2019-20ನೇ ಸಾಲಿನ ಸಿಇಟಿ ರಿಸಲ್ಟ್ ಪ್ರಕಟ: ಮೊದಲ 7 ಸ್ಥಾನ ಬೆಂಗಳೂರಿನ ತೆಕ್ಕೆಗೆ! ಫಲಿತಾಂಶ ಪ್ರಕಟ| ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರಿಂದ ಫಲಿತಾಂಶ ಪ್ರಕಟ| ಮೊದಲ 10 ಸ್ಥಾನಗಳಲ್ಲಿ 7 ಸ್ಥಾನಗಳು ಬೆಂಗಳೂರಿಗೆ. ಬೆಂಗಳೂರು[ಮೇ.25]: ಇಂಜಿನಿಯರಿಂಗ್‌ ಸೇರಿದಂತೆ ನಾನಾ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ 2019-20ನೇ ಸಿಇಟಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಫಲಿತಾಂಶ ಪ್ರಕಟಿಸಿದ್ದಾರೆ. " ಇಂಜಿನಿಯರಿಂಗ್ ವಿಭಾಗದಲ್ಲಿ ಮಾರತ್‌ ಹಳ್ಳಿಯ ಚೈತನ್ಯ ಟೆನ್ನೋ ಸ್ಕೂಲ್‌ನ ಜಫಿನ್ ಬಿಜು ಮೊದಲ ಸ್ಥಾನ ಗಳಿಸಿದ್ದಾರೆ. ಎರಡನೇ ಸ್ಥಾನ ಮಂಗಳೂರು ಎಕ್ಸ್ ಪರ್ಟ್ ಕಾಲೇಜಿನ ಚಿನ್ಮಯ್ ಪಾಲಾಗಿದೆ. ಮೂರನೇ ಸ್ಥಾನ ಚೈತನ್ಯ ಕಾಲೇಜಿನ ಸಕೇತಿಕಾಗೆ ಲಭಿಸಿದೆ. ಇನ್ನು ಮೊದಲ 10 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಬೆಂಗಳೂರು ಪಾಲಾಗಿದ್ದು, 2 ಸ್ಥಾನ ಮಂಗಳೂರು ಹಾಗೂ 1 ಸ್ಥಾನವನ್ನು ಬಳ್ಳಾರಿ ಪಡೆದುಕೊಂಡಿದೆ. ಈಗಾಘಲೇ ಆನ್‌ಲೈನ್‌ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಇಂದು ಮಧ್ಯಾಹ್ನ 1 ಗಂಟೆಯ ವೇಳೆಗೆ ಎಲ್ಲಾ ಕಾಲೇಜುಗಳಲ್ಲಿಯೂ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡರು ತಿಳಿಸಿದ್ದಾರೆ. ಈ ಲಿಂಕ್ ಮೂಲಕ ನಿಮ್ಮ ಫಲಿತಾಂಶ ತಿಳಿದುಕೊಳ್ಳಿ ://... ://... ://... ಮೇಲಿನ 3 ಅಧಿಕೃತ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ.