು ಹೊರತುಪಡಿಸಿ ಹಬ್ಬಗಳು ಸೇರಿ ಒಟ್ಟು 16 ದಿನಗಳ ರಜೆಯನ್ನು ಘೋಷಿಸಲಾಗಿದೆ. ಕೆಲವು ಸಾರ್ವತ್ರಿಕ ರಜಾ ದಿನಗಳು ಭಾನುವಾರ, ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಬರುವುದರಿಂದ ಪ್ರತ್ಯೇಕ ರಜೆ ದಿನ ಎಂದು ಪರಿಗಣನೆ ಮಾಡಿಲ್ಲ. 2022ರಲ್ಲಿರಾಜ್ಯಸರ್ಕಾರಿನೌಕರರಿಗೆ 22 ದಿನಗಳ ಪರಿಮಿತರಜಾ ದಿನಗಳನ್ನು ಘೋಷಣೆ ಮಾಡಲಾಗಿದೆ. ಅವುಗಳ ಪಟ್ಟಿಯನ್ನೂ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ. ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಜ.15 ಮಕರ ಸಂಕ್ರಾಂತಿ ಜ.26 ಗಣರಾಜ್ಯೋತ್ಸವ ಮಾ.1 ಮಹಾಶಿವರಾತ್ರಿ ಏ.2 ಯುಗಾದಿ ಏ.14 ಡಾ.ಬಿ.ಆರ್‌.ಅಂಬೇಡ್ಕರ್‌/ಮಹಾವೀರ ಜಯಂತಿ ಏ.15 ಗುಡ್‌ಫ್ರೈಡೆ ಮೇ 3 ಬಸವ ಜಯಂತಿ/ಅಕ್ಷಯ ತೃತೀಯ ಆ.9 ಮೊಹರಂ ಕಡೇ ದಿನ ಆ.15 ಸ್ವಾತಂತ್ರ್ಯ ದಿನಾಚರಣೆ ಆ.31 ವರಸಿದ್ಧಿ ವಿನಾಯಕ ವ್ರತ ಅ.4 ಮಹಾನವಮಿ/ಆಯುಧ ಪೂಜೆ ಅ.5 ವಿಜಯದಶಮಿ ಅ.24 ನರಕ ಚತುದರ್ಶಿ ಅ.26 ದೀಪಾವಳಿ ನ.1 ಕನ್ನಡ ರಾಜ್ಯೋತ್ಸವ ನ.11 ಕನಕದಾಸ ಜಯಂತಿ ಪರಿಮಿತ ರಜಾದಿನಗಳ ಪಟ್ಟಿ ಜ.1 ಹೊಸ ವರ್ಷ ಫೆ.10 ಮಧ್ವ ನವಮಿ ಮಾ.17 ಹೋಳಿ ಹಬ್ಬ ಮಾ.18 ಶಬ್‌ ಇ ಬರಾತ್‌ ಏ.6 ದೇವರ ದಾಸಿಮಯ್ಯ ಜಯಂತಿ ಏ.16 ಹೋಳಿ ಹಬ್ಬ ಏ.28 ಪಬ್‌ ಎ ಖಾದ್ರ ಏ.29 ಜುಮತ್‌ ಅಲ್‌ ವಿದಾ ಮೇ5 ರಾಮಾನುಜಾಚಾರ್ಯ ಜಯಂತಿ ಮೇ6 ಶಂಕರಾಚಾರ್ಯ ಜಯಂತಿ ಮೇ16 ಬುದ್ಧ ಪೂರ್ಣಿಮಾ ಆ.2 ಋುಗ್‌ ಉಪಕರ್ಮ ಆ.5 ವರಮಹಾಲಕ್ಷ್ಮೇ ವ್ರತ ಆ.11 ಯಜುರ್‌ ಉಪಕರ್ಮ ಆ.19 ಶ್ರೀಕೃಷ್ಣ ಜನ್ಮಾಷ್ಟಮಿ ಆ.30 ಸ್ವರ್ಣಗೌರಿ ವ್ರತ ಸೆ.8 ತಿರು ಓಣಂ, ಕನ್ಯಮಾರಿಯಮ್ಮ ಜಯಂತಿ ಸೆ.9 ಅನಂತ ಪದ್ಮನಾಭ ವ್ರತ ಸೆ.17 ವಿಶ್ವಕರ್ಮ ಜಯಂತಿ ಅ.18 ತುಲಾ ಸಂಕ್ರಮಣ ನ.8 ಗುರುನಾನಕ್‌ ಜಯಂತಿ ಡಿ.8 ಹುತ್ತರಿ ಹಬ್ಬ 23 ಕ್ಕೂ ಹೆಚ್ಚು ಸಾರ್ವಜನಿಕ ರಜೆ ಪ್ರಸಕ್ತ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷವನ್ನು( 2022) ಬರಮಾಡಿಕೊಳ್ಳಲು ತಯಾರಿ ಆರಂಭಗೊಂಡಿದೆ. 