| ಮಾಧ್ಯಮಗಳ ಎಡವಟ್ಟಿಂದ ಮುಸ್ಲಿಂಗೆ ಥಳಿತ! ಆದರೆ ವೈರಲ್‌ ವಿಡಿಯೋದ ಸತ್ಯಾಸತ್ಯ ಪರಿಶೀಲಿಸಿದಾಗ ಕೊರೋನಾ ವೈರಸ್‌ಗೆ ಸಂಬಂಧವೇ ಇಲ್ಲದ ಯಾವುದೋ ಹಳೆಯ ವಿಡಿಯೋವವನ್ನು ಪೋಸ್ಟ್‌ ಮಾಡಿ, ಕೋಮು ಬಣ್ಣ ಬಳಿದು ಮಾಧ್ಯಮಗಳ ಮೇಲೆ ಆರೋಪಿಸಲಾಗಿದೆ ಎಂದು ತಿಳಿದುಬಂದಿದೆ. ಈ ವಿಡಿಯೋ 2 ವರ್ಷ ಹಳೆಯದು. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಾಲ ಹಿಂದಿರುಗಿಸದ ಆರೋಪದ ಮೇಲೆ ಅಹ್ಮದ್‌ ಎಂಬ ವ್ಯಕ್ತಿ ಮೇಲೆ ಹಲ್ಲೆ ಮಾಡಲಾಗಿತ್ತು. ಹಾಗಾಗಿ ಸದ್ಯ ವೈರಲ್‌ ಆಗಿರುವ ಸುದ್ದಿ ಸುಳ್ಳು.