ಇಂಡಿಯನ್ ಬ್ಯಾಂಕ್‌ನಲ್ಲಿ 417 ಹುದ್ದೆ ಖಾಲಿಯಿದೆ ಉದ್ಯೋಗ ಅವಕಾಶಕ್ಕಾಗಿ ಹುಡುಕುತ್ತಾ ಇದ್ದೀರಾ? ಅದು ಬ್ಯಾಂಕಿಂಗ್ ಕ್ಷೇತ್ರದಲ್ಲಿ.. ಇಲ್ಲಿ ನಿಮಗೊಂದು ಶುಭ ಸುದ್ದಿ ಇದೆ. ನವದೆಹಲಿ[ಆ.6]ಖಾಲಿಯಿರುವ 417 ಪ್ರೊಬೇಷನರಿ ಹುದ್ದೆಗಳಿಗೆ ಇಂಡಿಯನ್ ಬ್ಯಾಂಕ್ ಅರ್ಜಿ ಆಹ್ವಾನಿಸಿದೆ. ಬ್ಯಾಂಕ್ ನ ಅಫಿಷಿಯಲ್ ವೆಬ್ ತಾಣದ .. ಮುಖೇನ ಅರ್ಜಿ ಸಲ್ಲಿಸಬಹುದು. ಒಂದು ವರ್ಷದ ಬ್ಯಾಂಕಿಂಕ್ ಪಿಜಿ ಕೋರ್ಸ್[ಪಿಜಿಡಿಬಿಎಫ್] ಗೆ ದಾಖಲಾತಿ ಮಾಡಿಕೊಳ್ಳುವುದುರ ಮೂಲಕ ಆರಂಭಿಕ ಹಂತ ಶುರುವಾಗಲಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 27 ಕೊನೆ ದಿನ. ಅಕ್ಟೋಬರ್ 6 ರಂದು ಪ್ರಿಲೀಮ್ಸ್ ಪರೀಕ್ಷೆ ನಡೆಯಲಿದೆ. ಆನ್ ಲೈನ್ ಮೂಲಕವೇ ಪರೀಕ್ಷೆ ನಡೆಯಲಿದ್ದು ಪರ್ಸನಲ್ ಸಂದರ್ಶನ ಸಹ ಇರಲಿದೆ. ರೈಲ್ವೇ ಪರೀಕ್ಷೆ ಬರೀತಿರಾ?: ಅಂಕ ಹಂಚಿಕೆ ಹೀಗೆ ಆಗುತ್ತೆ! ಪ್ರಮುಖಾಂಶಆನ್ ಲೈನ್ ನೋಂದಣಿ ಆರಂಭ ಆಗಸ್ಟ್ 1ಆನ್ ಲೈನ್ ನೋಂದಣಿ ಮುಕ್ತಾಯ ಆಗಸ್ಟ್ 27ಪ್ರೀಲಿಮ್ಸ್ ಪರೀಕ್ಷೆಗೆ ಆನ್ ಲೈನ್ ಅಪ್ಲಿಕೇಶನ್ ಡೌನಲೋಡ್ ಸೆಪ್ಟೆಂಬರ್ 24ಆನ್ ಲೈನ್ ಪ್ರಿಲಿಮ್ಸ್ ಪರೀಕ್ಷೆ ಅಕ್ಟೋಬ್ 6ಆನ್ ಲೖನ್ ಪರೀಕ್ಷೆ ಫಲಿತಾಂಶ ಅಕ್ಟೋಬರ್ 17ಮುಖ್ಯ ಪರೀಕ್ಷೆಗೆ ಹಾಲ್ ಟಿಕೆಟ್ ಡೌನ್ ಲೋಡ್ ಅಕ್ಟೋಬರ್ 22ಮುಖ್ಯಪರೀಕ್ಷೆ ನವೆಂಬರ್ 4