: 'ಕೇರಳ ಹಿಂದೂ ಮಹಿಳೆ ಐಸಿಸ್‌ ಸೇರ್ಪಡೆ' ವೈರಲ್ ವಿಡಿಯೋ ಚಿತ್ರದ ಟೀಸರ್ನದ್ದು :ಕೇರಳದಲ್ಲಿ ಹಿಂದೂ ಮಹಿಳೆಯೊಬ್ಬರು ಇಸ್ಲಾಂಗೆ ಮತಾಂತರವಾಗಿ ಐಸಿಸ್‌ಗೆ ಸೇರ್ಪಡೆಯಾಗಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನವದೆಹಲಿ (ನ. 07):ಕೇರಳದಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಐಸಿಸ್‌ಗೆ ಸೇರ್ಪಡೆಯಾಗಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ( ) ವೈರಲ್‌ ಆಗಿದೆ. ಕೆಲವು ಸೆಕೆಂಡ್‌ಗಳ ಕಾಲ ಇರುವ ಈ ವಿಡಿಯೋದಲ್ಲಿರುವ ಮಹಿಳೆ ತನ್ನ ಹೆಸರನ್ನು ಶಾಲಿನಿ ಉನ್ನಿಕೃಷ್ಣನ್‌ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಹಲವರು, ಹಿಂದೂ ಧರ್ಮವನ್ನು ತೊರೆದು ಹೋದ ಕಾರಣದಿಂದ ಈ ರೀತಿಯಾಗಿದ್ದು ಸರಿಯಾಗಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಕೇರಳ ಮಹಿಳೆಯರನ್ನು ಅಪಹರಿಸಿ ಐಸಿಸ್‌ಗೆ () ಸೇರ್ಪಡೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಈ ವಿಡಿಯೋ ಮುಂಬರುವ ಮಲೆಯಾಳಂ ಸಿನಿಮಾವಾದ ‘ದ ಕೇರಳ ಸ್ಟೋರಿ’ಯ ( ) ವಿಡಿಯೋ ತುಣುಕು ಎಂಬುದು ಫ್ಯಾಕ್ಟ್‌ ಚೆಕ್‌ನಲ್ಲಿ ಸಾಬೀತಾಗಿದೆ. ನಿಜವಾದ ವಿಡಿಯೋದಲ್ಲಿ ಮಹಿಳೆಯ ಹಿಂಭಾಗದಲ್ಲಿ ಕಪ್ಪು ಬೋರ್ಡ್‌ ಇದ್ದು ಅದರಲ್ಲಿ ಕೇರಳ ಸ್ಟೋರಿ ಎಂದು ಬರೆಯಲಾಗಿದೆ. ಈ ವಿಡಿಯೋವನ್ನೇ ಎಡಿಟ್‌ ಮಾಡಿ ಆಕೆ ಯಾವುದೋ ಪ್ರದೇಶದಲ್ಲಿ ನಿಂತು ಮಾತನಾಡುತ್ತಿರುವಂತೆ ಮಾಡಲಾಗಿದೆ. ಹಾಗಾಗಿ ಕೇರಳದ ಹಿಂದೂ ಮಹಿಳೆ ಐಸಿಸ್‌ಗೆ ಸೇರ್ಪಡೆಯಾಗಿದ್ದಾಳೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವ ವಿಡಿಯೋ ದಾರಿ ತಪ್ಪಿಸುತ್ತಿದೆ. : ಭಯೋತ್ಪಾದಕಳಾಗಿ ಅಫ್ಘಾನಿಸ್ತಾನದ ಜೈಲಿನಲ್ಲಿರುವ ಕೇರಳದ ಹಿಂದೂ ಮಹಿಳೆ :ವೈರಲ್ ವೀಡಿಯೊದ ಕೊನೆಯಲ್ಲಿ ' ' ಎಂದು ಬರೆಯಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಲವರು # ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಇದೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಅನೇಕರು ಈ ವಿಡಿಯೋ ಮುಂಬರುವ ಚಲನಚಿತ್ರದ್ದು ಎಂದು ಹೇಳಿಕೊಂಡಿದ್ದಾರೆ. ವೈರಲ್ ವೀಡಿಯೊ ಕುರಿತು ನಾವು ಇನ್ನಷ್ಟು ತನಿಖೆ ನಡೆಸಿದಾಗ ಹಲವು