4135 ಪ್ರೊಬೇಷನರಿ ಆಫೀಸರ್, ಮ್ಯಾನೇಜ್‌ಮೆಂಟ್ ಟ್ರೈನಿಗಳ ನೇಮಕ ಪ್ರಕ್ರಿಯೆ ಆರಂಭಿಸಿದ ಐಬಿಪಿಎಸ್ () ಪ್ರೊಬೇಷರಿ ಅಧಿಕಾರಿಗಳು ಹಾಗೂ ಮ್ಯಾನೇಜ್‌ಮೆಂಟ್ ಟ್ರೈನಿ ನೇಮಕ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 10 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಟ್ಟು 4135 ಹುದ್ದೆಗಳಿಗೆ ನೇಮಕ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಬ್ಯಾಂಕುಗಳ ಸಿಬ್ಬಂದಿ ನೇಮಕ ( ) ಪ್ರಕ್ರಿಯೆಯನ್ನು ನಡೆಸುವ ಐಬಿಪಿಎಸ್ () ಮತ್ತೆ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈಗಾಗಲೇ, 11 ಬ್ಯಾಂಕುಗಳಿಗೆ ನೇಮಕಾತಿಯನ್ನು ಆರಂಭಿಸಿದೆ. ಇದೀಗ ಪ್ರೊಬೆಷನರಿ ಅಧಿಕಾರಿಗಳು, ಮ್ಯಾನೇಜ್‌ಮೆಂಟ್ ಟ್ರೈನಿಗಳ ನೇಮಕ ಪ್ರಕ್ರಿಯೆಯನ್ನು ಆರಂಭಿಸಿದೆ. ಆಸಕ್ತರು ಹಾಹೂ ಅರ್ಹರು ಈ ನೇಕಾತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ () ಪ್ರೊಬೇಷನರಿ ಆಫೀಸರ್ಸ್ ( ), ಮ್ಯಾನೇಜ್‌ಮೆಂಟ್ ಟ್ರೈನೀ ( ) ಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನೇಮಕಾತಿ ಪ್ರಕ್ರಿಯೆ ಮೂಲಕ ಬರೋಬ್ಬರಿ 4,135 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಐಬಿಪಿಎಸ್ ( ) ಮುಂದಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ. BELನಲ್ಲಿ ಟ್ರೈನಿ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಐಬಿಪಿಎಸ್‌ ( )ನ ಅಧಿಕೃತ ವೆಬ್‌ಸೈಟ್ . ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಬೇಕು. ಅಂದಹಾಗೇ ಐಬಿಪಿಎಸ್ ( ) ನ ಅರ್ಜಿ ಪ್ರಕ್ರಿಯೆಯು ನವೆಂಬರ್ 10 ರಂದು ಕೊನೆಗೊಳ್ಳುತ್ತದೆ. ಇನ್ನು ಐಬಿಪಿಎಸ್ ( ) ನೇಮಕಾತಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು, ತಾವು ರಿಜಿಸ್ಟರ್ ಮಾಡಿಕೊಂಡ ದಿನಾಂಕದೊಳಗೆ ಪದವೀಧರ ( ) ನೆಂದು ಮಾನ್ಯ ವಿವಿಯಿಂದ ಪಡೆದ ಅಂಕಪಟ್ಟಿ/ಪದವಿ ಪ್ರಮಾಣಪತ್ರವನ್ನು ಹೊಂದಿರಬೇಕು. ಜೊತೆಗೆ ಆನ್‌ಲೈನ್‌ನಲ್ಲಿ ನೋಂದಾಯಿಸುವಾಗ ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ನಮೂದಿಸಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿ 20 ರಿಂದ 30 ವರ್ಷದೊಳಗಿರಬೇಕು. (02.10.1991 ಕ್ಕಿಂತ ಮೊದಲು ಮತ್ತು 01.10.2001ರ ನಂತರ ಜನಿಸಿದವರು ಅರ್ಜಿ ಸಲ್ಲಿಸುವಂತಿಲ್ಲ) ಈ ಐಬಿಪಿಎಸ್ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಪರೀಕ್ಷೆಗಳನ್ನು ಎದುರಿಸ ಬೇಕಾಗುತ್ತದೆ. ಪ್ರಾಥಮಿಕ ಪರೀಕ್ಷೆ ( ) ಹಾಗೂ ಮುಖ್ಯ ಪರೀಕ್ಷೆ ( ) ಗಳನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತದೆ. ಮೇನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಪರೀಕ್ಷೆಯ ಎಲ್ಲಾ ಮೂರು ಹಂತಗಳಲ್ಲಿ ಉತ್ತೀರ್ಣರಾದವರನ್ನು ಸೇವೆಗೆ ನಿಯೋಜಿಸಲಾಗುತ್ತದೆ. ತಾತ್ಕಾಲಿಕವಾಗಿ ಆಯ್ಕೆಯಾದವರನ್ನು ಐಬಿಪಿಎಸ್ ( ) ಅಡಿಯಲ್ಲಿ ಭಾಗವಹಿಸುವ ಯಾವುದಾದರೂ ಒಂದು ಬ್ಯಾಂಕ್ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. 11 ಬ್ಯಾಂಕುಗಳ 7855 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸಿ ಐಬಿಪಿಎಸ್‌ನ ಒಟ್ಟು 4,135 ಪ್ರೊಬೆಷನರಿ ಆಫೀಸರ್ಸ್ ( ) ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಹಾಗೂ ಶುಲ್ಕವನ್ನು ಪಾವತಿಸಲು ನವೆಂಬರ್ 10 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ಅಭ್ಯರ್ಥಿಗಳು ಒಂದೇ ತಿಂಗಳಿಗೆ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಡಿಸೆಂಬರ್ 4 ಮತ್ತು 11 ರಂದು ಆನ್‌ಲೈನ್ ಪೂರ್ವಭಾವಿ ಪರೀಕ್ಷೆ ( ) ನಡೆಯಲಿದೆ. ಆನಂತರ ಡಿಸೆಂಬರ್ 2021 ಅಥವಾ ಜನವರಿ 2022ರೊಳಗೆ ಪ್ರಾಥಮಿಕ ಪರೀಕ್ಷೆಯ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. ಆ ಬಳಿಕ ಜನವರಿ/ ಫೆಬ್ರವರಿ 2022 ರೊಳಗೆ ಆನ್‌ಲೈನ್ ಮೂಲಕ ಮುಖ್ಯ ಪರೀಕ್ಷೆಯ ಫಲಿತಾಂಶ ಬರುವ ಸಾಧ್ಯತೆಯಿದೆ. ಮುಖ್ಯ ಪರೀಕ್ಷೆ ( ) ನಲ್ಲಿ ಪಾಸ್ ಆದವರನ್ನು ಶಾರ್ಟ್‌ಲಿಸ್ಟ್ ( ) ಮಾಡಲಾಗುತ್ತದೆ. ಆಯ್ದ ಅಭ್ಯರ್ಥಿಗಳನ್ನು ಫೆಬ್ರವರಿ/ ಮಾರ್ಚ್ 2022 ರೊಳಗೆ ಸಂದರ್ಶನ ()ಕ್ಕೆ ಕರೆಯಲಾಗುವುದು. ನಂತರ ಏಪ್ರಿಲ್ 2022ಕ್ಕೆ ಅಭ್ಯರ್ಥಿಗಳಿಗೆ ತಾತ್ಕಾಲಿಕವಾಗಿ ಸೇವೆಗೆ ನಿಯೋಜಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಐಬಿಪಿಎಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. FSSAIನಲ್ಲಿ 223 ಹುದ್ದೆಗಳಿಗೆ ನೇರ ನೇಮಕಾತಿ