UPSCಯಿಂದ ಖಾಲಿ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ ಕೇಂದ್ರ ಲೋಕಸೇವಾ ಆಯೋಗ () ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕಸೂಚನೆ ಹೊರಡಿಸಲಾಗಿದೆ, ಈ ಬಗ್ಗೆ ಇನ್ನುಷ್ಟು ಮಾಹಿತಿ ಈ ಕೆಳಗಿನಂತಿದೆ ಬೆಂಗಳೂರು, (ಮಾ.28):ಕೇಂದ್ರ ಲೋಕಸೇವಾ ಆಯೋಗ () ಅಸಿಸ್ಟಂಟ್ ಪ್ರೊಫೆಸರ್​ (ಸಹಾಯಕ ಪ್ರಾಧ್ಯಾಪಕ) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅಸಿಸ್ಟಂಟ್​ ಪ್ರೊಫೆಸರ್​ ಹುದ್ದೆಯಲ್ಲಿ ಒಟ್ಟು 28 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 2021 ಏಪ್ರಿಲ್​​ 15ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಇನ್ನಷ್ಟು ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಖಾಲಿ ಹುದ್ದೆಗಳ ವಿವರ* ಸಹಾಯಕ ಪ್ರಾಧ್ಯಾಪಕ (ಪೀಡಿಯಾಟ್ರಿಕ್​-ಮಕ್ಕಳ ವೈದ್ಯಶಾಸ್ತ್ರ)-14* ಸಹಾಯಕ ಪ್ರಾಧ್ಯಾಪಕ (ಸಿಸಿಯಾಲಜಿ-ಶರೀರ ವಿಜ್ಞಾನ)-2* ಸಹಾಯಕ ಪ್ರಾಧ್ಯಾಪಕ-(ಸೈಕಿಯಾಟ್ರಿ-ಮನೋವೈದ್ಯಶಾಸ್ತ್ರ)-11* ಸಹಾಯಕ ಪ್ರಾಧ್ಯಾಪಕ-(ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ)-1 ಹುದ್ದೆಅರ್ಹತೆ :ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ 1956ರಲ್ಲಿ ಸೇರಿಸಲಾದ ಮೊದಲ ಹಾಗೂ ಎರಡನೇ ಅನುಬಂಧ ಅಥವಾ ಮೂರನೇ ಅನುಬಂಧದ ಎರಡನೇ ಭಾಗದಲ್ಲಿ ಇರುವ ಮಾನ್ಯತೆ ಇರುವ ಎಂಬಿಬಿಎಸ್​ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಶುಲ್ಕ ವಿವರಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 25 ರೂ.ನ್ನು ಬ್ಯಾಂಕ್​​ನ ಯಾವುದೇ ಶಾಖೆಯ ಮೂಲಕ ನಗದು ರೂಪದಲ್ಲಿ ಅಥವಾ ಎಸ್​ಬಿಐ ನೆಟ್​ ಬ್ಯಾಂಕಿಂಗ್​​ ಮೂಲಕ ಅಥವಾ ವಿಸಾ/ ಮಾಸ್ಟರ್​ ಕ್ರೆಡಿಟ್​/ ಡೆಬಿಟ್​ ಕಾರ್ಡ್​ಗಳ ಮೂಲಕ ತುಂಬಬಹುದು. ಆದರೆ ಎಸ್​ಸಿ/ಎಸ್​ಟಿ/ ಪಿಡಬ್ಲ್ಯೂಬಿಡಿ ಸಮುದಾಯಗಳ ಹಾಗೂ ಯಾವುದೇ ಸಮುದಾಯದ ಮಹಿಳೆಯರು ಹಣ ತುಂಬುವ ಅಗತ್ಯ ಇಲ್ಲ. ಆಸಕ್ತಿ ಇರುವ, ಅರ್ಹ ಅಭ್ಯರ್ಥಿಗಳು ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಯುಪಿಎಸ್​ಸಿಯ ...ವೆಬ್‌ಸೈಟ್‌ನಲ್ಲಿ ನೋಡಿ.