ಗುಡ್‌ ನ್ಯೂಸ್: ವರ್ಷದಲ್ಲಿ 2 ಬಾರಿ ನೌಕಾಸೇನೆ ಹುದ್ದೆ ಭರ್ತಿಗೆ ಪ್ರವೇಶ ಪರೀಕ್ಷೆ ಈ ಹಿಂದೆ ನೌಕಾ ಸೇನೆಗೆ ವಿಶ್ವವಿದ್ಯಾಲಯ ಪ್ರವೇಶ ಸ್ಕೀಂ (ಯುಇಎಸ್) ಹಾಗೂ ಕಂಬೈಂಡಿಡ್ ಡಿಫೆನ್ಸ್ ಸರ್ವಿಸಸ್​ಗಳ(ಸಿಡಿಎಸ್) ಮೂಲಕ ಅಧಿಕಾರಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿತ್ತು. ಆದ್ರೆ ಇದೀಗ ಇದೇ ಮೊದಲ ಬಾರಿಗೆ ಭಾರತೀಯ ನೌಕಾಪಡೆ ಹುದ್ದೆಗಳ ಭರ್ತಿಗಾಗಿ ಒಂದು ವರ್ಷದಲ್ಲಿ 2 ಬಾರಿ ಪ್ರವೇಶ ಪರೀಕ್ಷೆ ನಡೆಯಲಿದೆ. ನವದೆಹಲಿ, (ಮೇ.15):ಭಾರತೀಯ ನೌಕಾಪಡೆ ಹುದ್ದೆಗಳ ಭರ್ತಿಗಾಗಿ ಇದೇ ಮೊದಲ ಬಾರಿಗೆ (ಐಎನ್​ಇಟಿ-ಇಂಡಿಯನ್ ನೇವಿ ಎಂಟ್ರೆನ್ಸ್ ಟೆಸ್ಟ್ ) ಪರೀಕ್ಷೆ ಪ್ರಾರಂಭಿಸಿದೆ. ಇನ್ನು ಮುಂದೆ ವರ್ಷದಲ್ಲಿ 2 ಬಾರಿ ಐಎನ್​ಇಟಿ ಪರೀಕ್ಷೆ ನಡೆಯಲಿದ್ದು, ಪ್ರಸಕ್ತ ವರ್ಷ ಸೆಪ್ಟೆಂಬರ್​ನಲ್ಲಿ ಮೊದಲ ಪರೀಕ್ಷೆ ನಡೆಯಲಿದ್ದು, ಎಲ್ಲ ವಿಭಾಗದ ಪದವೀಧರರು ಈ ಪರೀಕ್ಷೆ ಬರೆಯಬಹುದು. ಹೆಚ್ಚಿನ ಜಾಬ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಇದುವರೆಗೂ ನೌಕಾ ಸೇನೆಗೆ ವಿಶ್ವವಿದ್ಯಾಲಯ ಪ್ರವೇಶ ಸ್ಕೀಂ (ಯುಇಎಸ್) ಹಾಗೂ ಕಂಬೈಂಡಿಡ್ ಡಿಫೆನ್ಸ್ ಸರ್ವಿಸಸ್​ಗಳ(ಸಿಡಿಎಸ್) ಮೂಲಕ ಅಧಿಕಾರಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿತ್ತು. ಬೆಂಗಳೂರಿನಲ್ಲಿ ಭಾರತೀಯ ಸೇನಾ ನೇಮಕಾತಿ ರ್‍ಯಾಲಿ: ಅರ್ಜಿ ಹಾಕಿ ಆನ್​ಲೈನ್​ನಲ್ಲಿ ನಡೆಯುವ ಐಎನ್​ಇಟಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ನಂತರದ ಎಸ್​ಎಸ್​ಬಿ(ಸರ್ವಿಸಸ್ ಸೆಲೆಕ್ಷನ್ ಬೋರ್ಡ್)ಗೆ ಅರ್ಹತೆ ಪಡೆಯುತ್ತಾರೆ. ಅಭ್ಯರ್ಥಿಗಳ ಮನೋಬಲ, ದೈಹಿಕ ಹಾಗೂ ಬೌದ್ಧಿಕ ಪರೀಕ್ಷೆ ಮಾಡಲಾಗುತ್ತದೆ. ಪರೀಕ್ಷೆಯು ನಾಲ್ಕು ವಿಭಾಗಗಳನ್ನು ಹೊಂದಿರುತ್ತದೆ. ಹೆಚ್ಚಿನ ಮಾಹಿತಿಗೆ ನೌಕಾಪಡೆ ವೆಬ್​ಸೈಟ್..inಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.