: ಚುನಾವಣೆ ಹಿನ್ನೆಲೆ ಮತದಾರರಿಗೆ ಹಣ ಹಂಚುತ್ತಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್? ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಣ ಹಂಚುತ್ತಿರುವ ವೀಡಿಯೊವನ್ನು ಹಲವಾರು ಜನರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. :ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ( 2022) ಮೊದಲ ಹಂತದ ಮತದಾನದ ಭರ್ಜರಿಯಾಗಿ ನಡೆದಿದೆ. ಪಂಚರಾಜ್ಯ ಚುನಾವಣೆಯ ( ) ಭಾಗವಾಗಿ ಸೋಮವಾರ ಮೂರು ರಾಜ್ಯಗಳಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಸೋಮವಾರ 2ನೇ ಹಂತದ ಮತದಾನ ನಡೆಯಲಿದೆ. ರಾಷ್ಟ್ರ ರಾಜಕಾರಣದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯವಿರುವ ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆ ಏರಲು ತದಿಗಾಲಲ್ಲಿ ನಿಂತಿವೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ( ) ವಿವಿಧ ಪಕ್ಷಗಳ ಬೆಂಬಲಿಗರು ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ( ) ಹಣ ಹಂಚುತ್ತಿರುವ ವೀಡಿಯೊವನ್ನುಹಲವಾರು ಜನರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದನ್ನೂ ಓದಿ: : ಟಿಎಂಸಿಯ ಹಳೆ ಪೋಸ್ಟರ್ ಬಳಸಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪ್ರಚಾರ! ವೈರಲ್‌ ವಿಡಿಯೋದಲ್ಲಿ ಯೋಗಿ ಆದಿತ್ಯನಾಥ್‌ ಕುರ್ಚಿಯ ಮೇಲೆ ಕುಳಿತುಕೊಂಡಿದ್ದು ಸುತ್ತಲು ಜನರಿದ್ದಾರೆ. ಹಣ ಪಡೆದ ನಂತರ ಕೆಲವರು ಯೋಗಿ ಪಾದಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಶೇರ್ ಮಾಡುತ್ತಿರುವವರು ಸಿಎಂ ಮತದಾರರಿಗೆ ಲಂಚ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.‌ ''ಅವರು ಸ್ಪರ್ಧಿಸುತ್ತಿರುವುದು ಹೀಗೆ. ಈ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಚುನಾವಣೆ ಗೆಲ್ಲಲು ಹಣ ಹಂಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ" ಎಂದು ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದಾರೆ. ಇದೇ ಹೇಳಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ಕೂಡ ವೀಡಿಯೊ ವೈರಲ್ ಆಗಿದೆ. ವೈರಲ್‌ ವಿಡಿಯೋಗಳನ್ನುಇಲ್ಲಿನೋಡಬಹುದು. :2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಈ ವೀಡಿಯೊ ಆರಂಭದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಏಪ್ರಿಲ್‌ 5 2019ರಂದು ಇಂಡಿಯಾ ಟುಡೆ ವರದಿ ಮಾಡಿತ್ತು. ವರದಿಇಲ್ಲಿನೋಡಬಹುದು. ಹೀಗಾಗಿ ವೈರಲ್ ಆಗಿರುವ ವಿಡಿಯೋ ಒಂದು ದಶಕದಷ್ಟು ಹಳೆಯದಾಗಿದ್ದು, ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ. :ಇನ್ನು ಮೂಲ ವೀಡಿಯೋವನ್ನು ವಿನಯ್ ಕುಮಾರ್ ಗೌತಮ್ () ಎಂಬ ವ್ಯಕ್ತಿ 2012 ರಲ್ಲಿ ಅಪ್‌ಲೋಡ್ ಮಾಡಿದ್ದರು. ವಿಡಿಯೋ ಅಪ್‌ಲೋಡ್ ಮಾಡಿದ್ದ ವ್ಯಕ್ತಿ ವಿಡಿಯೋವನ್ನು ಏಪ್ರಿಲ್ 2012 ರಲ್ಲಿ ಚಿತ್ರೀಕರಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಆ ಸಮಯದಲ್ಲಿ ಯೋಗಿ ಆದಿತ್ಯನಾಥ್ ಗೋರಖ್‌ಪುರದಿಂದ ಲೋಕಸಭೆಯ ಸಂಸದರಾಗಿದ್ದರು. ಇದನ್ನೂ ಓದಿ: : ತಿರುಪತಿ ದೇವಸ್ಥಾನದ ಪುರೋಹಿತರಿಂದ 128Kg ಚಿನ್ನ, ₹60 ಕೋಟಿ ಮೌಲ್ಯದ ವಜ್ರ ವಶ? ಗೌತಮ್ ಪ್ರಕಾರ, ಗೋರಖ್‌ಪುರ ಮತ್ತು ಸುತ್ತಮುತ್ತಲಿನ ಹಲವಾರು ಜನರು ತಮ್ಮ ಬೆಳೆಗಳು ಬೆಂಕಿಗಾಹುತಿಯಾದ ನಂತರ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದರು. ಆಗಿನ ಸಂಸದರಾದ ಯೋಗಿ ಈ ಗ್ರಾಮಸ್ಥರಿಗೆ ನೆರವಿಗೆ ಮುಂದಾಗಿದ್ದು ಸಂಸದರ ನಿಧಿಯನ್ನು ಬಳಸಿಕೊಂಡು ಆರ್ಥಿಕವಾಗಿ ಸಹಾಯ ಮಾಡಿದರು. ಆದರೆ, ನಂತರ ಗೌತಮ್ ಈ ವಿಡಿಯೋವನ್ನು ಯೂಟ್ಯೂಬ್ ನಿಂದ ಡಿಲೀಟ್ ಮಾಡಿದ್ದಾರೆ. ಹೀಗಾಗಿ, ಯೋಗಿ ಆದಿತ್ಯನಾಥ್ ಹಣ ಹಂಚುತ್ತಿರುವ ವೈರಲ್ ವಿಡಿಯೋ ಸುಮಾರು ಒಂದು ದಶಕದಷ್ಟು ಹಳೆಯದು ಮತ್ತು ಈಗ ನಡೆಯುತ್ತಿರುವ ಉತ್ತರಪ್ರದೇಶ ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದುಬಂದಿದೆ.