ಉಡುಪಿ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಇನ್ನೋವೇಶನ್‌ ಸ್ಪರ್ಧೆಯಲ್ಲಿ 4ನೇ ಸ್ಥಾನ * ಸಿಎಸ್‌ಐಆರ್‌ ಅಂತಿಮ ಸುತ್ತಿಗೆ ಹೋದ ಏಕೈಕ ಸರ್ಕಾರಿ ಶಾಲೆ* ಪ್ರಶಸ್ತಿ ನೀಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು* ಸಿಎಸ್‌ಐಆರ್‌ ರಾಷ್ಟ್ರಪ್ರಶಸ್ತಿ ಪಡೆದ ದೇಶದ ಏಕೈಕ ಸರ್ಕಾರಿ ಶಾಲೆ ಉಡುಪಿ(ಸೆ.27):ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌)ಯು ನಡೆಸಿದ್ದ ರಾಷ್ಟ್ರಮಟ್ಟದ ಇನ್ನೊವೇಶನ್‌ ಅವಾರ್ಡ್‌ ಫಾರ್‌ ಸ್ಕೂಲ್‌ ಚಿಲ್ಡ್ರನ್ಸ್‌-2021ರಲ್ಲಿ ಉಡುಪಿ() ಜಿಲ್ಲೆಯ ಅಲ್ಬಾಡಿ ಆರ್ಡಿ ಗ್ರಾಮದ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ನಾಲ್ಕನೇ ಸ್ಥಾನ ಪಡೆದಿದ್ದು, ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಈ ಶಾಲೆಯ ವಿದ್ಯಾರ್ಥಿನಿಯರಾದ ಅನುಷಾ ಹಾಗೂ ರಕ್ಷಿತಾ ನಾಯ್ಕ ಅವರಿಗೆ ಭಾನುವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು( ) ಅವರು ವರ್ಚುವಲ್‌ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್‌, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. : ದೇಶಕ್ಕೆ ರಾಜ್ಯದ ವೀರೇಶ್‌ ಪ್ರಥಮ ಚಾರ್ಮಕ್ಕಿ ನಾರಾಯಣ ಶೆಟ್ಟಿ ಶಾಲೆಯು ಸಿಎಸ್‌ಐಆರ್‌ ರಾಷ್ಟ್ರಪ್ರಶಸ್ತಿ ಪಡೆದ ದೇಶದ ಏಕೈಕ ಸರ್ಕಾರಿ ಶಾಲೆಯಾಗಿದೆ.( ) ಚಾರ್ಮಕ್ಕೆ ಶಾಲೆಯು ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ ಕರ್ನಾಟಕದ ಏಕೈಕ ಸಂಸ್ಥೆ. ಅನುಷಾ ಮತ್ತು ರಕ್ಷಿತಾ ಅವರು ಅಡುವೆ ಅನಿಲ ಉಳಿಸುವ ‘ಗ್ಯಾಸ್‌ ಸೇವಿಂಗ್‌ ಕಿಟ್‌’ ತಯಾರಿಸಿದ್ದರು. ವಿಜ್ಞಾನ ಶಿಕ್ಷಿಕಿ ವೈಶಾಲಿ ರಾವ್‌ ಮಾರ್ಗದರ್ಶನದಲ್ಲಿ ಸಂಶೋಧಿಸಿದ ಈ ಕಿಟ್‌ಗೆ .600 ವೆಚ್ಚ ತಗಲಿದೆ. ತಾಮ್ರದ ಸುರುಳಿಯಾಕಾರ ಪೈಪನ್ನು ಗ್ಯಾಸ್‌ ಸ್ಟೌಬರ್ನರ್‌ಗೆ ಅಳವಡಿಸಿದರೆ, ಅನ್ನ ತಯಾರಾಗುವಷ್ಟರಲ್ಲಿ, ಈ ಸುರಳಿಯಲ್ಲಿ ನಾಲ್ಕು ಮಂದಿಗೆ ಸ್ನಾನಕ್ಕೆ ಬೇಕಾಗುವಷ್ಟುನೀರು ಬಿಸಿಯಾಗಿ ಲಭಿಸುತ್ತದೆ. ಶಾಲೆಯ ಸಾಧನೆ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ( ) ಅವರೊಂದಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕಾಗಿ ಈ ಶಾಲೆಯ ವಿದ್ಯಾರ್ಥಿಗಳು ರಚಿಸಿದ್ದ ಪ್ರೋಮೋ ವಿಡಿಯೋ ಕೂಡಾ ಆಯ್ಕೆಯಾಗಿತ್ತು. ಮೋದಿ ಅವರೊಂದಿಗೆ ಸಂವಾದಕ್ಕೆ ಅನುಷಾ ಆಯ್ಕೆಯಾಗಿದ್ದರು.