ಅಂಗನವಾಡಿ ಟೀಚರ್, ಸಹಾಯಕಿಯರ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೈಸೂರು ತನ್ನ ವೆಬ್ ತಾಣದಲ್ಲಿ 2019ನೇ ಸಾಲಿನ ನೇಮಕಾತಿಗಾಗಿ ಪ್ರಕಟಣೆಯನ್ನು ಹೊರಡಿಸಿದೆ. ಇದರ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ. ಬೆಂಗಳೂರು, (ಜೂನ್ 07):ಮೈಸೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 154 ಅಂಗನವಾಡಿ ಸಹಾಯಕ ಹಾಗೂ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 8 ಅಂಗನವಾಡಿ ಕಾರ್ಯಕರ್ತೆ, 9 ಮಿನಿ ಅಂಗನವಾಡಿ ಕಾರ್ಯಕರ್ತೆ ಮತ್ತು 137 ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳ ನೇಮಕಾತಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಅಹ್ವಾನಿಸಿದೆ. ವಿವಿಧ ಹುದ್ದೆಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಅರ್ಜಿ ಆಹ್ವಾನ 3 ಜೂನ್ 2019ರಿಂದ ಅರ್ಜಿ ಆರಂಭವಾಗಿದ್ದು, ಆಸಕ್ತ ಹಾಗೂ ಅರ್ಹ ಮಹಿಳಾ ಅಭ್ಯರ್ಥಿಗಳು 2 ಜುಲೈ 2019ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.. ಜಾಬ್ಸ್ ಸುದ್ದಿಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ವಿದ್ಯಾರ್ಹತೆ:ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 8, 12ನೇ ತರಗತಿ ಪಾಸಾಗಿರಬೇಕು.ವಯೋಮಿತಿ:18 ರಿಂದ 35 ವರ್ಷ ಅಧಿಕೃತ ಆದೇಶ ಪ್ರತಿಯಲ್ಲಿ ತಿಳಿಯಲು ಇಲ್ಲಿಕ್ಲಿಕ್ ಮಾಡಿ.