ಕರ್ನಾಟಕ ಪ್ರವಾಸೋದ್ಯಮ ನಿಗಮ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವಿವಿಧ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇದರ ಮಾಹಿತಿ ಈ ಕೆಳಗಿನಂತಿದೆ ನೋಡಿ. ಬೆಂಗಳೂರು, (ಜ.24): ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಕರ್ನಾಟಕದ ವಿವಿಧ ಘಟಕಗಳಿಗೆ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 76 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 3/2/2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಗ್ರಾಮಲೆಕ್ಕಾಧಿಕಾರಿ ನೇಮಕಾತಿಗೆ ಅರ್ಜಿ ಆಹ್ವಾನ; ಪರೀಕ್ಷೆ ಇಲ್ಲದೇ ನೇರ ನೇಮಕಾತಿ ಯಾವ-ಯಾವ ಹುದ್ದೆಗಳುವ್ಯವಸ್ಥಾಪಕರು (ಹೋಟೆಲ್) 4, ಸಹಾಯಕ ವ್ಯವಸ್ಥಾಪಕರು (ಹೋಟೆಲ್) 4, ಸ್ವಾಗತಗಾರರು 4, ದ್ವಿತೀಯ ದರ್ಜೆ ಸಹಾಯಕರು/ಬಿಲ್/ಕ್ಲರ್ಕ್/ಕ್ಯಾಷಿಯರ್ 7, ಹೌಸ್ ಕೀಪಿಂಗ್ ಸೂಪರ್ ವೈಸರ್ 4, ಉಗ್ರಾಣಿಕರು 4, ಅಡುಗೆಯವರು 6, ಸಹಾಯಕ ಅಡುಗೆಯವರು 6, ಅಡುಗೆ ಸಹಾಯಕರು 10, ಸಾಮಾನ್ಯ ಉಪಯೋಗಿ ಕೆಲಸಗಾರರು (ರೂಂ ಬಾಯ್/ಮಾಣಿ/ ಸ್ವೀಪರ್/ಕ್ಲೀನರ್/ ಗಾರ್ಡನರ್) 28 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ನಿಗಧಿತ ನಮೂನೆಯಲ್ಲಿ ತಮ್ಮ ಸ್ವವಿವರವನ್ನು ಭರ್ತಿ ಮಾಡಿ, ವಿದ್ಯಾರ್ಹತೆ ಮತ್ತು ಸೇವಾ ಅನುಭವ ದಾಖಲೆಗಳು ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ದಿನಾಂಕ: 03.02.2020 ರೊಳಗೆ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸತಕ್ಕದ್ದು. ಮತ್ತಷ್ಟು ಜಾಬ್ಸ್‌ ಸದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕಾದ ವಿಳಾಸವ್ಯವಸ್ಥಾಪಕರು (ಆಡಳಿತ) ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿ., ಕಾರ್ಯನಿರ್ವಾಹಕ ಕಛೇರಿ, ನೆಲಮಹಡಿ, ಯಶವಂತಪುರ ಟಿಟಿಎಂಸಿ, ಬಿ.ಎಂ.ಟಿ.ಸಿ ಬಸ್ ನಿಲ್ದಾಣ, ಯಶವಂತಪುರ ವೃತ್ತ, ಬೆಂಗಳೂರು-560 022. ಷರತ್ತು ಮತ್ತು ನಿಬಂಧನೆಗಳು* ಅಭ್ಯರ್ಥಿಗಳು ದಾಖಲಾತಿಗಳನ್ನೊಳಗೊಂಡ ಅರ್ಜಿಯನ್ನು ಮುಚ್ಚಿದ ಲಕೋಟೆ ಸ್ಪೀಡ್ ಪೋಸ್ಟ್/ರಿಜಿಸ್ಟರ್ಪೋಸ್ಟ್/ ಕೋರಿಯರ್ ಅಥವಾ ನೇರವಾಗಿ ಮೇಲೆ ತಿಳಿಸಿದ ವಿಳಾಸಕ್ಕೆ ಬಂದು ಸಲ್ಲಿಸಬಹುದಾಗಿದೆ.* ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಪದನಾಮವನ್ನು ಲಕೋಟೆ/ಪೋಸ್ಟ್ ಕವರ್‍ನ ಮೇಲೆನಮೂದಿಸತಕ್ಕದ್ದು, ತಪ್ಪಿದಲ್ಲಿ ಅಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.* ದಿನಾಂಕ: 03.02.2020 ರ ನಂತರದಲ್ಲಿ ಸ್ವೀಕೃತಗೊಂಡ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.* ನಿಗಮವು ಯಾವುದೇ ಕಾರಣವನ್ನು ನೀಡದೆ ಅರ್ಜಿಯನ್ನು ಸ್ವೀಕರಿಸಲು ಅಥವಾ ತಿರಸ್ಕರಿಸುವ ಸಂಪೂರ್ಣ ಅಧಿಕಾರವನ್ನುಹೊಂದಿರುತ್ತದೆ.* ನಿಗಮವು ನೀಡಿರುವ ನಮೂನೆಯಲ್ಲದೇ, ಇತರೆ ಯಾವುದೇ ನಮೂನೆಯಲ್ಲಿ ಸ್ವವಿವರವನ್ನು ಸಲ್ಲಿಸಿದರೆ ಯಾವುದೇ ಕಾರಣಕ್ಕೂಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು.* ಅಭ್ಯರ್ಥಿಗಳು ಕರ್ನಾಟಕದ ಯಾವುದೇ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿಇಲ್ಲಿ ಕ್ಲಿಕ್ಮಾಡಿ