: ಮನೆಯಿಂದ ಕೆಲಸ ಮಾಡುತ್ತಿರುವವರಿಗೆ ಗುಡ್ ನ್ಯೂಸ್, ಕೇಂದ್ರದಿಂದ ಹೊಸ ಕಾನೂನು ನವದೆಹಲಿ (ಡಿ.7):ಕೊರೊನಾ ನಂತರ ವರ್ಕ್ ಫ್ರಂ ಹೋಮ್ ( ) ಪಾಲಿಸಿ ಜಾರಿಗೆ ಬಂದಿತ್ತು. ಆದರೆ ಕಚೇರಿಗಿಂತ ಮನೆಯಲ್ಲಿರುವ ಉದ್ಯೋಗಿಗಳು () ಹೆಚ್ಚು ಕೆಲಸ ಮಾಡ್ತಿದ್ದಾರೆ. ಇದು ಅವರ ಒತ್ತಡವನ್ನು ಹೆಚ್ಚಿಸಿದೆ. ಮನೆಯಲ್ಲಿಯೇ ಕೆಲಸ ಮಾಡುವುದು ನಿಂದ ಹಿಂಸೆಯಾಗ್ತಿದೆ ಎನ್ನುವವರಿಗೆ ಖುಷಿ ಸುದ್ದಿಯೊಂದಿದೆ. ಕೇಂದ್ರ ಸರಕಾರ ( ) ಶೀಘ್ರದಲ್ಲೇ ಮನೆಯಿಂದಲೇ ಕಛೇರಿ ಕೆಲಸ ಮಾಡುತ್ತಿರುವ ವಿಚಾರವಾಗಿ ಕಾನೂನು () ಒಂದನ್ನು ರಚಿಸಲಿದೆ. ಇದರಲ್ಲಿ ಕಂಪನಿಯು () ತನ್ನ ಉದ್ಯೋಗಿ ಮನೆಯಿಂದ ಕೆಲಸ ಮಾಡುವಾಗ () ಯಾವ ರೀತಿಯಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬುದನ್ನು ಇದರಲ್ಲಿ ಉಲ್ಲೇಖಿಸಲಾಗುವುದು. ಕೋವಿಡ್ -19 ( 19) ಹಿನ್ನೆಲೆ ಏಕಾಏಕಿ ಅನೇಕ ಕಂಪನಿಗಳು ಇನ್ನೂ ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಿಸುತ್ತಿವೆ. ಕಂಪೆನಿಗಳು ಇದಕ್ಕೆ ಯಾವುದೇ ಸ್ಥಿರ ಚೌಕಟ್ಟನನು ರಚಿಸಿಲ್ಲ. ಸಾಮಾನ್ಯವಾಗಿ ಅನೇಕ ಉದ್ಯೋಗಿಗಳಿಂದ ಕಚೇರಿಗಿಂತ ಹೆಚ್ಚಿನ ಕೆಲಸವನ್ನು ಕಂಪೆನಿ ಪಡೆಯುತ್ತಿದೆ. ಈ ಬಗ್ಗೆ ಆರೋಪಗಳು ಕೂಡ ಇದೆ. ಇದನ್ನು ವಿರೋಧಿಸಲು ಅಥವಾ ಈ ಶೋಷಣೆಯಿಂದ ಪಾರಾಗಲು ಭಾರತದಲ್ಲಿ ಇದುವರೆಗೆ ಯಾವುದೇ ಕಾನೂನು ಇಲ್ಲ. : ಭಾರತೀಯ ಸೇನೆಯ 1 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ! ನೂತನ ಕಾನೂನಿನಂತೆ ವರ್ಕ್ ಫ್ರಮ್ ಹೋಮ್ ನಲ್ಲಿ ಇಷ್ಟೇ ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಸಮಯ ನಿಗದಿಯಾಗುವ ಸಾಧ್ಯತೆ ಇದೆ. ಇದಲ್ಲದೇ ಮನೆಯಿಂದ ಕೆಲಸ ಮಾಡುವಾಗ ವಿದ್ಯುತ್ ಮತ್ತು ಇಂಟರ್‌ನೆಟ್‌ನಂತಹ ವೆಚ್ಚಗಳಿಗೆ ಕಂಪನಿಯು ಎಷ್ಟು ಹಣವನ್ನು ಪಾವತಿಸಬೇಕು ಎಂಬುದನ್ನೂ ಕಾನೂನಿನಲ್ಲಿ ನಿರ್ಧರಿಸಲಾಗುತ್ತದೆ. ನಿಯಮಗಳು ಯಾವುದೆಲ್ಲ ಇರಬೇಕು ಎಂಬುದರ ಬಗ್ಗೆ ಕೂಡ ಸರಕಾರ ಶೀಘ್ರದಲ್ಲೇ ಕ್ರಮ ಕೈಗೊಳ್ಳಬಹುದು ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. : ಟಿಟ್ಟರ್ ಸಿಇಓನಿಂದ ಹಿಡಿದು ಇಸ್ರೋ ಅಧ್ಯಕ್ಷರ ತನಕ, ಐಐಟಿ ಹೆಮ್ಮೆಯ 11 ಕೇಂದ್ರ ಸರ್ಕಾರವು ಈಗ ಎಲ್ಲಾ ಕ್ಷೇತ್ರಗಳಿಗೆ ಸಮಗ್ರ ಔಪಚಾರಿಕ ನೀತಿ ನಿಯಮಗಳನ್ನು ರಚಿಸಲು ಮುಂದಾಗಿದೆ. ಪೋರ್ಚುಗಲ್‌ನಲ್ಲಿ ಇತ್ತೀಚೆಗೆ ಜಾರಿಗೆ ಬಂದ ಕಾನೂನು ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳಿಗೆ ಹೆಚ್ಚಿನ ರಕ್ಷಣೆ ಕೊಟ್ಟಿದೆ. ಪೋರ್ಚುಗಲ್‌ನಲ್ಲಿ ಕಾರ್ಮಿಕ ನಿಯಮಗಳ ಚೌಕಟ್ಟನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ನೌಕರರ ಶೋಷಣೆ ತಡೆಯಲು ಈ ಕಾನೂನು ಅಹಾಯವಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. : ನೇಮಕಾತಿ ವಿಷಯದಲ್ಲಿ ಬೆಂಗಳೂರು ನಗರವೇ ಟಾಪ್ 2021ರ ಜನವರಿಯಲ್ಲಿ , ಕೇಂದ್ರ ಸರಕಾರವು ಸ್ಥಾಯಿ ಆದೇಶದ ಮೂಲಕ ಸೇವಾ ವಲಯಕ್ಕೆ ಮನೆಯಿಂದ ಕೆಲಸ ಮಾಡಲು ಒಪ್ಪಿಗೆ ನೀಡಿತು. ಕಂಪನಿ ಮತ್ತು ಉದ್ಯೋಗಿಗಳು ಕೆಲಸದ ಸಮಯ ಮತ್ತು ಇತರ ಷರತ್ತುಗಳ ಬಗ್ಗೆ ಪರಸ್ಪರ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಆದರೂ ಕೂಡ ಐಟಿ ಮತ್ತು ಐಟಿಇಎಸ್ ಅನ್ನು ಹೆಚ್ಚಾಗಿ ಒಳಗೊಂಡಿರುವ ಸೇವಾ ವಲಯವು ಈಗಾಗಲೇ ವಿಶೇಷ ಸಂದರ್ಭಗಳಲ್ಲಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಿರುವುದರಿಂದ ಕೇಂದ್ರದ ಈ ಕ್ರಮವು ಕೇವಲ ಸಾಂಕೇತಿಕ ಎಂಬಂತಿದೆ. : ಮೀಸಲಾತಿ ಆಧಾರದಲ್ಲಿ ಹಿರಿಯ ಅಧ್ಯಾಪಕರ ಹುದ್ದೆಗಳ ಭರ್ತಿಗೆ ಮುಂದಾದ ಐಐಟಿ ನೀವೂ ಕೂಡ ಮನೆಯಿಂದಲೇ ನಿಮ್ಮ ಕಚೇರಿ ಕೆಲಸ ಮಾಡುತ್ತಿದ್ದು, ಕಚೇರಿಯ ಕೆಲಸಗಾರರು ನಿಮ್ಮನ್ನು ಮೊದಲಿಗಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಿಸುತ್ತಿದ್ದಾರೆ ಅಥವಾ ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ ಎಂದು ನಿಮಗೆ ಅನಿಸುತ್ತಿದ್ದರೆ ನಿಮಗಿದು ಸಂತಸದ ಸುದ್ದಿಯೇ ಸರಿ.