: ವೈರಲ್‌ ವಿಡಿಯೋ ಕೇರಳದ ದೀಪೋತ್ಸವದ್ದಲ್ಲ, ಚೀನಾದ 'ಗೋಲ್ಡನ್‌ ಡ್ರ್ಯಾಗನ್‌' ಪರೇಡಿನದ್ದು :ನದಿಯಲ್ಲಿ ನಿರ್ದಿಷ್ಟ ಲಯದಲ್ಲಿ ದೀಪಗಳಿಂದ ಅಲಂಕರಿಸಲ್ಪಟ್ಟ ಹಡಗುಗಳು ಚಲಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನವದೆಹಲಿ (ನ. 10):ನದಿಯಲ್ಲಿ ನಿರ್ದಿಷ್ಟ ಲಯದಲ್ಲಿ ದೀಪಗಳಿಂದ ಅಲಂಕರಿಸಲ್ಪಟ್ಟ ಹಡಗುಗಳು ಚಲಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಿದರೆ ಡ್ರ್ಯಾಗನ್ () ನದಿಯಲ್ಲಿ ನಿಧಾನವಾಗಿ ಚಲಿಸುತ್ತಿರುವಂತೆ ಕಾಣುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಕೆಲವರು ಇದು ಕೇರಳದ () ನದಿಯೊಂದರಲ್ಲಿ 240/250 ದೋಣಿಗಳೊಂದಿಗೆ ಆಚರಿಸಿದ ದೀಪೋತ್ಸವ () ಎಂದು ಹೇಳಿದ್ದಾರೆ. ಆದರೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಫ್ಯಾಕ್ಟ್‌ ಚೆಕ್‌ ( ) ಮಾಡಿದಾಗ ಈ ಹೇಳಿಕೆಯು ತಪ್ಪು ದಾರಿಗೆಳೆಯುತ್ತಿರುವುದು ಸಾಬೀತಾಗಿದೆ. ವೈರಲ್ ಆಗುತ್ತಿರುವ ವೀಡಿಯೋ ಕೇರಳದ್ದಲ್ಲ ಬದಲಾಗಿ ಚೀನಾದ ಯುಲಾಂಗ್ ನದಿಯಲ್ಲಿ ನಡೆದ ಡ್ರ್ಯಾಗನ್ ಉತ್ಸವದ ( ) ವೀಡಿಯೊವಾಗಿದೆ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ( ) ತಿಳಿದುಬಂದಿದೆ. : ‘’ . 240 | ಕೇರಳದಲ್ಲಿ 250 ಹಡಗುಗಳನ್ನು ಬಳಸಿ ನದಿಯಲ್ಲಿ ದಿಪೋತ್ಸವ ಆಚರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಇದೇ ವಿಡಿಯೋವನ್ನು ವಿವಿಧ ಶೀರ್ಷಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ. ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ ರೀಲ್ಸ್‌ಗಳಲ್ಲೂ ಕೂಡ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು ಕೇರಳದ ದೀಪೋತ್ಸವ ಎಂದು ವಿವರಿಸಿದ್ದಾರೆ. :ವೈರಲ್‌ ವಿಡಿಯೋದ ಸ್ಕೀನ್‌ಶಾಟ್ಸ್‌ ತೆಗೆದುಕೊಂಡು ಗೂಗಲ್ ಲೆನ್ಸ್ ಸರ್ಚ್‌ ( ) ಮಾಡಿದಾಗ ರೆಡ್ಡಿಟ್‌ನ ಈ ಪೋಸ್ಟ್‌ () ಲಭ್ಯವಾಗುತ್ತದೆ. ರೆಡ್ಡಿಟ್‌ ಪೋಸ್ಟಿನಲ್ಲಿ ಇದನ್ನು ಚೀನಾದ ಗೋಲ್ಡನ್‌ ಡ್ರ್ಯಾಗನ್‌ ವಿಡಿಯೋ ಎಂದು ಬರೆಯಲಾಗಿದೆ. ಈ ಕೀವರ್ಡ್‌ಗಳನ್ನು ಬಳಸಿ ಇನ್ನಷ್ಟು ತನಿಖೆ ನಡೆಸಿದಾಗ ಯುಟ್ಯೂಬ್‌ನಲ್ಲಿ ಹಲವು ವಿಡಿಯೋಗಳು ಪತ್ತೆಯಾಗಿವೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೀಡಿಯೊಗೆ ಯುಟ್ಯೂಬ್‌ನಲ್ಲಿ ಸಿಕ್ಕ ವಿಡಿಯೋಗಳು ಹೊಂದಿಕೆಯಾಗುತ್ತವೆ. ಜುಲೈ 4 2022ರಂದು ನ್ಯೂ ಚೀನಾ ಟಿವಿ ( ) ಯುಟ್ಯೂಬ್‌ನಲ್ಲಿ ಪೋಸ್ಟ್‌ ಮಾಡಿರುವ ವಿಡಿಯೋದಲ್ಲಿ ಈ ವೈರಲ್‌ ವಿಡಿಯೋ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ. ಇನ್ನು ಚೀನಾ ಡೇಲಿ ( ) ವೆರಿಫೈಡ್‌ ಟ್ವೀಟರ್‌ ಖಾತೆಯಲ್ಲೂ ಈ ವಿಡಿಯೋವನ್ನು ಹಂಚಿಕೊಂಡಿದೆ. ನೀಡಿರುವ ಮಾಹಿತಿಯ ಪ್ರಕಾರ, ಈ ವಿಡಿಯೋ ದಕ್ಷಿಣ ಚೀನಾದ ಗುವಾಂಗ್ಸಿಯಲ್ಲಿ () ನಡೆದ ಡ್ರ್ಯಾಗನ್ ಪರೇಡ್‌ನದ್ದು. ಸ್ಥಳೀಯ ಅಧಿಕಾರಿಗಳ ಸಹಾಯದಿಂದ ಪ್ರವಾಸಿಗರನ್ನು ಆಕರ್ಷಿಸಲು ಲ್ಯಾಂಟರ್ನ್‌ಗಳಿಂದ ಅಲಂಕರಿಸಲ್ಪಟ್ಟ ದೋಣಿಗಳ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. :ದಕ್ಷಿಣ ಚೀನಾದ ಗುವಾಂಗ್ಸಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ನದಿಯಲ್ಲಿ ಡ್ರ್ಯಾಗನ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ವೀಡಿಯೊವು ಕೇರಳದಲ್ಲಿ ಆಚರಿಸಿದ ದೀಪೋತ್ಸವ ಎಂಬ ತಪ್ಪುದಾರಿಗೆಳೆಯುವ ಹೇಳೆಯೊಂದಿಗೆ ವೈರಲ್‌ ಆಗಿದೆ. ಇದನ್ನೂ ಓದಿ: : ಬಿಸಿ ತೆಂಗಿನ ನೀರು ಕ್ಯಾನ್ಸರನ್ನು ಗುಣಪಡಿಸುವುದಿಲ್ಲ: ವೈರಲ್ ಪೋಸ್ಟ್ ಸುಳ್ಳು ಇದನ್ನೂ ಓದಿ: : 'ಕೇರಳ ಹಿಂದೂ ಮಹಿಳೆ ಐಸಿಸ್‌ ಸೇರ್ಪಡೆ' ವೈರಲ್ ವಿಡಿಯೋ ಚಿತ್ರದ ಟೀಸರ್ನದ್ದು