ಐಬಿಪಿಎಸ್ ಪರೀಕ್ಷಾ ಫಲಿತಾಂಶ ಪ್ರಕಟ: ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ಕಿಸಿ ಐಬಿಪಿಎಸ್ ಕ್ಲರ್ಕ್ ಪ್ರಿಲಿಮ್ಸ್ 2020ರ ಫಲಿತಾಂಶವನ್ನು ಇನ್​ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ () ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ನವದೆಹಲಿ, (ಫೆ.06): ಗುಮಾಸ್ತ ಹುದ್ದೆಯ ಪರೀಕ್ಷಾ ಫಲಿತಾಂಶವನ್ನು ಐಬಿಪಿಎಸ್ ಆನ್​ಲೈನ್​ನಲ್ಲಿ ಬಿಡುಗಡೆಗೊಳಿಸಿದೆ. ಕಳೆದ ವರ್ಷ ಡಿಸೆಂಬರ್ 5, 12 ಹಾಗೂ 13ರಂದು ನಡೆದ ಪರೀಕ್ಷೆಯಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳು, 2020 ಫಲಿತಾಂಶವನ್ನು ಪರಿಶೀಲಿಸಬಹುದು. ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ತಮ್ಮ ರಿಜಿಸ್ಟ್ರೇಶನ್ ನಂಬರ್ ಅಥವಾ ಕ್ರಮ ಸಂಖ್ಯೆ (ರೋಲ್ ನಂಬರ್) ದಾಖಲಿಸಿ ಲಾಗ್​ಇನ್ ಆಗುವ ಮೂಲಕ ಫಲಿತಾಂಶ ಪಡೆದುಕೊಳ್ಳಬಹುದು. ಲಾಗ್​ಇನ್ ಆಗಲು ರಿಜಿಸ್ಟ್ರೇಶನ್ ನಂಬರ್ ಜೊತೆಗೆ, ಪಾಸ್​ವರ್ಡ್ ಮತ್ತು ಹುಟ್ಟಿದ ದಿನಾಂಕವನ್ನು ಕೂಡ ನಮೂದಿಸಬೇಕು. ಫಲಿತಾಂಶದಲ್ಲಿ ಅಭ್ಯರ್ಥಿಯ ಅರ್ಹತಾ ವಿವರಗಳು ಮತ್ತು ಇತರ ಪ್ರಮುಖ ವಿವರಗಳು ಇರಲಿದೆ. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು, ಮುಂದಿನ ಹಂತದಲ್ಲಿ 2020 ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.