ವಿದ್ಯಾರ್ಥಿನಿಯರಿಗೆ Googleನಿಂದ ಸ್ಕಾಲರ್‌ಶಿಪ್: ಇಲ್ಲಿದೆ ವಿವರ! *2022-2023 ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ವೇತನ*ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ನಲ್ಲಿ ದಾಖಲಾದವರಿಗೆ ಅವಕಾಶ*ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿರದವರಿಗೆ ಆದ್ಯತೆ ಅಮೆರಿಕಾ (ನ.7) : ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಜಗತ್ತಿನ ಸುಪ್ರಸಿದ್ಧ ಟೆಕ್-ದೈತ್ಯ ಗೂಗಲ್ ( ) ವಿದ್ಯಾರ್ಥಿ ವೇತನ ನೀಡುವ ಯೋಜನೆ ಆರಂಭಿಸಿದೆ. ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ( ) ವೃತ್ತಿಜೀವನವನ್ನು ಮುಂದುವರಿಸಲು ಬಯಸುವ ಮಹಿಳೆಯರಿಂದ ವಿದ್ಯಾರ್ಥಿವೇತನ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಜನರೇಷನ್ ಗೂಗಲ್ ಸ್ಕಾಲರ್‌ಶಿಪ್ ಫಾರ್‌ ವುಮೆನ್‌ ( ) ಇನ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ವೇತನವು ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಪದವಿಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ನೆರವಾಗಲಿದೆ. ವೈದ್ಯಕೀಯ ಕೋರ್ಸುಗಳ ಶುಲ್ಕ ಏರಿಕೆ..? ಸರ್ಕಾರದ ಮುಂದೆ ಪ್ರಸ್ತಾವನೆ ಆಯ್ಕೆಯಾದ ವಿದ್ಯಾರ್ಥಿಗಳು 2022-2023 ಶೈಕ್ಷಣಿಕ ವರ್ಷಕ್ಕೆ ಸುಮಾರು 75,000 ರೂ. ($1,000) ವಿದ್ಯಾರ್ಥಿ ವೇತನವನ್ನು ಪಡೆಯುತ್ತಾರೆ. ವಿದ್ಯಾರ್ಥಿಯ ಶೈಕ್ಷಣಿಕ ಕಾರ್ಯಕ್ಷಮತೆ ( ) ಆಧಾರದ ಮೇಲೆ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ. ಅರ್ಜಿದಾರರು 2021-2022 ಶೈಕ್ಷಣಿಕ ವರ್ಷಕ್ಕೆ ಸ್ನಾತಕ ಪದವಿಯಲ್ಲಿ (' ) ಪೂರ್ಣ ಸಮಯದ ( ) ವಿದ್ಯಾರ್ಥಿಯಾಗಿ ದಾಖಲಾಗಿರಬೇಕು ಮತ್ತು ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪೂರ್ಣಗೊಳಿಸುವಾಗ ಏಷ್ಯಾ ಪೆಸಿಫಿಕ್ ( ) ದೇಶದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಅಧ್ಯಯನದಲ್ಲಿರಬೇಕು. ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಜಿ ಹಾಕಬಹುದು? *2021-2022 ಶೈಕ್ಷಣಿಕ ವರ್ಷಕ್ಕೆ (2021-2022 ) ಸ್ನಾತಕ ಪದವಿಯಲ್ಲಿ ಪೂರ್ಣ ಸಮಯದ ವಿದ್ಯಾರ್ಥಿಯಾಗಿ ದಾಖಲಾಗಿರಬೇಕು*ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪೂರ್ಣಗೊಳಿಸುವಾಗ ಏಷ್ಯಾ ಪೆಸಿಫಿಕ್ ದೇಶದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಅಧ್ಯಯನದಲ್ಲಿರಬೇಕು.