ಆಫೀಸ್ ವರ್ಕರ್ಸ್‌ಗೆ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ : ಏನೇನಿದೆ..? ವರ್ಕ್ ಫ್ರಂ ಹೋಮ್ ಮುಗಿದು ಆಫೀಸ್ ಗಳ ಕಡೆ ಉದ್ಯೋಗಿಗಳು ಮುಖ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಏನೇನಿದೆ ಈ ಮಾರ್ಗಸೂಚಿಯಲ್ಲಿ? ಬೆಂಗಳೂರು (ಫೆ.14):ವರ್ಕ್ ಫ್ರಂ ಹೋಮ್ ಮುಗಿದು ಆಫೀಸ್ ಗಳ ಕಡೆ ಉದ್ಯೋಗಿಗಳು ಮುಖ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಕಚೇರಿಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆ. ಸಾಮಾನ್ಯ ಮಾರ್ಗಸೂಚಿ ಹಾಗೂ ನಿರ್ಧಿಷ್ಟ ಮಾರ್ಗಸೂಚಿಗಳನ್ನು ಉದ್ಯೋಗಿಗಳ ಹಿತದೃಷ್ಟಿಯಿಂದ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿದೆ. ಸಾಮಾನ್ಯ ‌ಮಾರ್ಗಸೂಚಿ - ವ್ಯಕ್ತಿ ಇಂದ ವ್ಯಕ್ತಿಗೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು - ಮೂಗು, ಬಾಯಿ ಮುಚ್ಚಿರುವಂತೆ ಮಾಸ್ಕ್ ಬಳಕೆ ಕಡ್ಡಾಯ, ಆಫೀಸ್ ನಲ್ಲಿ ಇರುವ ಸಂಪೂರ್ಣ ಸಮಯದವರೆಗೂ - ಸ್ಯಾನಿಟೈಸರ್ ಬಳಸಬೇಕು ಅಥವಾ ಸೋಪ್ ಬಳಸಿ ಆಗಾಗ ಕೈ ತೊಳೆಯಬೇಕು - ಬಳಸಿದ ಟಿಶ್ಯುಗಳನ್ನ ಸರಿಯಾಗಿ ವಿಲೇವಾರಿ ಮಾಡಬೇಕು - ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ಆಫೀಸ್ ಸೂಪರ್ ವೈಸರ್ ಗೆ ಹೇಳಬೇಕು - ಆಫೀಸ್ ವ್ಯಾಪ್ತಿಯಲ್ಲಿ ಉಗುಳುವುದು ನಿಷಿದ್ಧ - ಕಂಪೆನಿ ಎಲ್ಲಾ ಉದ್ಯೋಗಿಗಳು ಆರೋಗ್ಯ ಸೇತು ಆ್ಯಪ್ ಬಳಸಬೇಕು ಮಹಾಮಾರಿ ಕೊರೋನಾಗೆ ಹಿರಿಯರೇ ಹೆಚ್ಚು ಬಲಿ..! ನಿರ್ಧಿಷ್ಟ ಮಾರ್ಗಸೂಚಿ - ಆಫೀಸ್ ಪ್ರವೇಶ ವೇದ ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ - ಯಾವುದೇ ರೋಗದ‌ ಲಕ್ಷಣಗಳು ಇಲ್ಲದವರಿಗೆ ಮಾತ್ರ ಆಫೀಸ್ ಹೆ ಎಂಟ್ರಿ - ಕಂಟೈನ್ ಮೆಂಟ್ ಜೋನ್ ನಲ್ಲಿರುವ ಉದ್ಯೋಗಿ ಕಚೇರಿಗೆ ಬರುವಂತಿಲ್ಲ - ಕಂಪೆನಿಯ ಚಾಲಕರು ಕೂಡ ಅಂತರ ಕಾಪಾಡಿಕೊಳ್ಳಬೇಕು ವರ್ಕ್ ಫ್ರಮ್ ಹೋಂ ಖಿನ್ನತೆಗೆ ಕಾರಣವಾಗ್ತಾ ಇದ್ಯಾ? . - ದಿನಕ್ಕೆ ಎರಡು ವಾರಿ ಸೋಡಿಯಂ ಹೈಪೋಕ್ಲೋರೈಡ್ ಬಳಸಿ ಆಫೀಸ್ ಫ್ಲೋರ್ ಸ್ಯಾನಿಟೈಸ್ ಮಾಡುವುದು - ಮೀಟಿಂಗ್ ಗಳನ್ನ ಆದಷ್ಟು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾಡುವುದು