ನಾಳೆಯಿಂದ (ಜ.12) ನೀಟ್​-ಪಿಜಿ ಕೌನ್ಸಿಲಿಂಗ್, ವಿದ್ಯಾರ್ಥಿಗಳೇ ಈ ದಾಖಲೆಗಳನ್ನ ಮರೆತು ಹೋಗದಿರಿ! * ನಾಳೆಯಿಂದ (ಜ.12) ನೀಟ್​-ಪಿಜಿ ಕೌನ್ಸಿಲಿಂಗ್ ಆರಂಭ* ಕೌನ್ಸಿಲಿಂಗ್ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವ* ಕೌನ್ಸಿಲಿಂಗ್​ಗೆ ಬೇಕಾಗುವ ದಾಖಲೆಗಳು ಇಲ್ಲಿವೆ ನವದೆಹಲಿ, (ಜ.11):2021-2022 ನೇ ಶೈಕ್ಷಣಿಕ ವರ್ಷದ ನೀಟ್​-ಪಿಜಿ (-) ಕೌನ್ಸಿಲಿಂಗ್​ ನಾಳೆಯಿಂದ (ಜ.12) ಪ್ರಾರಂಭವಾಗಲಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ( ) ಮಾಹಿತಿ ನೀಡಿದ್ದಾರೆ. ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಕೌನ್ಸಿಲಿಂಗ್ ನಡೆಯಲಿದ್ದು, ವೈದ್ಯಕೀಯ ಕೌನ್ಸಿಲಿಂಗ್ ಸಮಿತಿ ಕೌನ್ಸಿಲಿಂಗ್ ನಡೆಸಲಿದೆ. ಇನ್ನು ನೀಟ್ ಪರೀಕ್ಷೆ ಬರೆದು ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಲು ಸಿದ್ಧರಾಗಿಯಾಗಿದ್ದಾರೆ. - : ಜನವರಿ 12 ರಿಂದ ಕೌನ್ಸೆಲಿಂಗ್ ಪ್ರಾರಂಭ, ಆರೋಗ್ಯ ಸಚಿವರ ಘೋಷಣೆ! ನೀಟ್ ಸ್ನಾತಕೋತ್ತರ ಕೌನ್ಸಿಲಿಂಗ್ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​​ ವಿಚಾರಣೆ ನಡೆಸುತ್ತಿತ್ತು. ಶುಕ್ರವಾರ ತೀರ್ಪು ಹೊರಹಾಕಿದ್ದ ಸುಪ್ರೀಂಕೋರ್ಟ್​, ಸದ್ಯ ಇರುವಂತೆ ಆಲ್​ ಇಂಡಿಯಾ ಕೋಟಾ ಸೀಟ್​​ಗಳಲ್ಲಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಶೇ.27 ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ () ಶೇ.10ರಂತೆ ಮೀಸಲಾತಿ ಇರಬೇಕು ಎಂದು ಹೇಳಿ, ನೀಟ್​ ಪಿಜಿ ಕೌನ್ಸಿಲಿಂಗ್​​ ಪ್ರಾರಂಭಕ್ಕೆ ಅನುವು ಮಾಡಿಕೊಟ್ಟಿತ್ತು. ಅದಾದ ಎರಡೇ ದಿನದಲ್ಲಿ ಆರೋಗ್ಯ ಸಚಿವರು ಟ್ವೀಟ್​ ಮಾಡಿ, ನೀಟ್​ ಪಿಜಿ ಕೌನ್ಸಿಲಿಂಗ್​​ ದಿನಾಂಕ ಘೋಷಣೆ ಮಾಡಿದ್ದರು. ನೀಟ್​ ಪಿಜಿ ಕೌನ್ಸಿಲಿಂಗ್​​ನಲ್ಲಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ದೇಶಾದ್ಯಂತ ಹಲವು ರೆಸಿಡೆಂಟ್​ ವೈದ್ಯರು ಪ್ರತಿಭಟನೆ ನಡೆಸುದ್ದರು. ಇತ್ತೀಚೆಗಷ್ಟೇ ಆರೋಗ್ಯ ಇಲಾಖೆ ನೀಡಿದ ಭರವಸೆ ಮೇರೆಗೆ ಅವರು ಪ್ರತಿಭಟನೆ ಕೈಬಿಟ್ಟಿದ್ದರು.ಎಂಎ ಇದೀಗ ಕೌನ್ಸಿಲಿಂಗ್​ ದಿನಾಂಕ ಪ್ರಕಟವಾಗಿದ್ದು ಅವರಿಗೆ ಅನುಕೂಲವಾಗಲಿದೆ. ಸುಪ್ರೀಂಕೋರ್ಟ್​ ಆದೇಶವನ್ನು ಗೌರವಿಸಲಾಗುತ್ತದೆ. ಜನವರಿ 12ರಿಂದ ಕೌನ್ಸಿಲಿಂಗ್ ನಡೆಸುವುದಾಗಿ ಆರೋಗ್ಯ ಸಚಿವಾಲಯ ರೆಸಿಡೆಂಟ್​ ವೈದ್ಯರಿಗೆ ಭರವಸೆ ನೀಡುತ್ತಿದೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಟದಲ್ಲಿ ದೇಶಕ್ಕೆ ಇನ್ನಷ್ಟು ಶಕ್ತಿ ತುಂಬಲಾಗುವುದು ಎಂದು ತಿಳಿಸಿದ್ದಾರೆ. ಹಾಗೇ, ಕೌನ್ಸಿಲಿಂಗ್​​ ಎದುರಿಸಬೇಕಾದ ಎಲ್ಲ ಅಭ್ಯರ್ಥಿಗಳಿಗೆ ಶುಭಾಶಯ ಎಂದು ಸಚಿವ ಮನ್​ಸುಖ್​ ಮಾಂಡವಿಯಾ ಟ್ವೀಟ್ ಮಾಡಿದ್ದರು. ಕೌನ್ಸಿಲಿಂಗ್​ಗೆ ಬೇಕಾಗುವ ದಾಖಲೆಗಳೇನು?ಪ್ರಸಕ್ತ ವರ್ಷ ನೀಟ್​ ಪಿಜಿ ಕೌನ್ಸಿಲಿಂಗ್, ಆನ್​ಲೈನ್ ವಿಧಾನದಲ್ಲಿ​ ನಾಲ್ಕು ಸುತ್ತುಗಳಲ್ಲಿ ನಡೆಯಲಿದೆ ಎಂದು ಈ ಹಿಂದೆಯೇ ವೈದ್ಯಕೀಯ ಕೌನ್ಸಿಲಿಂಗ್​ ಸಮಿತಿ () ಘೋಷಣೆ ಮಾಡಿದೆ. ಇನ್ನು ನೀಟ್​ ಕೌನ್ಸಿಲಿಂಗ್​ಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕೆಲ ದಾಖಲೆಗಳು ಬೇಕಾಗುತ್ತದೆ, ಅವು ಈ ಕೆಳಗಿನಂತಿವೆ.1) 2021 ನೀಟ್​ ಪರೀಕ್ಷೆಯ ಪ್ರವೇಶ ಪತ್ರ2)2021ನೇ ನೀಟ್ ಪರೀಕ್ಷೆಯ ಫಲಿತಾಂಶ ಪಟ್ಟಿ, ಯಾವುದೇ ರ್ಯಾಂಕ್​ ಬಂದಿದ್ದರೆ ಅದರ ಕಾರ್ಡ್​3)10ನೇ ತರಗತಿ ಪಾಸ್​ ಆಗಿರುವ ಪ್ರಮಾಣ ಪತ್ರ4)12ನೇ ತರಗತಿ ಉತ್ತೀರ್ಣವಾಗಿರುವ ಸರ್ಟಿಫಿಕೇಟ್​ 5)ಸರ್ಕಾರ ಮಾನ್ಯ ಮಾಡಿರುವ ಐಡಿ ಕಾರ್ಡ್​ 6)ಪಾಸ್​ಪೋರ್ಟ್​ ಸೈಝ್​ ಫೋಟೋ 7)ಎಂಬಿಬಿಎಸ್​, ಬಿಡಿಎಸ್​ ಅಂಕಪಟ್ಟಿ8)ಜಾತಿ ಪ್ರಮಾಣ ಪತ್ರ9)ಇಂಟರ್ನ್​ಶಿಪ್​ ಲೆಟರ್​10)ಎಂಸಿಐನಿಂದ ನೀಡಲಾದ ನೋಂದಣಿ ಸರ್ಟಿಫಿಕೇಟ್​. ಅಖಿಲ ಭಾರತ ಕೋಟಾದಲ್ಲಿ ಇಡಬ್ಲ್ಯೂಎಸ್ ಕೋಟಾವನ್ನು ನಿರ್ಧರಿಸುವ ಮಾನದಂಡವನ್ನು ಮರುಪರಿಶೀಲಿಸುವ ಕೇಂದ್ರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ ನಂತರ ನೀಟ್ ಪಿಜಿ ಕೌನ್ಸೆಲಿಂಗ್ ವಿಳಂಬವಾಗಿತ್ತು. ಈ ಕುರಿತಂತೆ ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ​​(ಫೋರ್ಡಾ) ಬ್ಯಾನರ್ ಅಡಿಯಲ್ಲಿ ವಿವಿಧ ಆಸ್ಪತ್ರೆಗಳ ವೈದ್ಯರು ಕೌನ್ಸೆಲಿಂಗ್ ನಲ್ಲಿ ವಿಳಂಬವನ್ನು ವಿರೋಧಿಸಿದ್ದರು. , : ಡಾಕ್ಟರ್‌ ಗಳಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್!ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋರ್ಡಾ) ಪ್ರತಿ ವರ್ಷ ಸರಿಸುಮಾರು 45,000 ಅಭ್ಯರ್ಥಿಗಳು - ಮೂಲಕ ಸ್ನಾತಕೋತ್ತರ () ವೈದ್ಯರಾಗಿ ಆಯ್ಕೆಯಾಗುತ್ತಾರೆ ಮತ್ತು ಕೌನ್ಸೆಲಿಂಗ್‌ನಲ್ಲಿ ವಿಳಂಬ ಮಾಡುವುದರಿಂದ 2021ರಲ್ಲಿ ಯಾವುದೇ ಕಿರಿಯ ವೈದ್ಯರನ್ನು ಸೇರಿಸಿಕೊಳ್ಳಲಾಗದ ಸ್ಥಿತಿಗೆ ತಲುಪುತ್ತೇವೆ ಎಂದು ಹೇಳಿತ್ತು.