: ಶಿಕ್ಷಣಕ್ಕಾಗಿ ಕಿಲೋ ಮೀಟರ್‌ಗಟ್ಟಲೇ ನಡೆಯುತ್ತಿದ್ದ ಶಿರ್ವೆ ವಿದ್ಯಾರ್ಥಿಗಳಿಗೆ ಬಸ್‌ ಭಾಗ್ಯ! *ಶಿಕ್ಷಣಕ್ಕಾಗಿ ಕಿಲೋ ಮೀಟರ್‌ಗಟ್ಟಲೇ ನಡೆಯುವ ವಿದ್ಯಾರ್ಥಿಗಳು*ಸಾಕಷ್ಟು ಸಮಯದಿಂದ ಬಸ್‌ ಸೇವೆಗಾಗಿ ಕಾಯುತ್ತಿದ್ದ ಶಿರ್ವೆಯ ಮಕ್ಕಳು*ದಟ್ಟವಾದ ಕಾಡಿನಲ್ಲಿ ಹತ್ತಾರು ಕಿ.ಮೀ ನಡೆದು ಶಾಲೆ-ಕಾಲೇಜಿಗೆ ಹಾಜರು*ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿದ ಸ್ಪಂದಿಸಿದ ಶಾಸಕಿ ರೂಪಾಲಿ ನಾಯ್ಕ್*ಕೂಡಲೇ ಬಸ್ ಸೌಲಭ್ಯ ಒದಗಿಸಿದ ಸಾರಿಗೆ ಇಲಾಖೆಯ ಅಧಿಕಾರಿಗಳು ಕಾರವಾರ (ಫೆ. 21): ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕುಗ್ರಾಮವಾದ ಶಿರ್ವೆಯ ವಿದ್ಯಾರ್ಥಿಗಳು ದಟ್ಟವಾದ ಕಾಡಿನ ರಸ್ತೆಯಲ್ಲಿ ಹತ್ತಾರು ಕಿ.ಮೀ ನಡೆದುಕೊಂಡೇ ಶಾಲೆ-ಕಾಲೇಜಿಗೆ ತೆರಳಿ ಶಿಕ್ಷಣ ಪಡೆಯುತ್ತಿದ್ದರು. ಶಿರ್ವೆ ಗ್ರಾಮದಿಂದ ದೇವಳಮಕ್ಕಿಯ ಆದರ್ಶ ವಿದ್ಯಾಲಯದ 18 ವಿದ್ಯಾರ್ಥಿಗಳು, ಕೆರವಾಡಿಯ ದುರ್ಗಾದೇವಿ ಪದವಿಪೂರ್ವ ಕಾಲೇಜಿಗೆ 9 ವಿದ್ಯಾರ್ಥಿಗಳು ಹಾಗೂ ಸಿದ್ದರ ಗ್ರಾಮದ ಐಟಿಐ ಕಾಲೇಜಿನಲ್ಲಿ ಓರ್ವ ವಿದ್ಯಾರ್ಥಿ ತೆರಳುತ್ತಿದ್ದರು.ಈ ಪ್ರದೇಶ ಕುಗ್ರಾಮವಾಗಿರುವ ಕಾರಣ ಹೆಚ್ಚು ವಾಹನಗಳೂ ಈ ಪ್ರದೇಶದಲ್ಲಿ ಓಡಾಟ ನಡೆಸುವುದಿಲ್ಲ. ಬಹುತೇಕ ಗ್ರಾಮಸ್ಥರು ಕೂಲಿ ಮಾಡಿ ಜೀವನ ಮಾಡುತ್ತಿರುವುದರಿಂದ ಸ್ವಂತ ವಾಹನಗಳನ್ನೂ ಹೊಂದಿಲ್ಲ. ಹೀಗಾಗಿ ಸಾಕಷ್ಟು ಸಮಯಗಳಿಂದ ಶಿರ್ವೆ ವ್ಯಾಪ್ತಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಜನರು ಬೇಡಿಕೆಯಿಟ್ಟಿದ್ದರು.ಇದನ್ನೂ ಓದಿ: : ಬಣ್ಣ ಬಣ್ಣದ ಚಿತ್ರಗಳಿಂದ ಕಾನೂನಿನ ಅರಿವು ಮೂಡಿಸುತ್ತಿದೆ ಯಲ್ಲಾಪುರ ಪೊಲೀಸ್ ಠಾಣೆ!