2021ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ ಪ್ರಕಟ ಕರ್ನಾಟಕ ಸರ್ಕಾರವು ಮುಂದಿನ ವರ್ಷದ ಅಂದರೆ 2021ನೇ ಸಾಲಿನ ಸರ್ಕಾರಿ ನೌಕರರ ರಜಾ ದಿನಗಳನ್ನು ಅಧಿಕೃತವಾಗಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು, (ನ.21):2021ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಭಾನುವಾರ, ಎರಡು ಮತ್ತು ನಾಲ್ಕನೇ ಶನಿವಾರ ಅಲ್ಲದೇ ಒಟ್ಟು 20 ದಿನಗಳ ರಜೆಯನ್ನು ಘೋಷಿಸಲಾಗಿದೆ. ಇಂದು (ಶನಿವಾರ) ಪ್ರಕಟಗೊಂಡ ರಜೆಗಳಲ್ಲಿ ಶಿಕ್ಷಣ ಇಲಾಖೆಯ ರಜೆಗಳು ಒಳಗೊಂಡಿಲ್ಲ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತ್ಯೇಕ ರಜೆ ಪಟ್ಟಿ ಬಿಡುಗಡೆ ಮಾಡಲಿದೆ. ಇನ್ನು 2021ರಲ್ಲಿ ರಾಜ್ಯ ಸರಕಾರಿ ನೌಕರರಿಗೆ 19 ದಿನಗಳ ಪರಿಮಿತ ರಜೆಗಳೂ ಇವೆ. ಅವುಗಳ ಪಟ್ಟಿಯನ್ನೂ ರಾಜ್ಯ ಸರಕಾರ ಬಿಡುಗಡೆಗೊಳಿಸಿದೆ. ಮಹಿಳೆಯರಿಗೆ ಮುಟ್ಟಿನ ರಜೆ ಬೇಕಾ, ಬೇಡವಾ? ಹೀಗೊಂದು ವಿಚಾರ ಮಂಥನ ಏಪ್ರಿಲ್‌ 25 ರಂದು ಮಹಾವೀರ ಜಯಂತಿ ಹಾಗೂ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ಭಾನುವಾರ ಬರಲಿದೆ. ಡಿಸೆಂಬರ್‌ 25 ರಂದು ಕ್ರಿಸ್‌ಮಸ್‌ 4ನೇ ಶನಿವಾರದಂದು ಬರಲಿದೆ. ಹೀಗಾಗಿ ಈ ದಿನಗಳಂದು ಸಾರ್ವತ್ರಿಕ ರಜೆ ಇಲ್ಲ. ಸೆಪ್ಟೆಂಬರ್‌ 9 ಶುಕ್ರವಾರದಂದು ಕೈಲ್‌ ಮುಹೂರ್ತಕ್ಕೆ, ಅಕ್ಟೋಬರ್‌ 18ರ ಸೋಮವಾರದಂದು ತುಲಾ ಸಂಕ್ರಮಣಕ್ಕೆ ಮತ್ತು ನವೆಂಬರ್‌ 20ರ ಶನಿವಾರದಂದು ಹುತ್ತರಿ ಹಬ್ಬಕ್ಕೆ ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಪ್ರಕಟಿಸಲಾಗಿದೆ. ಮುಸ್ಲಿಂ ಸಮುದಾಯದ ಹಬ್ಬಗಳು ಘೋಷಿತ ದಿನಾಂಕದ ಬದಲು ಬೇರೆ ದಿನ ಬಂದರೆ, ನಿಗದಿತ ದಿನಾಂಕದಂದು ರಜೆ ನೀಡದೆ ಹಬ್ಬದ ದಿನ ಆ ಸಮುದಾಯದ ಸರ್ಕಾರಿ ನೌಕರರಿಗೆ ರಜೆ ನೀಡಬಹುದು ಎಂದು ತಿಳಿಸಿದೆ. ರಜೆ ಪಟ್ಟಿ ಇಂತಿದೆಜನವರಿ 14 – ಗುರುವಾರ – ಉತ್ತರಾಯಣ ಪುಣ್ಯ ಕಾಲ, ಮಕರ ಸಂಕ್ರಾಂತಿಜನವರಿ 26 – ಮಂಗಳವಾರ – ಗಣರಾಜ್ಯೋತ್ಸವಮಾರ್ಚ್‌ 11 – ಗುರುವಾರ – ಮಹಾ ಶಿವರಾತ್ರಿಏಪ್ರಿಲ್‌ 2 – ಶುಕ್ರವಾರ – ಗುಡ್‌ ಫ್ರೈಡೇಏಪ್ರಿಲ್‌ 13 – ಮಂಗಳವಾರ – ಯುಗಾದಿಏಪ್ರಿಲ್‌ 14 – ಬುಧವಾರ – ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿಮೇ 1 – ಶನಿವಾರ – ಕಾರ್ಮಿಕ ದಿನಾಚರಣೆಮೇ 14 – ಶುಕ್ರವಾರ – ಬಸವ ಜಯಂತಿ/ಅಕ್ಷಯ ತೃತೀಯ/ ಖುತುಬ್‌ ಎ ರಂಜಾನ್ಜುಲೈ 21 – ಬುಧವಾರ – ಬಕ್ರೀದ್ಆಗಸ್ಟ್‌ 20 – ಶುಕ್ರವಾರ – ಮೊಹರಂ ಕಡೇ ದಿನಸೆಪ್ಟೆಂಬರ್‌ 10 – ಶುಕ್ರವಾರ – ವರ ಸಿದ್ಧಿವಿನಾಯಕ ವ್ರತಅಕ್ಟೋಬರ್‌ 2 – ಶನಿವಾರ – ಗಾಂಧಿ ಜಯಂತಿಅಕ್ಟೋಬರ್ ‌6 – ಬುಧವಾರ – ಮಹಾಲಯ ಅಮವಾಸ್ಯೆಅಕ್ಟೋಬರ್‌ 14 – ಗುರುವಾರ – ಮಹಾ ನವಮಿ, ಆಯುಧ ಪೂಜೆಅಕ್ಟೋಬರ್‌ 15 – ಶುಕ್ರವಾರ – ವಿಜಯ ದಶಮಿಅಕ್ಟೋಬರ್‌ 20 – ಬುಧವಾರ – ಮಹರ್ಷಿ ವಾಲ್ಮೀಕಿ ಜಯಂತಿ, ಈದ್‌ ಮಿಲಾದ್‌ನವೆಂಬರ್‌ 1 – ಸೋಮವಾರ – ಕನ್ನಡ ರಾಜ್ಯೋತ್ಸವನವೆಂಬರ್‌ 3 – ಬುಧವಾರ – ನರಕ ಚತುರ್ದಶಿನವೆಂಬರ್‌ 5 – ಶುಕ್ರವಾರ – ಬಲಿ ಪಾಡ್ಯಮಿ, ದೀಪಾವಳಿನವೆಂಬರ್‌ 22 – ಸೊಮವಾರ – ಕನಕದಾಸ ಜಯಂತಿ