ಬೆಂಗ್ಳೂರಲ್ಲಿ ವಿವಿಧ ಹುದ್ದೆಗೆ ಇಂಟರ್ ​​ವ್ಯೂ: ಮುಗಿಸಿದವರೂ ಇದೆ ಚಾನ್ಸ್ ತಾತ್ಕಾಲಿಕ ವೈದ್ಯರು, ನರ್ಸ್, ​​ಸ್ವಾಬ್​​ ಕಲೆಕ್ಟರ್ಸ್​​ ನೇಮಕಕ್ಕೆ ಬಿಬಿಎಂಪಿ, ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ. ಬೆಂಗಳೂರು, (ಏ.17):ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಸೋಂಕು ಉಲ್ಬಣ ಹಿನ್ನೆಲೆ ತಾತ್ಕಾಲಿಕ ವೈದ್ಯರು, ನರ್ಸ್, ​​ಸ್ವಾಬ್​​ ಕಲೆಕ್ಟರ್ಸ್​​ ನೇಮಕಕ್ಕೆ ಮುಂದಾಗಿದೆ. 3 ತಿಂಗಳ ಅವಧಿಗೆ ನೇಮಕಕ್ಕೆ ನೋಟಿಫಿಕೆಶನ್​ ಹೊರಡಿಸಿದ ಬಿಬಿಎಂಪಿ, ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಇದೇ ಏಪ್ರಿಲ್​​ 19ರಿಂದ ಏಪ್ರಿಲ್​​ 21ರವರೆಗೆ ಸಂದರ್ಶನ ನಡೆಯಲಿದೆ. ಸಂದರ್ಶನ ಬೆಂಗಳೂರು ದಕ್ಷಿಣ ವಲಯ ಜಯನಗರದ ವಲಯವಾರು ಬಿಬಿಎಂಪಿ ಕಚೇರಿಯಲ್ಲಿ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ ಇನ್ನಷ್ಟು ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಏನೆಲ್ಲಾ ಅರ್ಹತೆಯಿರಬೇಕು..?- ವೈದರು - ಭಾರತೀಯ ಮೆಡಿಕಲ್​​ ಕೌನ್ಸಿಲ್​ನಿಂದ ಮಾನ್ಯತೆ ಪಡೆದಿರಬೇಕು (80 ಸಾವಿರ ಸಂಬಳ)- ವೈದ್ಯರು ( ) - ಡೆಂಟಲ್​ ಕೌನ್ಸಿಲ್​​ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದಿರಬೇಕು (60 ಸಾವಿರ ಸಂಬಳ)ಆಯುಷ್ ವೈದ್ಯರು - ಮಾನ್ಯತೆ ಪಡೆದ ಆಯುರ್ವೇದ ಯುನಿವರ್ಸಿಟಿಯಿಂದ ಡಿಗ್ರಿ ಆಗಿರಬೇಕು (60 ಸಾವಿರ ಸಂಬಳ)-ಲಸಿಕೆ ನೀಡಲು ಸ್ಟಾಫ್​ ನರ್ಸ್​​ಗಳು - ಮಾನ್ಯತೆ ಪಡೆದ ನರ್ಸಿಂಗ್​​ ಕೌನ್ಸಿಲ್​ನಲ್ಲಿ // ನೊಂದಾಯಿಸಿರಬೇಕು (20 ಸಾವಿರ ಸಂಬಳ)-ಸ್ವಾಬ್​​ ಕಲೆಕ್ಟರ್ಸ್​​ - ಕನಿಷ್ಠ 10 ನೇ ತರಗತಿ ಪಾಸಾಗಿರಬೇಕು ( 19 ಸಾವಿರ ಸಂಬಳ) ಈ ಎಲ್ಲಾ ಹುದ್ದೆಗಳಿಗೆ ಸಂದರ್ಶನದಲ್ಲಿ ಭಾಗಿಯಾಗುವವರಿಗೆ 50 ವರ್ಷ ದಾಟಿರಬಾರದು. ಅಲ್ಲದೇ ಕನ್ನಡದಲ್ಲಿ ಮಾತನಾಡಲು, ಓದಲು, ಬರೆಯಲು ಗೊತ್ತಿರಬೇಕು.