ಮಾಧ್ಯಮ ವರದಿಗಳನ್ನು ಕಂಡುಕೊಂಡಿದ್ದೇವೆ. ನವೆಂಬರ್ 3ರಂದು ಪ್ರಕಟವಾದ ಏಷ್ಯಾನೆಟ್‌ ನ್ಯೂಸೆಬಲ್ (‌ ) ವರದಿಯಲ್ಲಿ "ಕೇರಳ ರಾಜ್ಯದಲ್ಲಿ 32,000 ಮಹಿಳೆಯರ ನಾಪತ್ತೆಯ ಹಿಂದಿನ ಘಟನೆಗಳನ್ನು ಬಹಿರಂಗಪಡಿಸುವ, ಅಮೃತ ಲಾಲ್ ಶಾ ನಿರ್ಮಾಣದ "ದಿ ಕೇರಳ ಸ್ಟೋರಿ" ಬಿಡುಗಡೆಗೆ ಸಿದ್ಧವಾಗುತ್ತಿದೆ" ಎಂದು ಹೇಳಲಾಗಿದೆ. ಮುಂದಿನ ವರ್ಷ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ವರದಿ ಹೇಳಿದೆ. ಇನ್ನು ನಟಿ ಅದಾ ಶರ್ಮಾ ( ) ಚಿತ್ರದಲ್ಲಿ ನಟಿಸಿದ್ದು ಸ್ವತಃ ಅವರು ಟ್ವೀಟರ್‌ನಲ್ಲಿ 1 ನಿಮಿಷ 11 ಸೆಕೆಂಡ್‌ಗಳ ವಿಡಿಯೋ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಚಲನಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ ಮತ್ತು ವಿಪುಲ್ ಅಮೃತಲಾಲ್ ಷಾ ಸನ್‌ಶೈನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ ಎಂದು ಹೇಳಲಾಗಿದೆ. ವೀಡಿಯೊದ ಕೊನೆಯಲ್ಲಿ " " ಎಂದೂ ಹೇಳಲಾಗಿದೆ. ಇನ್ನು ಚಿತ್ರದ ಟೀಸರನ್ನು ಸನ್‌ಶೈನ್ ಪಿಕ್ಚರ್ಸ್‌ ( ) ಯೂಟ್ಯೂಬ್ ಚಾನೆಲ್‌ನಲ್ಲಿ ನವೆಂಬರ್ 3 ರಂದು ಅಪ್‌ಲೋಡ್ ಮಾಡಲಾಗಿದೆ. ವೀಡಿಯೋದ ಕ್ಯಾಪ್ಶನ್‌ನಲ್ಲಿ “ - 32000 ! ! (ಕೇರಳದ 32,000 ಹೆಣ್ಣುಮಕ್ಕಳ ಹೃದಯ ವಿದ್ರಾವಕ ಮತ್ತು ಕರುಳು ಹಿಂಡುವ ಕಥೆಗಳು! ಶೀಘ್ರದಲ್ಲೇ ಬರಲಿದೆ!) ” ಎಂದು ಬರೆಯಲಾಗಿದೆ. :ಸಿನಿಮಾದ ಟೀಸರ್‌ನಲ್ಲಿ ಹೇಳಿರುವಂತೆ ಕೇರಳದ 32,000 ಮಹಿಳೆಯರನ್ನು ಭಯೋತ್ಪಾದಕ ಸಂಘಟನೆ ಕಳ್ಳಸಾಗಣೆ ಮಾಡಿರುವ ಬಗ್ಗೆಯೂ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಇನ್ನೂ ಈ ಬಗ್ಗೆ ದೂರು ಕೂಡ ದಾಖಲಾಗಿದೆ ಎಂದು ಏಷ್ಯಾನೆಟ್‌ ನ್ಯೂಸ್‌ ಮಲಯಾಲಂ ( ) ವರದಿ ತಿಳಿಸಿದೆ. ಆದರೆ ಈ ಹೇಳಿಕೆ ಫ್ಯಾಕ್ಟ್‌ಚೆಕ್‌ನ ಕೇಂದ್ರಬಿಂದುವಲ್ಲ. ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಈ ವಿಡಿಯೋ ಹಂಚಿಕೊಂಡಿದ್ದು ಬೆರಳೆಣಿಕೆಯಷ್ಟು ನೆಟ್ಟಿಗರು ಚಿತ್ರದ ಟೀಸರನ್ನು ನೈಜ ಘಟನೆ ಎಂದು ಹಂಚಿಕೊಂಡಿದ್ದಾರೆ. ಹೀಗಾಗಿ ತಪ್ಪು ಮಾಹಿತಿಯೊಂದಿಗೆ ಕೆಲವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. : ಪ್ರಧಾನಿ ಮೋದಿ ಕೈ ತೊಳೆಯುತ್ತಿರುವ ಫೋಟೋ ಶೌಚಾಲಯದ್ದಲ್ಲ, ಗುರುದ್ವಾರ ಪ್ರವೇಶದ್ವಾರದ್ದು