ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಮೈಸೂರಿನ 8ರ ಬಾಲಕಿ ದಾಖಲೆ ಮೈಸೂರಿನ ಮಾನಸರೋವರ ಪುಷ್ಕರಣಿ ವಿದ್ಯಾಶ್ರಮ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಚಿರಾಧ್ಯ ಎಸ್ ಜಿ ಭಟ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆಯನ್ನು ನಿರ್ಮಿಸಿದ್ದಾಳೆ. ಮೈಸೂರಿನ ಮಾನಸರೋವರ ಪುಷ್ಕರಣಿ ವಿದ್ಯಾಶ್ರಮ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಚಿರಾಧ್ಯ ಎಸ್ ಜಿ ಭಟ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆಯನ್ನು ನಿರ್ಮಿಸಿದ್ದಾಳೆ. ಮೈಸೂರಿನ ಮಾನಸರೋವರ ಪುಷ್ಕರಣಿ ವಿದ್ಯಾಶ್ರಮ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಚಿರಾಧ್ಯ ಎಸ್ ಜಿ ಭಟ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆಯನ್ನು ನಿರ್ಮಿಸಿದ್ದಾಳೆ. ಈಕೆ 1ರಿಂದ 100ರ ವರೆಗಿನ ಸಂಖ್ಯೆಗಳನ್ನು ಸ್ಪ್ಯಾನಿಶ್ ಭಾಷೆಯಲ್ಲಿ 1 ನಿಮಿಷ 10 ಸೆಕೆಂಡ್‌ನಲ್ಲಿ ಹೇಳಿ ದಾಖಲೆಯನ್ನು ತನ್ನ 8ನೇ ವಯಸ್ಸಿಗೆ ನಿರ್ಮಿಸಿದ್ದಾಳೆ. ಈಕೆ ಟಿ.ವಿ. ಕಾರ್ಟೂನ್ ನೋಡುತ್ತಾ ಎರಡೂವರೆ ವರ್ಷ ಪ್ರಾಯದಲ್ಲಿಯೇ ಸ್ಪ್ಯಾನಿಶ್ ಭಾಷೆಯಲ್ಲಿ 1ರಿಂದ 10ರ ವರೆಗಿನ ಅಂಕಿಗಳನ್ನು ಕಲಿತು ನಂತರ ತನ್ನ ತಾಯಿಯ ಸಹಕಾರದಿಂದ ನಿಂದ ಹೆಚ್ಚಿನ ಸಂಖ್ಯೆಗಳನ್ನು ಕಲಿತು ಅತ್ಯಂತ ವೇಗವಾಗಿ ಹೇಳುವ ಮುಖಾಂತರ ರೆಕಾರ್ಡ್ ಮಾಡಿದ್ದಾಳೆ. ಲಾಕ್‌ಡೌನ್ ಸಮಯದಲ್ಲಿ ಸ್ಪ್ಯಾನಿಶ್ ಭಾಷೆಯಲ್ಲಿ ದೇಹದ ಭಾಗಗಳ, ಬಣ್ಣಗಳ, ವಾರಗಳ ತಿಂಗಳುಗಳ, ಸರಳ ಪದಗಳ, ಪ್ರಾಣಿಗಳ ಹೆಸರುಗಳನ್ನು ಅತ್ಯಂತ ವೇಗವಾಗಿ ಹೇಳುತ್ತಾಳೆ ಈ ಪುಟ್ಟ ಪೋರಿ. ಈಕೆ ಕೀಬೋರ್ಡ್ ಅನ್ನು ಕಳೆದ 4 ತಿಂಗಳುಗಳಿಂದ ಮೈಸೂರಿನ ಜೋಯೆಲ್ ಶಿರಿಯವರ ಮಾರ್ಗದರ್ಶನದಲ್ಲಿ ಕಲಿಯುತ್ತಿದ್ದಾಳೆ. ಚಿರಾಧ್ಯ ದ. ಕ ಮೂಲದ ಆನೆಕಲ್ಲು ಸತ್ಯಗಣಪತಿ ಭಟ್ ಹಾಗೂ ಅನುಪ್ರಿಯ ದಂಪತಿಗಳ ಪುತ್ರಿ. ಇವಳು ಇತ್ತೀಚೆಗೆ ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಕೀಬೋರ್ಡ್ ನುಡಿಸುವಲ್ಲಿಯೂ ದಾಖಲೆ ನಿರ್ಮಿಸಿದ್ದಾಳೆ. ಈ ದಾಖಲೆಗಾಗಿ ಕಣ್ಣಿಗೆ ಪಟ್ಟಿ ಕಟ್ಟಿ 10 ಹಾಡುಗಳನ್ನು ಕೀಬೋರ್ಡ್ ನೋಡದೇ ನುಡಿಸಿರುತ್ತಾಳೆ.