| ಹೊಸ ಸರ್ಕಾರಿ ಮೆಡಿಕಲ್‌ ಕಾಲೇಜು ಪ್ರವೇಶಾತಿಗೆ ಅನುಮತಿ ನಿರಾಕರಣೆ * ಈ ವರ್ಷ ಎಂಬಿಬಿಎಸ್‌ ಪ್ರವೇಶಕ್ಕೆ ಅನುಮತಿ ಇಲ್ಲ* ಕೆಲವೆಡೆ ಕಟ್ಟಡಗಳ ಅಪೂರ್ಣಗೊಂಡ ಮೆಡಿಕಲ್‌ ಕಾಲೇಜುಗಳು* ವಿದ್ಯಾರ್ಥಿಗಳ ಕೈತಪ್ಪಿದ ಸರ್ಕಾರಿ ಕೋಟಾದಡಿ ಸೀಟು ಯಾದಗಿರಿ(ನ.18):ಹಾವೇರಿ(), ಚಿಕ್ಕಬಳ್ಳಾಪುರ(), ಚಿಕ್ಕಮಗಳೂರು() ಹಾಗೂ ಯಾದಗಿರಿ() ಈ ನಾಲ್ಕು ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ( ) ಈ ಶೈಕ್ಷಣಿಕ ವರ್ಷದಿಂದಲೇ ಎಂಬಿಬಿಎಸ್‌ ಪ್ರವೇಶಾತಿಗೆ ನ್ಯಾಶನಲ್‌ ಮೆಡಿಕಲ್‌ ಕಮಿಷನ್‌ ಅನುಮತಿ ನಿರಾಕರಿಸಿದೆ. ಪರಿಶೀಲನೆಗೆಂದು ದೆಹಲಿಯಿಂದ ಆಗಸ್ಟ್‌ನಲ್ಲಿ ಆಗಮಿಸಿದ್ದ ನ್ಯಾಶನಲ್‌ ಮೆಡಿಕಲ್‌ ಕಮೀಷನ್‌( ) ತಂಡದ ಅಧಿಕಾರಿಗಳು, ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ, ಬೋಧಕ ಹಾಗೂ ಬೋಧಕೇತರರ ನೇಮಕಾತಿ() ಇನ್ನೂ ಆಗದಿರುವುದು ಹಾಗೂ ಕೆಲವೆಡೆ ಕಟ್ಟಡಗಳ ಅಪೂರ್ಣಗೊಂಡ ಮೆಡಿಕಲ್‌ ಕಾಲೇಜುಗಳ ಸ್ಥಿತಿಗತಿಯಿಂದಾಗಿ ಈ ನಾಲ್ಕೂ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಈ ಶೈಕ್ಷಣಿಕ ವರ್ಷದ ಎಂಬಿಬಿಎಸ್‌() ಪ್ರವೇಶಕ್ಕೆ() ಅನುಮತಿ ನಿರಾಕರಿಸಿದ್ದಾರೆ. ‘ಕನ್ನಡಪ್ರಭ’ ಪ್ರಕಟಿಸಿದ ಸರಣಿ ವರದಿ ಎಫೆಕ್ಟ್: ಮೆಡಿಕಲ್‌ ಕಾಲೇಜಿಗೆ ಸಿಎಂ ಶಿಲಾನ್ಯಾಸ ಇದರಿಂದಾಗಿ 150 ಸೀಟುಗಳ ಪ್ರತಿ ಮೆಡಿಕಲ್‌ ಕಾಲೇಜಿನಂತೆ, ಒಟ್ಟು ನಾಲ್ಕು ಮೆಡಿಕಲ್‌ ಕಾಲೇಜುಗಳಲ್ಲಿನ( ) 600 ಸೀಟುಗಳು ಸರ್ಕಾರಿ ಕೋಟಾದಡಿ ವಿದ್ಯಾರ್ಥಿಗಳ ಕೈತಪ್ಪಿದಂತಾಗಿದೆ. ಯಾದಗಿರಿ ಜಿಲ್ಲೆಯನ್ನಾಗಿ ಘೋಷಿಸಿದ್ದ ಮಾಜಿ ಸಿಎಂ ಬಿಎಸ್‌ವೈ, ಯಾದಗಿರಿಯಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಹಸಿರು ನಿಶಾನೆ ತೋರಿ, ವಿಶೇಷ ಅಧಿಕಾರಿ ನೇಮಿಸಿದ್ದರು. ಮುದ್ನಾಳ್‌ ರಸ್ತೆಯಲ್ಲಿ ಇದಕ್ಕೆಂದು ಮೊದಲು 30 ಎಕರೆ ನಂತರ 40 ಎಕರೆ ಜಾಗ ನೀಡಲಾಗಿದ್ದು, 305 ಕೋಟಿ ರು.ಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಎನ್‌.ಎಂ.ಸಿ. ತಂಡ ಬಂದಾಗ ತಾತ್ಕಾಲಿಕವಾಗಿ ತೋರಿಸಿದ್ದ ವಸತಿ ನಿಲಯದ ಕಟ್ಟಡ ಹಾಗೂ ನೇಮಕಾತಿ ವಿಳಂಬ ಈ ಹಿನ್ನೆಡೆಗೆ ಕಾರಣ ಎನ್ನಲಾಗಿದೆ.ಹೌದು, ನ್ಯಾಶನಲ್‌ ಮೆಡಿಕಲ್‌ ಕಮೀಷನ್‌ ಈ ವರ್ಷ ಯಾದಗಿರಿ, ಹಾವೇರಿ, ಚಿಕ್ಕಮಗಳೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ಎಂಬಿಬಿಎಸ್‌ ಪ್ರವೇಶಾತಿಗೆ ಅನುಮತಿ ನೀಡಿಲ್ಲ. ಆದರೂ ಸರ್ಕಾರದ ಮಟ್ಟದಲ್ಲಿ ಅನುಮತಿಗೆ ಪ್ರಯತ್ನ ಮಾಡುತ್ತಿದ್ದೇವೆ ಅಂತ ಯಾದಗಿರಿ ಯಿಮ್ಸ್‌ ವಿಶೇಷ ಅಧಿಕಾರಿ ಡಾ. ಶಂಕರಗೌಡ ಐರೆಡ್ಡಿ ತಿಳಿಸಿದ್ದಾರೆ. ನನಸಾದ ಯಾದಗಿರಿ ಮೆಡಿಕಲ್‌ ಕಾಲೇಜು ಕನಸು ಯಾದಗಿರಿ ಮೆಡಿಕಲ್‌ ಕನಸು ಇದೀಗ ನನಸಾಗುವ ಹೊತ್ತು ಮತ್ತಷ್ಟೂ ಸಮೀಪಿಸಿದೆ. ಭವಿಷ್ಯದಲ್ಲಿ ಜಿಲ್ಲೆಯ ಜನರ ಆರೋಗ್ಯ, ಶಿಕ್ಷಣ, ಆರ್ಥಿಕ ಸೇರಿದಂತೆ ವಿವಿಧ ಆಯಾಮಗಳಲ್ಲಿನ ಸ್ಥಿತಿಗತಿಗಳ ಸುಧಾರಣೆಗೆ ಇದು ನಾಂದಿಯಾಗಲಿದೆ.2020 ರ ಸೆಪ್ಟೆಂಬರ್‌ನಲ್ಲಿ ಅಂದಿನ ಯಡಿಯೂರಪ್ಪ( ) ಸರ್ಕಾರ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸುಸಜ್ಜಿತವಾಗಿ ಕಾರ್ಯನಿರ್ವಹಿಸಲು ಪರಿಷ್ಕೃತ 309 ಕೋಟಿ ರು.ಗೆ ಅನುಮೋದನೆ ನೀಡಿತ್ತು. ರಾಜ್ಯದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ() ವೈದ್ಯಕೀಯ ಶಿಕ್ಷಣದಲ್ಲಿ( ) ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ಸರ್ಕಾರ ವೈದ್ಯಕೀಯ ಕಾಲೇಜು ಇರದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ತರಲು ನಿರ್ಧರಿಸಿದ್ದು, ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಭು ಚವ್ಹಾಣ್‌( ) ಸಂತಸ ವ್ಯಕ್ತಪಡಿಸಿದ್ದರು. ಯಿಮ್ಸ್‌() 150 ಸೀಟುಗಳ ಪ್ರವೇಶವುಳ್ಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಎಂಬ ಹೆಸರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಆರಂಭವಾಗಲಿದೆ ಎಂದು ಹೇಳಲಾಗಿತ್ತು. ಈ ಭಾಗದಲ್ಲಿ ವೈದ್ಯಕೀಯ ಕಾಲೇಜು ಅವಶ್ಯಕವಾಗಿತ್ತು. ಜನರ ಆರೋಗ್ಯದ ದೃಷ್ಟಿಯಿಂದ ನಮ್ಮ ಸರ್ಕಾರ ಪ್ರತಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ನೀಡುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದರು. ಯಾದಗಿರಿ ಮೆಡಿಕಲ್ ಕಾಲೇಜು: ಸುವರ್ಣನ್ಯೂಸ್-ಕನ್ನಡಪ್ರಭ ಅಭಿಯಾನಕ್ಕೆ ವ್ಯಾಪಕ ಬೆಂಬಲ ಮೆಡಿಕಲ್‌ ಕಾಲೇಜು ನಿರ್ಮಾಣ ಚಳವಳಿ: ಮಾಜಿ ಸಿಎಂ ಸಿದ್ದರಾಮಯ್ಯ() ಅವಧಿಯಲ್ಲಿ ಜಿಲ್ಲೆಗೆ ಮೆಡಿಕಲ್‌ ಕಾಲೇಜು ಮಂಜೂರಾಗಿತ್ತು. ಆದರೆ, ಎಂಸಿಐ ತಂಡ ಇಲ್ಲಿಗೆ ಆಗಮಿಸಿದ್ದಾಗ, ಕಾಲೇಜು ಸೂಕ್ತ ಕಟ್ಟಡ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ರದ್ದಾಗಿತ್ತು. ಮೂಲಸೌಕರ್ಯ ಇಲ್ಲದಿರುವುದು ಅಷ್ಟೇ ಅಲ್ಲ, ಕಾಲೇಜಿಗೆ ತೆರಳಲು ರಸ್ತೆಯೇ ಇಲ್ಲದಿರುವುದನ್ನು ಕಂಡು ಎಂಸಿಐ ತಂಡ ಅನುಮತಿ ನಿರಾಕರಿಸಿತ್ತು. ರದ್ದಾದ ಮಾಹಿತಿ ಗೌಪ್ಯವಾಗಿಯೇ ಇಡಲಾಗಿತ್ತು. ಕನ್ನ​ಡ​ಪ್ರಭ ಸರಣಿ ವರ​ದಿ: ಮೆಡಿಕಲ್‌ ಕಾಲೇಜಿನ ಅವಶ್ಯಕತೆ ಹಾಗೂ ಅದರ ಉದ್ದೇಶಗಳ ಬಗ್ಗೆ ಕನ್ನಡಪ್ರಭ( ) ಕಳೆದ ಜೂನ್‌ನಲ್ಲಿ ಸರಣಿ ವರದಿಗಳ ಮೂಲಕ ಸರ್ಕಾರ ಹಾಗೂ ಜನರ ಗಮನ ಸೆಳೆದಿತ್ತು. ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಎಂಸಿಐ ಅನುಮತಿ ನಿರಾಕರಿಸಿದ್ದುದು, ಇದಕ್ಕೆ ಕಾರಣಗಳು, ಮೆಡಿಕಲ್‌ ಕಾಲೇಜಿನಿಂದ ಇಲ್ಲಿನ ಆರೋಗ್ಯ ಸ್ಥಿತಿ ಸುಧಾರಣೆ, ಶಿಕ್ಷಣ ಹಾಗೂ ಆರ್ಥಿಕ ಸ್ಥಿತಿಗತಿ ಸುಧಾರಿಸುವ ಬಗ್ಗೆ ಸರಣಿ ವರದಿಗಳಿಂದ ಕೊನೆಗೆ ಮೆಡಿಕಲ್‌ ಕಾಲೇಜು ನಿರ್ಮಾಣ ವಿಚಾರವಾಗಿ ಭಾರಿ ಚಳವಳಿ ರೂಪುಗೊಂಡಿದ್ದವು. ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ನೇತೃತ್ವದಲ್ಲಿ ಯಾದಗಿರಿ ಬಂದ್‌ ಕರೆಗೆ ಭಾರಿ ಸ್ಪಂದನೆ ಸಿಕ್ಕಿತ್ತು. ಸುರಪುರ ಶಾಸಕ ರಾಜೂಗೌಡ ಪ್ರತಿ ಬಾರಿ ಸಿಎಂಗೆ ಇದರ ಮನವರಿಕೆ ಮಾಡಿದ್ದರು.