: ಇದು ಉತ್ತರ ಪ್ರದೇಶದ್ದಲ್ಲ, ಪಾಕಿಸ್ತಾನದ ಶಾಲೆಯೊಂದರ ಚಿತ್ರ :ಉತ್ತರ ಪ್ರದೇಶದ ಶಾಲೆಯೊಂದರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವೊಂದು ವೈರಲ್ ಆಗಿದೆ. ಇದರಲ್ಲಿ ಕೆಲ ಶಾಲಾ ಮಕ್ಕಳು ಕೆಸರಿನಲ್ಲಿ ಕುಳಿತಿರುವುದನ್ನು ಕಾಣಬಹುದು. ನವದೆಹಲಿ (ಜು. 06):ಪ್ರದೇಶದ ( ) ಶಾಲೆಯೊಂದರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ( ) ಚಿತ್ರವೊಂದು ವೈರಲ್ ಆಗಿದೆ. ಇದರಲ್ಲಿ ಕೆಲ ಶಾಲಾ ಮಕ್ಕಳು ಕೆಸರಿನಲ್ಲಿ ಕುಳಿತಿರುವುದನ್ನು ಕಾಣಬಹುದು. ಇದು ಉತ್ತರ ಪ್ರದೇಶದ ಸರ್ಕಾರಿ ಶಾಲೆಯ ಫೋಟೋ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯಲಾಗಿದೆ. ಆದರೆ ಫ್ಯಾಕ್ಟ್‌ಚೆಕ್‌ನಲ್ಲಿ ( ) ಇದು ನಕಲಿ ಎಂದು ತಿಳಿದುಬಂದಿದೆ. ಚಿತ್ರವು ಪಾಕಿಸ್ತಾನದ () ಸರ್ಕಾರಿ ಶಾಲೆಯದ್ದಾಗಿದ್ದು, ಕಳೆದ ಹಲವಾರು ವರ್ಷಗಳಿಂದ, ಈ ಚಿತ್ರವು ವಿಭಿನ್ನ ಮಾಹಿತಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. :'3200 ಕೋಟಿಯ ಪ್ರತಿಮೆ ಹೊಂದಿರುವ ದೇಶದ ಸರ್ಕಾರಿ ಶಾಲೆಗಳ ಸ್ಥಿತಿ ಇದು. ನೋಡಿ, ಈಗ ಹೇಳಿ, ಹೃದಯದಲ್ಲಿ ಮಾನವೀಯತೆ ಇರುವವರು, ದೇಶದಲ್ಲಿ 3200 ಕೋಟಿಯ ಪ್ರತಿಮೆ, ಇದು ಅಗತ್ಯವೇ ಅಥವಾ ಶಾಲೆಯೇ. #ನಾಚಿಕೆಗೇಡಿನ ಉತ್ತರ ಪ್ರದೇಶ.' ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆಯಲಾಗಿದೆ. ಹಲವು ಬಳಕೆದಾರರೂ ವೈರಲ್ ಪೋಸ್ಟನ್ನು ಹಂಚಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್ () ಅಲ್ಲದೆ ಟ್ವಿಟರ್‌ನಲ್ಲೂ () ಈ ಪೋಸ್ಟ್ ವೈರಲ್ ಆಗಿದೆ.‌ ಇಂಥಹ ಕೆಲವು ಪೋಸ್ಟ್‌ಗಳನ್ನು ನೀವುಇಲ್ಲಿಮತ್ತುಇಲ್ಲಿನೋಡಬಹುದು :ವೈರಲ್ ಪೋಸ್ಟ್‌ನ ಸತ್ಯಾಸತ್ಯತೆ ತಿಳಿಯಲು ಗೂಗಲ್ ರಿವರ್ಸ್ ಸರ್ಚ್ ( ) ಟೂಲ್ ಮೂಲಕ ಹುಡುಕಿದಾಗ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ವೈರಲ್ ಚಿತ್ರವನ್ನು ಕಂಡುಕೊಂಡಿದ್ದೇವೆ. ಅತ್ಯಂತ ಹಳೆಯ ಫೋಟೋ 2015 ರಲ್ಲಿ ಅಪ್‌ಲೋಡ್ ಮಾಡಲಾಗಿದೆ . ಪಾಕಿಸ್ತಾನಿ ಟ್ವಿಟರ್ ಹ್ಯಾಂಡಲ್ ಸ್ಕೈ ಕಿಂಗ್ಸ್ ( ) ಈ ಚಿತ್ರವನ್ನು ತನ್ನ ಖಾತೆಯಲ್ಲಿ 10 ಜನವರಿ 2015 ರಂದು ಅಪ್‌ಲೋಡ್ ಮಾಡಿದೆ. ಇನ್ನು ಹುಡುಕಾಟದ ಸಮಯದಲ್ಲಿ, ಮೂಲ ಚಿತ್ರವು . () ಹೆಸರಿನ ವೆಬ್‌ಸೈಟ್‌ನಲ್ಲಿಯೂ ಕಂಡುಬಂದಿದೆ. ಇದನ್ನು ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಶಾಲೆ ಎಂದು ವಿವರಿಸಲಾಗಿದೆ. ಇದನ್ನು 10 ಜೂನ್ 2015 ರಂದು ಪೋಸ್ಟ್ ಮಾಡಲಾಗಿದೆ. ಮೂಲ ಚಿತ್ರವನ್ನು ಇಲ್ಲಿ ವೀಕ್ಷಿಸಿ. :ಫ್ಯಾಕ್ಟ್‌ ಚೆಕ್‌ನಲ್ಲಿ ಉತ್ತರಪ್ರದೇಶದ ಸರ್ಕಾರಿ ಶಾಲೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೋಸ್ಟ್ ನಕಲಿ () ಎಂದು ಸಾಬೀತಾಗಿದೆ. ಇದು ಪಾಕಿಸ್ತಾನದ ಶಾಲೆಯೊಂದರ ಚಿತ್ರವಾಗಿದ್ದು 2015 ರಿಂದ ಅಂತರ್ಜಾಲದಲ್ಲಿ ಇರುವ ಈ ಚಿತ್ರವು ಈ ಹಿಂದೆ ಹಲವಾರು ಬಾರಿ ತಪ್ಪು ದಾರಿಗೆಳೆಯುವ ಮಾಹಿತಿಯೊಂದಿಗೆ ವೈರಲ್ ಆಗಿದೆ. ಇದನ್ನೂ ಓದಿ:ಕ್ರಿಕೆಟಿಗ ಶಕೀಬ್ ಅಲ್ ಹಸನ್ ನಿರ್ಮಿಸಿದ ಮಸೀದಿ ಹೆಸರಲ್ಲಿ ಉಕ್ರೇನ್ ರೈಲ್ವೆ ನಿಲ್ದಾಣದ ಫೋಟೋ ವೈರಲ್