ನಿರುದ್ಯೋಗಿಗಳಿಗೆ ಸಹಾಯಧನ! ಅರ್ಜಿ ಆಹ್ವಾನ ರೂ. 25 ಲಕ್ಷಗಳವರೆಗಿನ ಬಂಡವಾಳ ಹೂಡಿಕೆಯೊಂದಿಗೆ ಗಾರ್ಮೆಂಟ್ ಘಟಕ ಸ್ಥಾಪಿಸಲು ಶೇ.90ರಷ್ಟು ಸಹಾಯಧನ! ಆರಂಭಿಕ ಉದ್ಯಮಿಗಳನ್ನಾಗಿ ಪ್ರೋತ್ಸಾಹಿಸಲು ಸಹಾಯಧನ ಮೈಸೂರು (ಜು 17): ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ 2019-20ನೇ ಸಾಲಿನ ನೂತನ ಜವಳಿ ನೀತಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ – ಯುವತಿಯರನ್ನು ಆರಂಭಿಕ ಉದ್ಯಮಿಗಳನ್ನಾಗಿ ಪ್ರೋತ್ಸಾಹಿಸಲು ಸಹಾಯಧನ ನೀಡಲಾಗುವುದು. ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ:://../ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 10 ಅತಿ ಸಣ್ಣ (ಮೈಕ್ರೋ) ಗಾರ್ಮೆಂಟ್ ಘಟಕಗಳನ್ನು ಪ್ಲಾಂಟ್ ಅಂಡ್ ಮಿಷನರಿ ಮೇಲೆ ಗರಿಷ್ಠ ರೂ. 25 ಲಕ್ಷಗಳವರೆಗಿನ ಬಂಡವಾಳ ಹೂಡಿಕೆಯೊಂದಿಗೆ ಸ್ಥಾಪಿಸಲು ಶೇ.90ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 0821- 2441353/2422322 ನ್ನು ಸಂಪರ್ಕಿಸುವುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.