2021ರ ವರ್ಷ ಹಲವು ಏಳು ಬೀಳುಗಳನ್ನು ಕಂಡ ವರ್ಷವಾಗಿದೆ. ಇದೀಗ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಮತ್ತೊಂದು ಕಾರಣವಿದೆ. 2022ರ ಸಾರ್ವಜನಿಕ ರಜೆ() ಪಟ್ಟಿಗೆ ಕ್ಯಾಬಿನೆಟ್ ಅನುಮೋದನೆ() ನೀಡಿದೆ. ಮುಂದಿನ ವರ್ಷ 23ಕ್ಕೂ ಹೆಚ್ಚು ಸಾರ್ವಜನಿಕ ರಜೆಗೆ( ) ಅನುಮೋದನೆ ನೀಡಲಾಗಿದೆ. ಕ್ಯಾಬಿನೆಟ್ ಅನುಮೋದನೆ ನೀಡಿರವ ರಜೆ ಪಟ್ಟಿಯಲ್ಲಿ ಎರಡನೇ ಹಾಗೂ ನಾಲ್ಕನೇ ಶನಿವಾರ ರಜೆಗಳು ಸೇರಿಸಲಾಗಿಲ್ಲ. ಪ್ರತಿ ತಿಂಗಳ 2 ಮತ್ತು 4ನೇ ಶನಿವಾರದ ರಜೆ ಸೇರಿದರೆ ವರ್ಷದಲ್ಲಿ 24 ರಜೆಗಳು ಸಿಗಲಿದೆ. ಇದರೊಂದಿಗೆ 23ಕ್ಕೂ ಹೆಚ್ಚು ಸಾರ್ವಜನಿಕ ರಜೆಗಳು ಸಿಗಲಿದೆ. :ಡಿಸೆಂಬರ್ ನಲ್ಲಿ12 ದಿನ ಬ್ಯಾಂಕ್ ಕ್ಲೋಸ್! 2022ರ ಕ್ಯಾಲೆಂಡರ್ ವರ್ಷದ ರಜಾದಿನಗಳು:ಜನವರಿ 15, 2022, ಶನಿವಾರ, ಮಕರ ಸಂಕ್ರಾತಿ, ಉತ್ತರಾಯಣ ಪುಣ್ಯಕಾಲಜನವರಿ 26, 2022, ಬುಧವಾರ, ಗಣರಾಜ್ಯೋತ್ಸವ ದಿನಮಾರ್ಚ್ 1, 2022, ಮಂಗಳವಾರ, ಮಹಾ ಶಿವರಾತ್ರಿಎಪ್ರಿಲ್ 1, 2022, ಶುಕ್ರವಾರ, ಕ್ಲೋಸಿಂಗ್ ಆಫ್ ಬ್ಯಾಂಕ್ ಅಕೌಂಟ್(ಆರ್ಥಿಕ ವರ್ಷಾಂತ್ಯ ದಿನ)ಎಪ್ರಿಲ್ 2, 2022, ಶನಿವಾರ, ಯುಗಾದಿಎಪ್ರಿಲ್ 14, 2022, ಗುರುವಾರ, ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿಎಪ್ರಿಲ್ 15, 2022, ಶುಕ್ರವಾರ, ಗುಡ್ ಫ್ರೈಡೇಮೇ 1, 2022, ಭಾನುವಾರ, ಕಾರ್ಮಿಕರ ದಿನಮೇ, 3, 2022, ಮಂಗಳವಾರ, ಬಸವ ಜಯಂತಿ, ಅಕ್ಷಯ ತೃತೀಯಜುಲೈ 10, 2022, ಭಾನುವಾರ, ಬಕ್ರಿದ್ಆಗಸ್ಟ್ 9, 2022, ಮಂಗಳವಾರ, ಮೊಹರಂಆಗಸ್ಟ್ 15, 2022, ಸ್ವಾತಂತ್ರ್ಯ ದಿನಾಚರಣೆಆಗಸ್ಟ್ 31, 