ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟಿಸಿದ ಸಚಿವ, ಎಲ್ಲ ವಿದ್ಯಾರ್ಥಿಗಳೂ ಪಾಸ್ * ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ* ಕೊರೋನಾ ಭೀತಿಯಿಂದ ರದ್ದು ಮಾಡಲಾಗಿದ್ದ ಪರೀಕ್ಷೆ* ಎಸ್‌ಎಸ್‌ಎಲ್‌ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ಪಿಯುಸಿ ರಿಸಲ್ಟ್ ಬೆಂಗಳೂರು, (ಜು.20):ಕೊರೋನಾ ಭೀತಿಯಿಂದ ರದ್ದು ಮಾಡಲಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗಿದ್ದು,ಎಲ್ಲ ವಿದ್ಯಾರ್ಥಿಗಳೂ ಪಾಸ್ ಆಗಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂದು (ಮಂಗಳವಾರ) ಪರೀಕ್ಷೆ ಇಲ್ಲದ ಫಲಿತಾಂಶವನ್ನು ಪ್ರಕಟಿಸಿದರು. " ದ್ವಿತೀಯ ಫೇಲಾದವರಿಗೆ ಸಿಹಿ ಸುದ್ದಿ: ಹೈಕೋರ್ಟ್‌ಗೆ ಮಹತ್ವದ ಅಭಿಪ್ರಾಯ ತಿಳಿಸಿದ ಸರ್ಕಾರ ಎಸ್‌ಎಸ್‌ಎಲ್‌ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ಪಿಯುಸಿ ರಿಸಲ್ಟ್ ನೀಡಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಅಂದ್ರ ಒಟ್ಟು 6,66,497 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಈ ಪೈಕಿ 3,35138 ಬಾಲಕರು ಹಾಗೂ 1,47055 ಬಾಲಕೀಯರು ಉತ್ತೀರ್ಣರಾಗಿದ್ದಾರೆ. ಎಸ್.ಎಸ್.ಎಲ್.ಸಿ. ಹಾಗೂ ಪ್ರಥಮ ಪಿಯು ಹಾಗೂ ಆಂತರಿಕ ಅಂಕಗಳನ್ನು ಮೌಲ್ಯಾಂಕನ ಮಾಡಿ ಫಲಿತಾಂಶ ನೀಡಲಾಗಿದ್ದು, 4 ಲಕ್ಷದ 50 ಸಾವಿರ 706 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ನಲ್ಲಿ ತೇರ್ಗಡೆಯಾಗಿದ್ದಾರೆ. 1,95,650 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ರೆ, 147055 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನು 68729 ವಿದ್ಯಾರ್ಥಿಗಳು ಜಸ್ಟ್ ಪಾಸ್ ಆಗಿದ್ದಾರೆ. ಈಗ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಇಲಾಖೆ ವೆಬ್​ಸೈಟ್... ​ನಲ್ಲಿ ನೋಡಬಹುದಾಗಿದೆ.