: ವಿದ್ಯಾರ್ಥಿಗಳ ಮೇಲೆ ಎಫ್‌ಐಆರ್‌, 58 ಮಂದಿ ಸಸ್ಪೆಂಡ್‌ * ತುಮಕೂರಲ್ಲಿ 144 ಸೆಕ್ಷನ್‌ ಉಲ್ಲಂಘಿಸಿದ 10 ಮಂದಿ ಮೇಲೆ ಕೇಸ್‌* ಶಿರಾಳಕೊಪ್ಪದಲ್ಲಿ 58 ವಿದ್ಯಾರ್ಥಿನಿಯರು ಅಮಾನತು* ವಿದ್ಯಾರ್ಥಿನಿಯರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ/ ತುಮಕೂರು(ಫೆ.19):ಇಷ್ಟು ದಿನ ಹಿಜಾಬ್‌() ಧಾರಿ ವಿದ್ಯಾರ್ಥಿಗಳ() ಮನವೊಲಿಕೆಗೆ ಮುಂದಾಗಿದ್ದ ಸರ್ಕಾರ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಸತತ ಮನವಿಯ ಬಳಿಕವೂ ಕಾಲೇಜು ಆವರಣದಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ 58 ವಿದ್ಯಾರ್ಥಿನಿಯರನ್ನು ಶಿರಾಳಕೊಪ್ಪದಲ್ಲಿ ಅಮಾನತುಗೊಳಿಸಿ() ಕಾಲೇಜಿನ ಪ್ರಾಂಶುಪಾಲರು ಆದೇಶ ಹೊರಡಿಸಿದ್ದಾರೆ. ತುಮಕೂರಿನಲ್ಲಿ() 144 ಸೆಕ್ಷನ್‌ ಜಾರಿಯಿದ್ದರೂ ಗುಂಪುಗೂಡಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಿರಾಳಕೊಪ್ಪದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಸೋಮವಾರದಿಂದಲೂ ಕಾಲೇಜು ವಿಭಾಗದ ವಿದ್ಯಾರ್ಥಿನಿಯರು ಹಿಜಾಬ್‌ ತೆಗೆಯದೇ ತಮ್ಮನ್ನು ಒಳಗೆ ಪ್ರವೇಶಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ನಿತ್ಯವೂ ಕಾಲೇಜಿನ ಆವರಣದಲ್ಲಿಯೇ ಈ ರೀತಿ ಪ್ರತಿಭಟನೆ() ನಡೆಸಿ, ಘೋಷಣೆ ಕೂಗುವುದರಿಂದ ನಮಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಇತರ ವಿದ್ಯಾರ್ಥಿಗಳು ದೂರಿದ್ದರು. ಮೋದಿ ಸರ್ಕಾರದಿಂದ ಕೋಮುವಾದ ಸೃಷ್ಟಿ, ಗುಡುಗಿದ ಸಿದ್ದರಾಮಯ್ಯ! ಈ ದೂರಿನ ಆಧಾರದ ಮೇಲೆ ಹಿರಿಯ ಅಧಿಕಾರಿಗಳು ಕಾಲೇಜಿನ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದು, ಈ ಸಂಬಂಧ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್‌ ಮುಂದಿನ ಆದೇಶದವರೆಗೆ ಪ್ರಥಮ ಪಿಯುಸಿಯ 38 ಮತ್ತು ದ್ವಿತೀಯ ಪಿಯುಸಿಯ 20 ವಿದ್ಯಾರ್ಥಿಗಳನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಮತ್ತೊಂದೆಡೆ ತುಮಕೂರಿನ ಎಂಪ್ರೆಸ್‌ ಶಾಲೆಯಲ್ಲಿ ನಾವು ಹಿಜಾಬ್‌ ತೆಗೆದು ತರಗತಿಗೆ ಬರುವುದಿಲ್ಲ ಎಂದು ಹಠ ಹಿಡಿದ ವಿದ್ಯಾರ್ಥಿನಿಯರು, ಗುಂಪುಗೂಡಿ ಪ್ರತಿಭಟನೆ ನಡೆಸಿದ್ದರಿಂದ 10 ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ() ದಾಖಲಾಗಿದೆ. ಹಿಜಾಬ್ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಕೆಲಸ ಮಾಡಬೇಕಿದೆ, ಸಿಎಂಗೆ ಪತ್ರ ಬರೆದ ಸುರೇಶ್ ಕುಮಾರ್‌ ಹಿಜಾಬ್-ಸಮವಸ್ತ್ರಗಳ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಕೆಲಸಕ್ಕೆ ಶಿಕ್ಷಣ ಇಲಾಖೆ ಹೊಸ ಕಾಯಕಲ್ಪದೊಂದಿಗೆ ಕೆಲಸ‌ ಮಾಡಬೇಕಿದೆ ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ( ) ಹೇಳಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( ) ಹಾಗೂ ಶಿಕ್ಷಣ‌ ಮಂತ್ರಿಗಳಾದ ಶ್ರೀ ಬಿ ಸಿ. ನಾಗೇಶ್ ( ) ಅವರುಗಳಿಗೆ ಸುದೀರ್ಘ ಪತ್ರ ಬರೆದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಲೆ ಕಾಲೇಜುಗಳ ಆವರಣದಲ್ಲಿ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ‌ ಆರೋಪ ಪ್ರತ್ಯಾರೋಪಗಳನ್ನು ಮೀರುವ, ಶಿಕ್ಷಣದ‌ () ಕಡೆಗೆ ಒಲವು ಹೆಚ್ಚುವ ಸಕಾರಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸುವ ಕುರಿತಂತೆ ನಾವು ಹೆಚ್ಚಾಗಿ ಆಲೋಚಿಸಬೇಕಿದೆ ಎಂದು ಹೇಳಿದ್ದಾರೆ. : 'ಸಿಡಿಸಿ' ರಚನೆ ಪ್ರಶ್ನಿಸಿದ ವಕೀಲ ರವಿವರ್ಮ ಕುಮಾರ್‌ಗೆ ಎಜಿ ನಾವದಗಿ ಉತ್ತರ ಶಿಕ್ಷಣ ಇಲಾಖೆ ( ) ಹೊಸ ನಾಯಕತ್ವದೊಂದಿಗೆ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಸಮವಸ್ತ್ರದ ಬಗ್ಗೆ ಹೆಮ್ಮೆ ಪಡಬೇಕು. ಭವಿಷ್ಯದಲ್ಲಿ ನಮ್ಮ ವಿದ್ಯಾರ್ಥಿಗಳು ಬೆಳೆಯಬೇಕಾದರೆ ಶಿಕ್ಷಣ ಇಲಾಖೆಯ ಕಾರ್ಯವು ಮಹತ್ವದ್ದಾಗಿರಬೇಕು ಎಂದು ಶಾಸಕ ಸುರೇಶ್ ಕುಮಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನ್ಯಾಯಾಲಯವು ಸಾಂವಿಧಾನಿಕ ಅವಕಾಶಗಳನ್ನು ನೋಡುತ್ತಿದೆ. ಆದರೆ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದ ಸರ್ಕಾರದ ಪರ ವಕೀಲ ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಹಿಜಾಬ್ ಪ್ರಕರಣದಲ್ಲಿ ( ) ಶುಕ್ರವಾರ ಸರ್ಕಾರದ ಪರ ವಕೀಲ ಪ್ರಭುಲಿಂಗ ನಾವದಗಿ ( ) ವಾದ ಮಂಡಿಸಿದರು. ಹಿಜಾಬ್ ಎನ್ನುವುದು ಎಂದಿಗೂ ಇಸ್ಲಾಂ ನ ಅವಿಭಾಜ್ಯ ಅಂಗವಾಗಿರಲಿಲ್ಲ. ವಿದ್ಯಾರ್ಥಿಗಳಿಗೆ ಏನೇ ತೊಂದರೆ ಆದರೂ ಶಿಕ್ಷಕರ ಸಮಿತಿಯ ಮುಂದೆ ಹೋಗಬಹುದು. ಶಿಕ್ಷಣ ಇಲಾಖೆಯ 12ನೇ ಕಲಂ ನ ಅಡಿ ರಚನೆ ಮಾಡಿರುವ ಸಮಿತಿ ಇದಾಗಿದೆ ಎಂದು ನಾವದಗಿ ವಾದ ಮಂಡನೆ ಮಾಡಿದ್ದಾರೆ.