: ಸಾಯಿಬಾಬಾರಂತೆ ಕಾಣುವ ಪರ್ವತ ಎಂದು ವೈರಲಾಗಿರುವ ಈ ಚಿತ್ರ ಡಿಜಿಟಲ್ ಆರ್ಟ್ :ಸಾಯಿಬಾಬಾರಂತೆ ಕಾಣುವ ಪರ್ವತದ ಚಿತ್ರವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ಸಾಯಿಬಾಬಾ ಆಕಾರದ ನಿಜವಾದ ಪರ್ವತ ಎಂದು ಹೇಳಿಕೊಳ್ಳುತ್ತಿದ್ದಾರೆ ನವದೆಹಲಿ (ಜು. 14):ಸಾಯಿಬಾಬಾ ( ) ಆಕಾರವಿರುವ ಪರ್ವತ ಎಂದು ಹೇಳಲಾಗಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ( ) ವೈರಲ್‌ ಆಗಿದೆ. ಸಾಯಿಬಾಬಾರಂತೆ ಕಾಣುವ ಪರ್ವತದ ಚಿತ್ರವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ಸಾಯಿಬಾಬಾ ಆಕಾರದ ನಿಜವಾದ ಪರ್ವತ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ‌ ಫ್ಯಾಕ್ಟ್‌ ಚೆಕ್‌ನಲ್ಲಿ ( ) ಈ ವೈರಲ್ ಪೋಸ್ಟ್ ಜನರನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ಕಂಡುಬಂದಿದೆ. ವೈರಲ್ ಚಿತ್ರದಲ್ಲಿ ಕಂಡುಬರುವ ಪರ್ವತದ ಫೋಟೋವನ್ನು ಎಡಿಟ್ ಮಾಡಲಾಗಿದೆ. ನಿಜವಾದ ಪರ್ವತವು ಸಾಯಿಬಾಬಾರಂತೆ ಕಾಣುವುದಿಲ್ಲ. ವೈರಲ್ ಚಿತ್ರವನ್ನು ಡಿಜಿಟಲ್ ಕಲಾವಿರೊಬ್ಬರು ರಚಿಸಿದ್ದಾರೆ. :ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ( ) ಈ ಫೋಟೋವನ್ನು ಹಂಚಿಕೊಂಡಿದ್ದು "ಪ್ರಕೃತಿಯೇ ಸಾಯಿ" ( ) ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. :ಏಷ್ಯಾನೆಟ್‌ ಸುವರ್ಣ ನ್ಯೂಸ್ ಈ ವೈರಲ್ ಚಿತ್ರದ ಮೇಲೆ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ವೈರಲ್ ಪೋಸ್ಟ್‌ನಲ್ಲಿ ತೋರಿಸಿರುವಂತೆ ಅಂತಹ ಯಾವುದೇ ಪರ್ವತವನ್ನು ಕಂಡುಹಿಡಿಯಲಾಗಲಿಲ್ಲ. ಆದರೆ, ಈ ಪರ್ವತದ ಚಿತ್ರವನ್ನು ನಾವು ಅನೇಕ ವೆಬ್‌ಸೈಟ್‌ಗಳಲ್ಲಿ () ಕಂಡುಕೊಂಡಿದ್ದೇವೆ, ಆದರೆ ವೈರಲ್ ಚಿತ್ರದಲ್ಲಿ ಅದರ ಮೇಲಿನ ಭಾಗವು ಹಾಗೆ ಇರಲಿಲ್ಲ. ನಿಜವಾದ ಪರ್ವತದ ಫೋಟೋ ಥೈಲ್ಯಾಂಡ್‌ನ ಫಾಂಗ್ ನ್ಗಾ ಪ್ರಾಂತ್ಯದ ಅವೊ ಫಾಂಗ್ ನ್ಗಾ ರಾಷ್ಟ್ರೀಯ ಉದ್ಯಾನವನದ ( ) ಸಮೀಪವಿರುವ ದ್ವೀಪವಾಗಿದೆ. ಕೆಳಗಿನ ಕೊಲಾಜ್‌ನಲ್ಲಿ ಎರಡು ಚಿತ್ರಗಳ ನಡುವಿನ ವ್ಯತ್ಯಾಸವನ್ನು ಕಾಣಬಹುದು. ಅಲ್ಲದೇ ನಾವು ಪಿಕ್ಸೆಲ್‌ ಡಾಟ್‌ ಕಾಮ್ (.) ನಲ್ಲಿ ವೈರಲಾಗಿರುವ ಸಾಯಿಬಾಬಾರಂತಹ ಪರ್ವತದ ಚಿತ್ರವನ್ನು ಕಂಡುಕೊಂಡಿದ್ದೇವೆ. ಇಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಇದನ್ನು ಡಿಜಿಟಲ್ ಕಲಾವಿದ ಅನಿಲ್ ಸಮೋಟಿಯಾ ( ) ರಚಿಸಿದ್ದಾರೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ವಿಶ್ವಾ ನ್ಯೂಸ್‌ ನೇರವಾಗಿ ಅನಿಲ್ ಶರ್ಮಾ ಸಮೋಟಿಯಾ ಅವರನ್ನು ಮೇಲ್ ಮೂಲಕ ಸಂಪರ್ಕಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ಹೌದು ಈ ಚಿತ್ರವನ್ನು ಎಡಿಟ್ ಮಾಡಲಾಗಿದೆ, ಇದನ್ನು ನಾನು ಡಿಜಿಟಲ್ ಉಪಕರಣಗಳ ಸಹಾಯದಿಂದ ಮಾಡಿದ್ದೇನೆ. ನಿಜವಾದ ಪರ್ವತವು ಥೈಲ್ಯಾಂಡ್‌ನಲ್ಲಿದೆ, ಅದು ಸಾಯಿಬಾಬಾದಂತೆ ಕಾಣುವುದಿಲ್ಲ" ಎಂದು ತಿಳಿಸಿದ್ದಾರೆ. ಈ ಪೋಸ್ಟ್ ಅನ್ನು ಹಂಚಿಕೊಂಡಿರುವ ಪುಟವಾದ ಕಾಂಬೋಡಿಯಾ ಲೈಫ್‌ನ ಪ್ರೊಫೈಲ್ ,156,652 ಅನುಯಾಯಿಗಳನ್ನು ಹೊಂದಿದೆ. :ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವೈರಲ್ ಪೋಸ್ಟನ್ನು ಪರಿಶೀಲಿಸಿದಾಗ ಈ ಮಾಹಿತಿ ಸುಳ್ಳು ಎಂದು ಕಂಡುಬಂದಿದೆ. ವೈರಲ್ ಆಗಿರುವ ಚಿತ್ರದಲ್ಲಿ ಕಂಡುಬರುವ ಪರ್ವತದ ಫೋಟೋವನ್ನು ಎಡಿಟ್ ಮಾಡಲಾಗಿದೆ. ನಿಜವಾದ ಪರ್ವತವು ಸಾಯಿಬಾಬಾರಂತೆ ಕಾಣುವುದಿಲ್ಲ. ವೈರಲ್ ಚಿತ್ರವನ್ನು ಡಿಜಿಟಲ್ ಕಲಾವಿದರು ರಚಿಸಿದ್ದಾರೆ. ಇದನ್ನೂ ಓದಿ:'ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ' ಬಗ್ಗೆ ಮಾತನಾಡುತ್ತಿರುವ ಕತಾರಿ ಆಂಕರ್ ಎಂದು ವೈರಲಾಗಿರುವ ಚಿತ್ರ ಅಫಘಾನಿಸ್ಥಾನದ್ದು