ಮಾ.27ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ವೇಳಾಪಟ್ಟಿ ಬಿಡುಗಡೆ: ನಡುವೆ 7 ದಿನ ರಜೆ! ಮಾ.27ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ| ಈ ಬಾರಿ ಯುಗಾದಿ ಬಳಿಕ ಎಕ್ಸಾಂ| ಪರೀಕ್ಷೆ ನಡುವೆಯೇ 7 ದಿನ ರಜೆ ಬೆಂಗಳೂರು[ನ.30]:ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿಪ್ರಕಟವಾಗಿದೆ. 2020ರ ಮಾ.27ರಿಂದ ಏ.9ರವರೆಗೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30/45ರವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 5.15ರವರೆಗೆ ಪರೀಕ್ಷೆಗಳು ನಡೆಯಲಿವೆ. ಈ ಅವಧಿಯಲ್ಲಿ ಭಾನುವಾರ ರಜೆ ಸೇರಿದಂತೆ ಏಳು ದಿನಗಳ ರಜೆ ಇದ್ದು, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಿದೆ. ಪ್ರತಿ ವರ್ಷ ಸಾಮಾನ್ಯವಾಗಿ ಪರೀಕ್ಷೆ ಮಧ್ಯದಲ್ಲಿ ಯುಗಾದಿ ಹಬ್ಬ ಬರುತ್ತಿತ್ತು. ಈ ಬಾರಿ ಮಾ.25ರಂದು ಯುಗಾದಿ ಹಬ್ಬವಿದ್ದು, 27ರಿಂದ ಪರೀಕ್ಷೆಗಳು ಆರಂಭವಾಗಲಿವೆ. ದ್ವಿತೀಯ ಪಿಯು ಪರೀಕ್ಷೆಯು ಮಾ.4ರಿಂದ ಆರಂಭವಾಗಿ 23ಕ್ಕೆ ಅಂತ್ಯವಾಗಲಿದೆ. ಇದು ಮುಗಿದ ನಾಲ್ಕೇ ದಿನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. -ವೇಳಾಪಟ್ಟಿ- ಮಾ.27 ಪ್ರಥಮ ಭಾಷೆ- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಆಂಗ್ಲ, ಸಂಸ್ಕೃತ ಮಾ.28 ರಜೆ ಹಾಗೂ ಮಾ.29 ಭಾನುವಾರ ರಜೆ. ಮಾ.30 ಕೋರ್‌ ಸಬ್ಜೆಕ್ಟ್, ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ ಮಾ.31 ರಜೆ ಏ.1 ದ್ವಿತೀಯ ಭಾಷೆ- ಆಂಗ್ಲ, ಕನ್ನಡ ಏ.2 ರಜೆ ಏ.3 ತೃತೀಯ ಭಾಷೆ- ಹಿಂದಿ, ಕನ್ನಡ, ಆಂಗ್ಲ, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಎನ್‌ಎಸ್‌ಕ್ಯೂಎಫ್‌ ಏ.4 ಕೋರ್‌ ಸಬ್ಜೆಕ್ಟ್ ಏ.5 ರಜೆ ಏ.6 ರಜೆ ಏ.7 ಕೋರ್‌ ಸಬ್ಜೆಕ್ಟ್ - ಗಣಿತ, ಸಮಾಜಶಾಸ್ತ್ರ ಏ.8 ರಜೆ ಏ.9 ಕೋರ್‌ ಸಬ್ಜೆಕ್ಟ್ - ಸಮಾಜ ವಿಜ್ಞಾನ