ಭಾರತ ಸರ್ಕಾರದ UIDAIನಲ್ಲಿ ನೇಮಕಾತಿ: ಬೆಂಗಳೂರಿನಲ್ಲಿ ಕೆಲಸ ಭಾರತ ಸರ್ಕಾರದ ಯುನಿಕ್ ಐಡೆಂಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಇದರ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ. ಬೆಂಗಳೂರು, (ನ.30):ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳ ನೇಮಕಾತಿಗೆ ಯುನಿಕ್ ಐಡೆಂಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಅರ್ಜಿ ಆಹ್ವಾನಿಸಿದೆ. 8 ರಿಂದ 13 ವರ್ಷ ಅನಿಭವ ಅಭ್ಯರ್ಥಿಗಳನ್ನು 3 ವರ್ಷ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ದಿನಾಂಕ ಡಿಸೆಂಬರ್ 17.2019ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ವಿದ್ಯಾರ್ಹತೆ:ಬಿಇ/ ಬಿ-ಟೆಕ್/ಎಂಸಿಎ/ಎಂಎಸ್/ಎಂ-ಟೆಕ್ ( / /// ) ಕೌಶಲ್ಯತೆಗಳು* ಅತ್ಯುತ್ತಮ ಯುನಿಕ್ಸ್ ಸ್ಕ್ರಿಪ್ಟಿಂಗ್ ಕೌಶಲ್ಯಗಳು ಮತ್ತು ಸಿಸ್ಟಮ್ ಕರೆಗಳು, ಮೆಮೊರಿ ನಿರ್ವಹಣೆ ಮತ್ತು ಪ್ರೋಗ್ರಾಮಿಂಗ್ ಮಾಡುವಂತಹ ಪರಿಕಲ್ಪನೆಗಳ ಗ್ರಹಿಕೆ ಇರಬೇಕು.* ಯುನಿಕ್ಸ್ / ಲಿನಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯಕ್ಷಮತೆ ನಿರ್ಣಾಯಕ, ಹೆಚ್ಚು ಲಭ್ಯವಿರುವ ವ್ಯವಸ್ಥೆಗಳಿಗಾಗಿ ಅನೇಕ ಡೇಟಾಬೇಸ್‌ಗಳನ್ನು ನಿರ್ವಹಿಸುವ ಮತ್ತು ಬೆಂಬಲಿಸುವ ಅನುಭವ.* ಕ್ಲಸ್ಟರ್ ಕಾನ್ಫಿಗರೇಶನ್, ಲಾಗ್ ಶಿಪ್ಪಿಂಗ್ ಮತ್ತು ರೆಪ್ಲಿಕೇಶನ್ ಮ್ಯಾನೇಜ್‌ಮೆಂಟ್‌ನಲ್ಲಿ ಅನುಭವ ಹೊಂದಿರಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಇಲ್ಲಿಕ್ಲಿಕ್ ಮಾಡಿ