: 2021-22ನೇ ಸಾಲಿನ ದ್ವೀತಿಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ * ದ್ವೀತಿಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ* 2021-22ನೇ ಸಾಲಿನ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ ಪದವಿ ಪೂರ್ವ ಶಿಕ್ಷಣ ಇಲಾಖೆ* ಏಪ್ರಿಲ್ 16ರಿಂದ ಮೇ 4ರವರೆಗೆ ನಡೆಯಲಿರುವ ಪರೀಕ್ಷೆಗಳು ಬೆಂಗಳೂರು, (ಜ.18):ಎಸ್‌ಎಸ್‌ಎಲ್‌ಸಿ() ಬೆನ್ನಲ್ಲೇ ಇದೀಗ ದ್ವೀತಿಯ ಪಿಯುಸಿ ಪರೀಕ್ಷೆಯ( ) ತಾತ್ಕಾಲಿಕ ವೇಳಾಪಟ್ಟಿ( ) ಬಿಡುಗಡೆ ಮಾಡಲಾಗಿದೆ. ಇಂದು(ಮಂಗಳವಾರ) ಪದವಿ ಪೂರ್ವ ಶಿಕ್ಷಣ ಇಲಾಖೆ ( ) 2021-22ನೇ ಸಾಲಿನ ದ್ವೀತಿಯ ಪಿಯುಸಿಯ ( ) ತಾತ್ಕಾಲಿಕ ವೇಳಾಪಟ್ಟಿ ( ) ಬಿಡುಗಡೆ ಮಾಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ ಏಪ್ರಿಲ್ 16ರಿಂದ ಮೇ 4ರವರೆಗೆ ಪಿಯು ವಾರ್ಷಿಕ ಪರೀಕ್ಷೆ ನಡೆಯಲಿವೆ. ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಇದರಲ್ಲಿ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪತ್ರದ ಮೂಲಕ ತಿಳಿಸಬಹುದು. ಆ ಬಳಿಕ ಎಲ್ಲಾವುಗಳನ್ನ ಪರಿಶೀಲಿಸಿ ಅಂತಿಮವಾಗಿ ಫೈನಲ್ ವೇಳಾಪಟ್ಟಿ ರಿಲೀಸ್ ಮಾಡುತ್ತದೆ. ಪಿಯುಸಿ ವೇಳಾಪಟ್ಟಿ ಇಂತಿದೆಏಪ್ರಿಲ್​ 14- ಗಣಿತಏಪ್ರಿಲ್​ 18- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರಏ.20- ಇತಿಹಾಸ, ಭೌತಶಾಸ್ತ್ರಏಪ್ರಿಲ್ 22- ತರ್ಕಶಾಸ್ತ್ರಏ.23- ಮನಃಶಾಸ್ತ್ರ, ರಸಾಯನಶಾಸ್ತ್ರ,ಏ.25- ಅರ್ಥಶಾಸ್ತ್ರಏ.26- ಹಿಂದಿ,ಏಪ್ರಿಲ್​​ 28- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರಏ.29- ಕನ್ನಡಏ.30- ಸಮಾಜಶಾಸ್ತ್ರ, ಕಂಪ್ಯೂಟರ್​​ ಸೈನ್ಸ್​ಮೇ 2- ಭೂಗೋಳ ಶಾಸ್ತ್ರ ಹಾಗೂ ಜೀವಶಾಸ್ತ್ರಮೇ 4- ಇಂಗ್ಲಿಷ್​​ ಪರೀಕ್ಷೆ ನಡೆಯಲಿದೆ. ಇತ್ತೀಚೆಗೆ ಮುಕ್ತಾಯಗೊಂಡ ದ್ವಿತೀಯ ಪಿಯುಸಿ ( ) ಮಧ್ಯ ವಾರ್ಷಿಕ ಪರೀಕ್ಷೆಯ ವಿವಿಧ ಪ್ರಶ್ನೆ ಪತ್ರಿಕೆಗಳಲ್ಲಿ ಅನೇಕ ಪ್ರಶ್ನೆಗಳನ್ನು ತಪ್ಪಾಗಿ ಕೇಳಿರುವುದಲ್ಲದೆ, ಪುರಾವರ್ತನೆ, ಸಾಕಷ್ಟು ಮುದ್ರಣದ ದೋಷದ ಸರಮಾಲೆಯೇ ಕಂಡುಬಂದಿದೆ. ಈ ಬಾರಿಪದವಿಪೂರ್ವ ಶಿಕ್ಷಣ ಇಲಾಖೆಯೇ ( ) ಸಿದ್ಧಪಡಿಸಿ ನೀಡಿರುವ ಪ್ರಶ್ನೆ ಪತ್ರಿಕೆಗಳಲ್ಲಿ ಲೋಪಗಳ ಬಗ್ಗೆವಿದ್ಯಾರ್ಥಿಗಳುಹಾಗೂ ಉಪನ್ಯಾಸಕರಿಂದಲೇ ಆರೋಪಗಳು ಕೇಳಿಬರುತ್ತಿವೆ. ಲೆಕ್ಕಶಾಸ್ತ್ರ, ಇಂಗ್ಲಿಷ್‌ () , ಗಣಿತ, ರಸಾಯನಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳ ಪ್ರಶ್ನೆ ಪತ್ರಿಕೆಗಳಲ್ಲಿ ಈ ರೀತಿಯ ಹಲವು ಲೋಪಗಳು ಕಂಡು ಬಂದಿವೆ. ಪ್ರಶ್ನೆ ಪತ್ರಿಕೆ ( ) ಸಿದ್ಧಪಡಿಸುವಲ್ಲಿ ಪಿಯು ಇಲಾಖೆ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ ಎಂದು ವಿದ್ಯಾರ್ಥಿ () , ಉಪನ್ಯಾಸಕರು ಕಿಡಿಕಾರಿದ್ದಾರೆ. ಅಲ್ಲದೆ, ತಪ್ಪಾಗಿ ಕೇಳಿರುವ ಪ್ರಶ್ನೆಗಳು ಹಾಗೂ ಮುದ್ರಣ ದೋಷಗಳನ್ನು ಗುರುತಿಸಿರುವ ಪ್ರಶ್ನೆ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ( ) ಹರಿದಾಡುತ್ತಿವೆ. ತಪ್ಪುಗಳೇನು? ರಾಜ್ಯದ ವಿವಿಧ ಕಾಲೇಜುಗಳ ಉಪನ್ಯಾಸಕರು ನೀಡಿದ ಮಾಹಿತಿ ಪ್ರಕಾರ, ಇಂಗ್ಲಿಷ್‌ ಪ್ರಶ್ನೆ ಪತ್ರಿಕೆಯ ಪ್ರಶ್ನೆ 8ರಲ್ಲಿ ಪದ್ಯದ ಹೆಸರನ್ನೇ ಬದಲಿಸಲಾಗಿದೆ. ‘ವೆನ್‌ ಯು ಆರ್‌ ಓಲ್ಡ್‌’ ಎನ್ನುವ ಹೆಸರಿನ ಬದಲು ‘ಆನ್‌ ಚಿಲ್ಡ್ರನ್‌’ ಎಂದು ನೀಡಲಾಗಿದೆ. ಅಲ್ಲದೆ ಈ ಬಾರಿಯ ಮಧ್ಯವಾರ್ಷಿಕ ಪರೀಕ್ಷೆಗೆ ನಿಗದಿಪಡಿಸಿರುವ ಪಠ್ಯದಲ್ಲಿ ಡೈಲಾಗ್‌ ಡೆಲಿವರಿಯೇ ಇರಲಿಲ್ಲ. ಆದರೆ, ಪ್ರಶ್ನೆ ಪತ್ರಿಕೆಯಲ್ಲಿ ಅದನ್ನೂ ಕೇಳಲಾಗಿದೆ ಎಂದು ಆರೋಪಿಸಲಾಗಿದೆ. ಎಸ್‌ಎಸ್‌ಎಲ್‌ಸಿ ತಾತ್ಕಾಲಿಕ ವೇಳಾಪಟ್ಟಿಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ( ) ಇಂದು (ಜ.06) 2021-22ನೇ ಸಾಲಿನ 10ನೇ ತರಗತಿ ()ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 28 - ಕನ್ನಡಮಾರ್ಚ್ 30 - ದ್ವಿತೀಯ ಭಾಷೆ ಇಂಗ್ಲೀಷ್, ಕನ್ನಡಏಪ್ರಿಲ್ 1 - ಅರ್ಥಶಾಸ್ತ್ರಏಪ್ರಿಲ್‌ 4 - ಗಣಿತ, ಸಮಾಜ ಶಾಸ್ತ್ರಏಪ್ರಿಲ್ 6 - ಸಮಾಜ‌ ವಿಜ್ಞಾನಏಪ್ರಿಲ್ 8 - ತೃತೀಯ ಭಾಷೆ ಹಿಂದಿಏಪ್ರಿಲ್ 11 - ವಿಜ್ಞಾನ