4000 ಪೇದೆ, 592 ಹುದ್ದೆ ನೇಮಕಾತಿಗೆ ಸರ್ಕಾರ ಗ್ರೀನ್‌ ಸಿಗ್ನಲ್ 2020-21ನೇ ಸಾಲಿನ 4 ಸಾವಿರ ಪೇದೆ ಹಾಗೂ 592 ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ಸಮ್ಮತಿಸಿದ್ದು, ಈ ಮೂಲ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿಕೊಟ್ಟಂತಾಗಿದೆ. ಬೆಂಗಳೂರು, (ಫೆ.29):ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್​ಇನ್​ಸ್ಪೆಕ್ಟರ್ ಮತ್ತು ಪೇದೆಗಳ ನೇಮಕಾತಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. 1279 ದ್ವಿತೀಯ ದರ್ಜೆ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟ ಈ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ 592 ಪಿಎಸ್​ಐ/ಆರ್​ಎಸ್​ಐ ಮತ್ತು 4 ಸಾವಿರ ಸಿವಿಲ್/ಡಿಎಆರ್/ಕೆಎಸ್​ಆರ್​ಪಿ ಪೇದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. * ಬೆಂಗಳೂರು ನಗರಕ್ಕೆ 74 ಪಿಎಸ್​ಐ, 1 ಆರ್​ಎಸ್​ಐ,* ಮೈಸೂರು ನಗರಕ್ಕೆ 3 ಆರ್​ಎಸ್​ಐ,* ಹುಬ್ಬಳ್ಳಿ-ಧಾರವಾಡ ನಗರಕ್ಕೆ 2 ಆರ್​ಎಸ್​ಐ,* ಬೆಳಗಾವಿ ನಗರಕ್ಕೆ 19 ಪಿಎಸ್​ಐ, 3 ಆರ್​ಎಸ್​ಐ,* ಕೇಂದ್ರ ವಲಯ (ಬೆಂಗಳೂರು) 92 ಪಿಎಸ್​ಐ, 2 ಆರ್​ಎಸ್​ಐ* ಪೂರ್ವವಲಯ (ದಾವಣಗೆರೆ) 40 ಪಿಎಸ್​ಐ, 10 ಆರ್​ಎಸ್​ಐ,* ಪಶ್ವಿಮ ವಲಯ 39 ಪಿಎಸ್​ಐ, 2 ಆರ್​ಎಸ್​ಐ,* ಉತ್ತರ ವಲಯ 74 ಪಿಎಸ್​ಐ, 10 ಆರ್​ಎಸ್​ಐ,* ದಕ್ಷಿಣ ವಲಯ 93 ಪಿಎಸ್​ಐ, 7 ಆರ್​ಎಸ್​ಐ,* ಕೆಎಸ್​ಐಎಸ್​ಎಫ್ 51 ಪಿಎಸ್​ಐ, ಸಿಐಡಿಗೆ 4 ಡಿಎಸ್​ಐ,* ನಿಸ್ತಂತು 26 ಪಿಎಸ್​ಐ,* ಕೆಎಸ್​ಆರ್​ಪಿಗೆ 40 ಆರ್​ಎಸ್​ಐಗಳ ನೇಮಕಾತಿ ನಡೆಯಲಿದೆ. ಅದೇ ರೀತಿ 2 ಸಾವಿರ ಸಿವಿಲ್ ಪೇದೆಗಳು, 1 ಸಾವಿರ ಎಪಿಸಿ ಮತ್ತು ಕೆಎಸ್​ಆರ್​ಪಿಗೆ 1 ಸಾವಿರ ಆರ್​ಪಿಸಿ ಹುದ್ದೆಗಳಿಗೆ 2020-21ರಲ್ಲಿ ಹಂತ ಹಂತವಾಗಿ ನೇಮಕಾತಿ ನಡೆಯಲಿದೆ. #NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್ "