*ಕಂಪ್ಯೂಟರ್‌ ಸೈನ್ಸ್‌, ಕಂಪ್ಯೂಟರ್‌ ಇಂಜೀನಿಯರಿಂಗ್ () ಅಥವಾ ಕಂಪ್ಯೂಟರ್‌ ಕ್ಷೇತ್ರಕ್ಕೆ ಸಂಬಂಧಪಟ್ಟ ಪದವಿ ಕೋರ್ಸ್‌ಗಳಲ್ಲಿ ದಾಖಲಾಗಿರಬೇಕು*ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿರಬೇಕು ಹಾಗೂ ಶಾಲಾ-ಕಾಲೇಜು ಪರೀಕ್ಷೆಗಳಲ್ಲಿ ಕೂಡ ಅತ್ಯುತ್ತಮ ಪ್ರದರ್ಶನ ನೀಡಿರಬೇಕು*ಉತ್ತಮ ನಾಯಕತ್ವ ಗುಣ ಮತ್ತು ಕಂಪ್ಯೂಟರ್‌ ವಿಜ್ಞಾನ ಕ್ಷೇತ್ರದಲ್ಲಿ ಹಿಂದುಳಿದಿರುವವರಿಗೆ ಬೆಂಬಲವಾಗಿ ನಿಲ್ಲಬಲ್ಲ ಇಚ್ಛಾಶಕ್ತಿ ಹೊಂದಿರಬೇಕು. ಅರ್ಜಿ ಹಾಕುವುದು ಹೇಗೆ? ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಈ ದಾಖಲೆಗಳನ್ನು ನೀಡುವ ಮೂಲಕ ಗೂಗಲ್‌ನ ಅಧಿಕೃತ ವೆಬ್‌ಸೈಟ್ನಲ್ಲಿ () ಅರ್ಜಿ ಸಲ್ಲಿಸಬಹುದು *ಅಭ್ಯರ್ಥಿಯ ಬಗೆಗಿನ ಸಾಮಾನ್ಯ ಮಾಹಿತಿ ( ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜು, ಮನೆ ವಿಳಾಸ ಮತ್ತು ಇತರ ಮಾಹಿತಿ)*ಅಭ್ಯರ್ಥಿಯು ಈವರೆಗೂ ಭಾಗವಹಿಸಿರುವ ಪ್ರೋಜೆಕ್ಟ () ಬಗ್ಗೆ ಮಾಹಿತಿ ಜತೆಗೆ ರೆಸ್ಯೂಮೆ ()*ಈಗ ವಿದ್ಯಾಭ್ಯಾಸ ಮಾಡುತ್ತಿರುವ ಸಂಸ್ಥೆ ಮತ್ತು ಈ ಹಿಂದೆ ಕಲಿತ ಕಾಲೇಜುಗಳ ಅಂಕ ಪಟ್ಟಿ ( ) ಪರೀಕ್ಷೆಯಲ್ಲಿ ಪುತ್ತೂರಿನ ಸಿಂಚನಾ ಲಕ್ಷ್ಮೀ ಸಾಧನೆ, ರಾಘವೇಶ್ವರ ಶ್ರೀಗಳಿಂದ ಸನ್ಮಾನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕುವ ಅಭ್ಯರ್ಥಿಗಳು ಗೂಗಲ್‌ ಕೇಳುವ ಎರಡು ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಈ ಹಂತದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಗೂಗಲ್‌ ಮೀಟ್‌ ( ) ಮೂಲಕ 15 ನಿಮಿಷದ ಸಂದರ್ಶನದಲ್ಲಿ ಭಾಗವಹಿಸಬೇಕು. ಜತೆಗೆ ಗೂಗಲ್‌ ಆನಲೈನ್‌ ಚಾಲೆಂಜ್‌ನ್ನು ( ) ಕೂಡ ಪೂರ್ಣಗೊಳಿಸಬೇಕು. ಅರ್ಜಿ ಸಲ್ಲಿಸಿದ 5 ರಿಂದ 7 ದಿನಗಳ ಒಳಗಾಗಿ ಈ ಚಾಲೆಂಜ್‌ ಅನ್ನು ಅಭ್ಯರ್ಥಿಗಳಿಗೆ ಕಳುಹಿಸಿ ಕೊಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ( ) ದಿನಾಂಕ ಡಿಸೆಂಬರ್ 10‌, ಶುಕ್ರವಾರ ಎಂದು ಗೂಗಲ್‌ ತಿಳಿಸಿದೆ. ಹಾಗಾಗಿ ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 10, 2021 ರ ಮೊದಲು ' ..//--- ' ನಲ್ಲಿ ಅರ್ಜಿ ಸಲ್ಲಿಸಬಹದು. ಈ ಎಲ್ಲ ಹಂತಗಳನ್ನು ದಾಟಿ ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಗೂಗಲ್‌ ಸ್ಕಾಲರ್‌ಶಿಪ್ ಸಿಗಲಿದೆ.