ಭಾರತೀಯ ವಾಯುಸೇನೆಯಲ್ಲಿ ನೇಮಕಾತಿ: 10, 12ನೇ ಕ್ಲಾಸ್ ಪಾಸಾದವರಿಗೂ ಅವಕಾಶ * ಭಾರತೀಯ ವಾಯುಸೇನೆಯಲ್ಲಿ ನೇಮಕಾತಿ* ವಿವಿಧ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ* ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ನವದೆಹಲಿ, (ಸೆ.08):ಭಾರತೀಯ ವಾಯುಸೇನೆಯಲ್ಲಿ ಖಾಲಿ ಇರುವ 174 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕುಕ್, ಹೌಸ್ ಕೀಪಿಂಗ್, ಸ್ಟೋರ್ ಕೀಪರ್ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 03ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸ;ಉ ಕೋರಲಾಗಿದೆ. ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ವಿದ್ಯಾರ್ಹತೆ:* ಕಾರ್ಪೆಂಟರ್: 10ನೇ ತರಗತಿ ಪಾಸ್* ಹೌಸ್ ಕೀಪಿಂಗ್: ಮೆಟ್ರಿಕ್ಯುಲೇಷನ್* ಕ್ಲರ್ಕ್: 12ನೇ ತರಗತಿ ಪಾಸ್* ಸ್ಟೋರ್ ಕೀಪರ್: 12ನೇ ತರಗತಿ ಪಾಸ್* ಪೈಂಟರ್: 10ನೇ ತರಗತಿ, ವಯೋಮಿತಿ:ಕನಿಷ್ಠ 18 ರಿಂದ ಗರಿಷ್ಠ 25 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಂಡಕ್ಕೆ 05 ವರ್ಷ ಹಾಗೂ ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ 03 ವಿನಾಯಿತಿ ಇದೆ. ನೇಮಕಾತಿ ಪ್ರಕ್ರಿಯೆ:ಲಿಖಿತ ಪರೀಕ್ಷೆ/ಪ್ರಯೋಗಿಕ ಪರೀಕ್ಷೆ/ ಪಿಎಸ್ ಟಿ/ ಪಿಇಟಿ/ಪಿಎಂಟಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಬಗ್ಗೆ ಇನ್ನಷ್ಟು ಹೆಚ್ಚನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ://../