2022, ಬುಧವಾರ, ವರಸಿದ್ದಿ ವಿನಾಯಕ ವ್ರತಸೆಪ್ಟೆಂಬರ್ 25, 2022, ಭಾನುವಾರ , ಮಹಾಲಯ ಅಮವಾಸ್ಯೆಅಕ್ಟೋಬರ್ 2, 2022, ಭಾನುವಾರ, ಗಾಂಧಿ ಜಯಂತಿಅಕ್ಟೋಬರ್ 4, 2022, ಮಂಗಳವಾರ, ಮಹಾನವಮಿ, ಆಯುಧಪೂಜೆಅಕ್ಟೋಬರ್ 5, 2022, ಬುಧವಾರ, ವಿಜಯದಶಮಿಅಕ್ಟೋಬರ್ 9, 2022, ಭಾನುವಾರ, ವಾಲ್ಮೀಕಿ ಜಯಂತಿಅಕ್ಟೋಬರ್ 24, 2022, ಸೋಮವಾರ, ನರಕ ಚತುರ್ದಶಿಅಕ್ಟೋಬರ್ 26, 2022, ಬುಧವಾರ, ಬಲಿಪಾಡ್ಯಮಿ, ದೀಪಾವಳಿನವೆಂಬರ್ 1, 2022, ಮಂಗಳವಾರ, ಕನ್ನಡ ರಾಜ್ಯೋತ್ಸವನವೆಂಬರ್ 11, 2022, ಶುಕ್ರವಾರ, ಕನಕದಾಸ ಜಯಂತಿಡಿಸೆಂಬರ್ 25, 2022, ಭಾನುವಾರ, ಕ್ರಿಸ್ಮಸ್ 23 ಸಾರ್ವಜನಿಕ ರಜೆಗಳನ್ನು ಹೊರತುಪಡಿಸಿ ಭಾನುವಾರ ರಜೆಯೂ ಸೇರಿಕೊಳ್ಳಲಿದೆ. ಆದರೆ ಈ ಬಾರಿ 5 ಸಾರ್ವಜನಿಕ ರಜೆಗಳು ಭಾನುವಾರ ಬಂದಿದೆ. ಇದು ಹಲವರಿಗೆ ಕೊಂಚ ನಿರಾಸೆ ತರುವುದು ಸುಳ್ಳಲಿಲ್ಲ. ಭಾನುವಾರ ()ಹೊರತು ಪಡಿಸಿ ಇತರ ದಿನಗಳಲ್ಲಿ ಈ ಸಾರ್ವಜನಿಕ ರಜೆ ಆಗಮಿಸಿದ್ದರೆ ಸಂಭ್ರಮ ಮತ್ತಷ್ಟು ಡಬಲ್ ಅನ್ನೋದು ಹಲವರ ಮಾತಾಗಿದೆ. 7th : ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಬಂಪರ್ ಕೊಡುಗೆ ಕರ್ನಾಟಕದಲ್ಲಿ() ಕೆಲ ಜಿಲ್ಲೆಗಳಲ್ಲಿ ಅಲ್ಲಿನ ವಿಶೇಷತೆಗಳಿಗೆ ಅನುಗುಣವಾಗಿ ರಜೆಗಳಿವೆ. ಉದಾಹರಣೆಗ ಕೊಡಗು() ಜಿಲ್ಲೆಯಲ್ಲಿ ಸೆಪ್ಟೆಂಬರ್ 3, 2022ರಂದು ಕೈಲ್ ಮೂಹೂರ್ತಕ್ಕಾಗಿ ರಜೆ ನೀಡಲಾಗಿದೆ. ಇನ್ನು ಅಕ್ಟೋಬರ್ 18 ರಂದು ಕಾವೇರಿ ಸಂಕ್ರಮಣ ಹಾಗೂ ಡಿಸೆಂಬರ್ 8 ರಂದು ಹುತ್ತರಿಗೆ ರಜೆ ನೀಡಲಾಗಿದೆ. ಕರ್ನಾಟಕ ಇತರ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಜಾತ್ರೆ ಸೇರಿದಂತೆ ಇತರ ವಿಶೇಷ ದಿನಗಳಿಗೆ ರಜೆ ನೀಡಲಾಗಿದೆ. ಇದೀಗ ಈ ರಜಾ ದಿನಗಳಲ್ಲಿ ಕೊರೋನಾ ಎಚ್ಚರಿಕೆಯೊಂದಿಗೆ ರಜಾ ದಿನ ಪ್ಲಾನ್ ಮಾಡಿಕೊಳ್ಳಬಹುದು.