ಭಾರತೀಯ ಅಂಚೆ ಇಲಾಖೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ ಇತರೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ. ಬೆಂಗಳೂರು, (ನ.29):ಭಾರತೀಯ ಅಂಚೆ ಇಲಾಖೆ ತಮಿಳುನಾಡು ವಿಭಾಗದಲ್ಲಿ ಖಾಲಿ ಇರುವ ಪೋಸ್ಟಲ್ ಅಸಿಸ್ಟಂಟ್, ವಿಂಗಡಣೆ ಸಹಾಯಕ, ಪೋಸ್ಟ್‌ ಮ್ಯಾನ್‌ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಪೋಸ್ಟಲ್ ಅಸಿಸ್ಟಂಟ್/ ವಿಂಗಡಣೆ ಸಹಾಯಕ 89, ಪೋಸ್ಟ್‌ ಮ್ಯಾನ್ 65, ಮಲ್ಟಿ ಟಾಸ್ಕಿಂಗ್ ಸ್ಟಾಫ್‌ 77 ಒಟ್ಟು 231 ಹುದ್ದೆಗಳಿಗೆ ಆರ್ಜಿ ಆಹ್ವಾನಿಸಿದ್ದು, ಆಸಕ್ತ ಅರ್ಹ ಹಾಗೂ ಆಸಕ್ತ ಅ ಭ್ಯರ್ಥಿಗಳು ನಿಗದಿತ ದಿನಾಂಕ 31-12-2019ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಗ್ರಾಮಲೆಕ್ಕಿಗ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಿ ವಿದ್ಯಾರ್ಹತೆ* ಪೋಸ್ಟಲ್ ಅಸಿಸ್ಟಂಟ್/ ವಿಂಗಡಣೆ ಸಹಾಯಕ : ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಜೊತೆಗೆ ಬೇಸಿಕ್ ಕಂಪ್ಯೂಟರ್ ತರಬೇತಿ ಪಡೆದ ಪ್ರಮಾಣಪತ್ರ ಹೊಂದಿರಬೇಕು.* ಪೋಸ್ಟ್‌ಮ್ಯಾನ್ : ಪಿಯುಸಿ ಪಾಸ್‌ ಜೊತೆಗೆ, ಸ್ಥಳೀಯ ಭಾಷೆ ಬಗ್ಗೆ ಅರಿವಿರಬೇಕು.* ಮಲ್ಟಿ ಟಾಸ್ಕಿಂಗ್ ಸ್ಟಾಫ್‌ : ಪಾಸ್‌ ಜೊತೆಗೆ ಸ್ಥಳೀಯ ಭಾಷೆ ಬಗ್ಗೆ ಅರಿವಿರಬೇಕು. ವಯೋಮಿತಿ:* ಪೋಸ್ಟಲ್ ಅಸಿಸ್ಟಂಟ್/ ವಿಂಗಡಣೆ ಸಹಾಯಕ : ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ.* ಪೋಸ್ಟ್‌ಮ್ಯಾನ್ : ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ.* ಮಲ್ಟಿ ಟಾಸ್ಕಿಂಗ್ ಸ್ಟಾಫ್‌ : ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ.* ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 10 ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಶುಲ್ಕ:100 ಅರ್ಜಿ ಶುಲ್ಕವನ್ನು ನಿಗದಿಪಡಿಲಸಾಗಿದ್ದು, ಯಾವುದೇ ಅಂಚೆ ಕಛೇರಿಯಲ್ಲಿ ದಿನಾಂಕ 28-12-2019ರೊಳಗೆ ಪಾವತಿಸಬಹುದು. ವೇತನ ಶ್ರೇಣಿ* ಪೋಸ್ಟಲ್ ಅಸಿಸ್ಟಂಟ್/ ವಿಂಗಡಣೆ ಸಹಾಯಕ : 25500 ರಿಂದ 81100 ರೂ. ತಿಂಗಳಿಗೆ (ಪೇ ಮೆಟ್ರಿಕ್ಸ್‌ ಲೆವೆಲ್ 4)* ಪೋಸ್ಟ್‌ ಮ್ಯಾನ್ : 21700-69100 ರೂ. ತಿಂಗಳಿಗೆ (ಪೇ ಮೆಟ್ರಿಕ್ಸ್‌ ಲೆವೆಲ್ 3)* ಮಲ್ಟಿ ಟಾಸ್ಕಿಂಗ್ ಸ್ಟಾಫ್‌ : 18000-56900 ರೂ. ತಿಂಗಳಿಗೆ (ಪೇ ಮೆಟ್ರಿಕ್ಸ್‌ ಲೆವೆಲ್ 1) ಅರ್ಜಿ ತಲುಪಿಸಬೇಕಾದ ವಿಳಾಸ : (), / , , -600002 ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಅಧಿಸೂಚನೆಯಲ್ಲಿ ತಿಳಿಯಲು ಇಲ್ಲಿಕ್ಲಿಕ್ ಮಾಡಿ