ಎಸ್‌ಬಿಐನಲ್ಲಿದೆ ಉದ್ಯೋಗ ಅವಕಾಶ ದೇಶದ ಪ್ರತಿಷ್ಠಿತ ರಾಷ್ಟ್ರೀಯ ಬ್ಯಾಂಕಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ಉನ್ನತ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. 119 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 7 ಕಡೆಯ ದಿನಾಂಕವಾಗಿರುತ್ತದೆ. ಬೆಂಗಳೂರು:ದೇಶದ ಪ್ರತಿಷ್ಠಿತ ರಾಷ್ಟ್ರೀಯ ಬ್ಯಾಂಕಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ಉನ್ನತ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. 119 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 7 ಕಡೆಯ ದಿನಾಂಕವಾಗಿರುತ್ತದೆ. ಹುದ್ದೆ ವಿವರಗಳು ಕೆಳಗಿನಂತಿವೆ...1. ಸ್ಪೆಷಲ್ ಮ್ಯಾನೇಜ್‌ಮೆಂಟ್ ಎಕ್ಸ್‌ಕ್ಯೂಟಿವ್: 35 ಹುದ್ದೆಗಳುವಿದ್ಯಾರ್ಹತೆ: ಸಿಎ, ಐಸಿಡಬ್ಲ್ಯೂ, ಎಸಿಎಸ್ ಅಥವಾ ಎಂಬಿಎ ಅಥವಾ ಆರ್ಥಿಕ ವಿಷಯದಲ್ಲಿ ಎರಡು ವರ್ಷದ ಡಿಪ್ಲೋಮಾ.ಅನುಭವ: ಶಿಕ್ಷಣ ಮುಗಿಸಿದ ನಂತರ ಐದು ವರ್ಷಗಳ ಅರ್ಹ ಅನುಭವ ಪಡೆದಿರಬೇಕು. 2.ಡೆಪ್ಯೂಟಿ ಜನರಲ್ ಮ್ಯಾನೇಜರ್ (ಕಾನೂನು): 02 ಹುದ್ದೆಗಳುವಿದ್ಯಾರ್ಹತೆ: 17 ವರ್ಷಗಳ ಅನುಭವದೊಂದಿಗೆ ಕಾನೂನು ಪದವಿ. 3. ಡೆಪ್ಯೂಟಿ ಮ್ಯಾನೇಜರ್ (ಕಾನೂನು): 82 ಹುದ್ದೆಗಳುಅರ್ಹತೆ: ನಾಲ್ಕು ವರ್ಷಗಳ ಕಾಲ ವಕೀಲಿಕೆ ಅನುಭವದೊಂದಿಗೆ ಕಾನೂನು ಪದವಿ. ವಯೋಮಿತಿ (31, ಡಿಸೆಂಬರ್,2017ಕ್ಕೆ)ಕನಿಷ್ಠ ವಯೋಮಿತಿ: 25 ವರ್ಷಗರಿಷ್ಠ: 52 ವರ್ಷ (ಕಾನೂನಿನಂತೆ ವಯೋಮಿತಿ ಸಡಿಲಿಕೆ ಇರುತ್ತದೆ) ಹೆಚ್ಚಿನ ಮಾಹಿತಿಗಾಗಿ: ಎಸ್‌ಬಿ‌ಐ ವೆಬ್‌ಸೈಟ್ ://...//-.htmlಗೆ ಭೇಟಿ ನೀಡಿ.