ಎಸ್ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ನೀಡಿದ * ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ* ಎಸ್ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ನೀಡಿದ * ಉಚಿತ ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ ಅವಕಾಶ ಬೆಂಗಳೂರು, (ಮಾ.19):2021-22ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ( ) ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ() ಅವಕಾಶ ಮಾಡಿಕೊಟ್ಟಿದೆ. ಹೌದು..ಇದೇ ಮಾರ್ಚ್​ 28ರಿಂದ ಏಪ್ರಿಲ್​ 11ರವರೆಗೆ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ() ಬರೆಯುವ ವಿದ್ಯಾರ್ಥಿಗಳ() ಹಿತದೃಷ್ಟಿಯಿಂದ ಉಚಿತ ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ ಅವಕಾಶ ನೀಡಿದೆ. ಮಹತ್ವದ ನಿರ್ಧಾರಕ್ಕೆ ಮುಂದಾದ ಶಿಕ್ಷಣ ಇಲಾಖೆ , , ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಪರೀಕ್ಷಾ ಪ್ರವೇಶ ಪತ್ರವನ್ನು( ) ತೋರಿಸುವುದು ಕಡ್ಡಾಯವಾಗಿದ್ದು, ಪರೀಕ್ಷಾ ಕೇಂದ್ರದವರೆಗೆ ನಿಗಮದ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಆಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಹೋಗುವಾಗ ಹಾಗೂ ಹಿಂತಿರುಗುವಾಗ ಕಡ್ಡಾಯವಾಗಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ. ಹೊರವಲಯ ಸಾಮಾನ್ಯ ಹಾಗೂ ವೇಗದೂತ ಬಸ್​ಗಳಲ್ಲು ಉಚಿತವಾಗಿ ಪ್ರಯಾಣಿಸಬಹುದು. ಪರೀಕ್ಷಾ ಕೇಂದ್ರದ ಬಳಿ ಬಸ್ ಹತ್ತಲು ಹಾಗೂ ಇಳಿಯಲು ಕೂಡ ಅವಕಾಶ ಮಾಡಲಾಗುವುದು. ಈಗಾಗಲೇ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ಬಸ್ ಚಾಲಕ ನಿರ್ವಾಹಕರುಗಳಿಗೆ ಸೂಚಿಸಲಾಗಿದೆ. ಇನ್ನೂ ಪರೀಕ್ಷಾ ಕೇಂದ್ರದ ಬಳಿಯೇ ನಿಲುಗಡೆಗೆ ಸೂಚಿಸಲಾಗಿದೆ ಎಂದು ಕೆಸ್​ಆರ್​ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್ಎಸ್ಎಲ್ಸಿ ಮುಖ್ಯಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಪರೀಕ್ಷೆಗಳು ನಡೆಯಲಿವೆ. ಅಂತಿಮ ವೇಳಾಪಟ್ಟಿ ಇಂತಿದೆಮಾರ್ಚ್ 28- ಪ್ರಥಮ ಭಾಷೆ,ಮಾರ್ಚ್ 30- ದ್ವಿತೀಯ ಭಾಷೆ ಇಂಗ್ಲೀಷ್, ಕನ್ನಡಏಪ್ರಿಲ್ 1- ಅರ್ಥ ಶಾಸ್ತ್ರ, ಕೋರ್ ಸಬ್ಜೆಕ್ಟ್,ಏಪ್ರಿಲ್ 4- ಗಣಿತ, ಸಮಾಜಶಾಸ್ತ್ರಏಪ್ರಿಲ್ 6- ಸಮಾಜ ವಿಜ್ಞಾನಏ.8- ತೃತೀಯ ಭಾಷೆಏ.11- ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಪಿಯುಸಿ ಪರೀಕ್ಷೆ ವೇಳಾಪಟ್ಟಿಎಪ್ರಿಲ್/ಮೇ ತಿಂಗಳಿನಲ್ಲಿ ನಡೆಯುವ ದ್ವಿತೀಯ ಪಿಯುಸಿ (2nd ) ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ( ) ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಪರೀಕ್ಷೆ ಎಂದಿನಂತೆ ಏ.16ರಿಂದ ಮೇ.6ರವರೆಗೆ ನಡೆಯಲಿದೆ. ಏ.21ರಂದು ನಡೆಯಬೇಕಿದ್ದ ಭಾಷಾ ವಿಷಯಗಳಲ್ಲಿ ಉರ್ದು ಮತ್ತು ಅರೇಬಿಕ್ ವಿಷಯಗಳನ್ನು ಪ್ರತ್ಯೇಕಿಸಿ ಪರೀಕ್ಷೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ವೇಳಾಪಟ್ಟಿಯನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ ://.../ ನಲ್ಲಿ ಚೆಕ್‌ ಮಾಡಬಹುದು. ಇದರ ಪ್ರಕಾರವಾಗಿ ಏ.21ರಂದು ಉರ್ದು ಪರೀಕ್ಷೆ ಎಂದಿಂತೆ ನಡೆಯಲಿದ್ದು, ಈ ಮೊದಲು ರಜೆ ಅವಧಿಯಾಗಿದ್ದ ಏ.29ಕ್ಕೆ ಅರೆಬಿಕ್ ಪರೀಕ್ಷೆ ನಡೆಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಹೊಸ ವೇಳಾಪಟ್ಟಿ ವಿವರ ಇಂತಿದೆ...ಏಪ್ರಿಲ್ 16: ಗಣಿತ, ಶಿಕ್ಷಣ, ಬೇಸಿಕ್ ಗಣಿತಏಪ್ರಿಲ್ 18: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರಏಪ್ರಿಲ್ 19: ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್ಏಪ್ರಿಲ್ 20: ಇತಿಹಾಸ, ಭೌತಶಾಸ್ತ್ರಏಪ್ರಿಲ್ 21: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ಏಪ್ರಿಲ್ 22: ಲಾಜಿಕ್, ಬಿಸಿನೆಸ್ ಸ್ಟಡೀಸ್ಏಪ್ರಿಲ್ 23: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನೋವಿಜ್ಞಾನ, ರಸಾಯನಶಾಸ್ತ್ರಏಪ್ರಿಲ್ 25: ಅರ್ಥಶಾಸ್ತ್ರಏಪ್ರಿಲ್ 26: ಹಿಂದಿಏಪ್ರಿಲ್ 28: ಕನ್ನಡಏಪ್ರಿಲ್ 29: ಅರೇಬಿಕ್ಏಪ್ರಿಲ್ 30: ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ಮೇ 2: ಭೂಗೋಳ, ಜೀವಶಾಸ್ತ್ರಮೇ 4: ಇಂಗ್ಲಿಷ್ಮೇ 6: ಲೆಕ್ಕ ಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ, ಕನ್ನಡ (ಐಚ್ಛಿಕ)