ಪರೀಕ್ಷೆ, ಸಂದರ್ಶನಕ್ಕೆ ಬೆಂಗಳೂರಿಗೆ ಬರುವ ಮಹಿಳೆಯರಿಗೆ ಫ್ರೀ ಹಾಸ್ಟೆಲ್! ಇಲ್ಲಿದೆ ಫುಲ್ ಲಿಸ್ಟ್ ಮೈಸೂರು (ಜು. 17) ಬೆಂಗಳೂರು ನಗರಕ್ಕೆ ಉದ್ಯೋಗ ಸಂದರ್ಶನ, ಪರೀಕ್ಷೆಗಳಿಗೆ ಹೋಗುವ ಯುವತಿಯರ ಸುರಕ್ಷಿತ ವಾಸ್ತವ್ಯಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಟ್ರಾನ್ಸಿಟ್ ಹಾಸ್ಟೆಲ್ ಪ್ರಾರಂಭಿಸಲಾಗಿದೆ. ವಾಸ್ತವ್ಯದ ಸಂದರ್ಭದಲ್ಲಿ ಮೂರು ದಿನಗಳವರೆಗೆ ಉಚಿತ ಉಟೋಪಚಾರ ಕಲ್ಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಮಹಿಳೆಯರು ಈ ಕೆಳಕಂಡ ಟ್ರಾನ್ಸಿಟ್ ಹಾಸ್ಟೆಲ್ ಗಳಲ್ಲಿ ಸೌಲಭ್ಯ ಪಡೆಯಬಹುದಾಗಿದೆ. ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ:://../ ಸದರಿ ಸೌಲಭ್ಯವನ್ನು ಜಿಲ್ಲೆಯ ಮಹಿಳೆಯರು ಸದುಪಯೋಗಪಡಿಸಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.