ಆದರೆ, ಯಾವಾಗ ಜನರ ಹಾಗೂ ವಿದ್ಯಾರ್ಥಿಗಳ ಈ ಬೇಡಿಕೆ ಮಾಧ್ಯಮದ ಮುಂದೆ ಇಡಲ್ಪಟ್ಟಿತೋ ಕೂಡಲೇ ಸ್ಪಂದಿಸಿದ ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್, ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಕೂಡಲೇ ಬಸ್ ಸೌಲಭ್ಯ ಒದಗಿಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ. ಕಾರವಾರ (ಫೆ. 21): ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕುಗ್ರಾಮವಾದ ಶಿರ್ವೆಯ ವಿದ್ಯಾರ್ಥಿಗಳು ದಟ್ಟವಾದ ಕಾಡಿನ ರಸ್ತೆಯಲ್ಲಿ ಹತ್ತಾರು ಕಿ.ಮೀ ನಡೆದುಕೊಂಡೇ ಶಾಲೆ-ಕಾಲೇಜಿಗೆ ತೆರಳಿ ಶಿಕ್ಷಣ ಪಡೆಯುತ್ತಿದ್ದರು. ಶಿರ್ವೆ ಗ್ರಾಮದಿಂದ ದೇವಳಮಕ್ಕಿಯ ಆದರ್ಶ ವಿದ್ಯಾಲಯದ 18 ವಿದ್ಯಾರ್ಥಿಗಳು, ಕೆರವಾಡಿಯ ದುರ್ಗಾದೇವಿ ಪದವಿಪೂರ್ವ ಕಾಲೇಜಿಗೆ 9 ವಿದ್ಯಾರ್ಥಿಗಳು ಹಾಗೂ ಸಿದ್ದರ ಗ್ರಾಮದ ಐಟಿಐ ಕಾಲೇಜಿನಲ್ಲಿ ಓರ್ವ ವಿದ್ಯಾರ್ಥಿ ತೆರಳುತ್ತಿದ್ದರು. ಈ ಪ್ರದೇಶ ಕುಗ್ರಾಮವಾಗಿರುವ ಕಾರಣ ಹೆಚ್ಚು ವಾಹನಗಳೂ ಈ ಪ್ರದೇಶದಲ್ಲಿ ಓಡಾಟ ನಡೆಸುವುದಿಲ್ಲ. ಬಹುತೇಕ ಗ್ರಾಮಸ್ಥರು ಕೂಲಿ ಮಾಡಿ ಜೀವನ ಮಾಡುತ್ತಿರುವುದರಿಂದ ಸ್ವಂತ ವಾಹನಗಳನ್ನೂ ಹೊಂದಿಲ್ಲ. ಹೀಗಾಗಿ ಸಾಕಷ್ಟು ಸಮಯಗಳಿಂದ ಶಿರ್ವೆ ವ್ಯಾಪ್ತಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಜನರು ಬೇಡಿಕೆಯಿಟ್ಟಿದ್ದರು. ಇದನ್ನೂ ಓದಿ: : ಬಣ್ಣ ಬಣ್ಣದ ಚಿತ್ರಗಳಿಂದ ಕಾನೂನಿನ ಅರಿವು ಮೂಡಿಸುತ್ತಿದೆ ಯಲ್ಲಾಪುರ ಪೊಲೀಸ್ ಠಾಣೆ! ಆದರೆ, ಯಾವಾಗ ಜನರ ಹಾಗೂ ವಿದ್ಯಾರ್ಥಿಗಳ ಈ ಬೇಡಿಕೆ ಮಾಧ್ಯಮದ ಮುಂದೆ ಇಡಲ್ಪಟ್ಟಿತೋ ಕೂಡಲೇ ಸ್ಪಂದಿಸಿದ ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್, ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಕೂಡಲೇ ಬಸ್ ಸೌಲಭ್ಯ ಒದಗಿಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.